ಸಾವಯವವೆಂದೊಡದು ಪರ್‍ಯಾಯನಾಮ
ಸಹನೆಯೊಡಗೂಡಿ ತತ್ತ್ವ ಸಾಧನೆಗೆ
ಸಹನೆಯದು ಗೆಲು ಮನದ ಮರ್ಮ
ಸಾಧನೆಯು ತನುವಿನಾಶ್ರಿತ ಧರ್ಮ
ಸಾರ್ಥಕವು ತನುಮನಗಳೊಂದಾದ ಕರ್ಮ – ವಿಜ್ಞಾನೇಶ್ವರಾ
*****