ನೂರಾರು ನೆನಪುಗಳಲ್ಲಿ
ಹದಿನಾರು ಕನಸುಗಳು
ಒಡಲ ತಣಿವು ನೂರಲ್ಲಿ
ಭಾವನೆಗಳು ಸಾವಿರಾರು ||

ಆಸೆಗಳು ನೂರೆಂಟು
ಪಂಜರ ಗಿಣಿ ಹದಿನೆಂಟು
ಹಾರುವುದು ಮೌನವಾಗಿ
ಜೀವನವೂ ಹಸಿರಾಗಿ ||

ಸಾವಿರದ ಪ್ರಾಯ ಹಾದೀ
ಬಾಳು ಬದುಕು ಸವಿದಂತೆ
ನೋವ ಮರೆತು ಸಂತೆಯಲಿ
ನಡೆ ನೀನು ಮುಂದೆ ಮುಂದೆಽಽಽ ||

ಯಾರಿಗೂ ಯಾರೂ ಬೇರಿಲ್ಲಾ
ಇಲ್ಲಿ ತನ್ನದೇ ಮನದ ಗೂಡು
ಕಳೆದ ಸುಖಸ್ವಪ್ನ ಬಲ್ಲವರೇ
ಎಲ್ಲಾ ತಮ್ಮವರೇ ಎಲ್ಲಾ ||

ಮಲ್ಲಿಗೆ ಹೊಸಗೆಯ ಇಬ್ಬನಿ
ಹೊನ್ನಂತೆ ಕಿನ್ ನುಡಿಯ ಹಾಡು
ಸಾಲು ಮೂರು ನಾಲ್ಕು ಐದರ
ಭಾಜ್ಯದ ಕಂತೆ ಇರು ನೀನು ನಿಶ್ಚೆಂತೆ !!
*****