ಖಯಾಲಿಗೆ ನನ್ನ ಎಲ್ಲವನ್ನು
ನಾನು ಒಪ್ಪಿಸಿದ್ದೇನೆ
ಖುಷಿಯಾಗುತ್ತದೆ,
ಎಲ್ಲವು ವರ್ಣಮಯ
ಸುಖಕರ ಕಾಣುತ್ತದೆ.
ವೇದನೆ, ಭಾವನೆ ಅದರಲ್ಲಿಯೆ
ಸರ್ವಕಾಲದ ಅಸ್ತಿಯಾಗಿದೆ.
ಅದು ಬದುಕಿನ ಜಂಜಡದಿಂದ
ದೂರವಿಡುವ
ಅಮಲಿನ ಮೈಮರೆಯಲ್ಲಿ
ಕರಗಿಸುವ ಸೆರೆಯಾಗಿದೆ.
ನೋವು-ನಲಿವು
ಮುಗಿಯದ ಪೇಚು
ಅದರಲ್ಲಿ ಸೇರಿಕೊಂಡು
ನನ್ನ ಬದುಕಿನ ಒಂದು
ಅಂಗವಾಗಿ ಬೆಸೆದು ಕೊಂಡಿದೆ.
ನನ್ನವಳು ಗೊಂಬೆಯಾಗಿ
ನೆರೆಯವಳು ರಂಬೆಯಾಗಿ
ಖಯಾಲಿನಲ್ಲಿ
ನನ್ನನ್ನು ರಂಜಿಸುತ್ತಾಳೆ.
ಖಯಾಲಿನ ಜೊತೆಗಿನ ನನ್ನ
ಸಂಬಂಧ ಅಥಾಹ ಆಳ
ಅರಿಯದ, ಕಾಣದ ನಿರಾಳ
ಇದರ ಕಡಿಯನ್ನು ಕಡಿಯದೆ
ನಿರಂತರತೆಯನ್ನು ಮುರಿಯದೆ
ನಿಶ್ಚಿಂತೆ ಇದ್ದ ಕಾಲವ ಕಳೆವ
ಬದುಕಿನ ವ್ಯಥೆಗಳನು ಮರೆವ
ಸಲುವಾಗಿ
ನನ್ನ ಎಲ್ಲವನು ಖಯಾಲಿನ
ವಶ ಒಪ್ಪಿಸಿದ್ದೇನೆ.
*****