ಮಹಾಮನೆ

“ಸಂಸಾರದ ಸಾರಾಂಶವನ್ನೂ ಕ್ಷಣಭಂಗುರತೆಯನ್ನೂ ಕೇಳಿಕೊಂಡ ಬಳಿಕ ಅನೇಕ ಜೀವಿಗಳು ಮನೆಯನ್ನೂ ಮಡದಿಮಕ್ಕಳನ್ನೂ ತೊರೆದುಹೋಗಿ ತಮ್ಮ ಬಾಳಿನ ನೆಲೆಯನ್ನು ಕಾಣುವುದಕ್ಕೆ ಕಷ್ಟಪಟ್ಟ ಉದಾಹರಣೆಗಳು
ನಮ್ಮ ಕಣ್ಣ ಮುಂದೆ ಬರುವವು. ಆದುದರಿಂದ ಮನೆವಾರ್ತೆಯ ಸಂಬಂಧವು ನಮಗೆಷ್ಟು ಎ೦ಬ ವಿಷಯವನ್ನು ಕುರಿತು ನಾಲ್ಕುನುಡಿಗಳನ್ನು ಕೇಳಬೇಕೆ೦ದಿರುವೆವು” ಎಂಬ ಕುತೂಹಲವು ಕಂಡು ಬ೦ದಿತು.

ಸಂಗನುಶರಣನು ಜಗಜ್ಜನನಿಗೆ ಮನದಲ್ಲಿಯೇ ವಂದನೆಗಳನ್ನು ಅರ್ಪಿಸಿ ತನ್ನ ಕರ್ತವ್ಯಕ್ಕೆ ತೊಡಗುವನು.-

“ಮನೆವಾರ್ತೆಯ ವಿಷಯವು ಅವರವರು ಇರಿಸಿಕೊಂಡ ಗುರಿಯ ಎತ್ತರವನ್ನು ಅವಲ೦ಬಿಸಿರುತ್ತದೆ.

ಮನೆ ಒಮ್ಮೆ ಸಾಧನಾಲಯನೇ ಆಗಿಬಿಡಬಹುದು. ಇನ್ನೊಮ್ಮೆ ಅದೇ ಮನೆಯು ಸಾಧನಕ್ಕೆ ಪ್ರತಿಕೂಲ ಪರಿಸ್ಥಿತಿಯಾಗಿಯೂ  ನಿಲ್ಲಬಹುದು.

ಅನುಕೂಲ ಮನೆನಾರ್ತೆಯಿದ್ದವರೂ ತಮ್ಮದೊ೦ದು ವಿಶಿಷ್ಟ ಸಾಧನೆಯ ಸಲುವಾಗಿ ಅರಣ್ಯವನ್ನು ಸೇರುವದು೦ಟು.

ಅರಣ್ಯದಲ್ಲಿ ನಿಂತವರೆಲ್ಲ ಸಿದ್ಧಜೀವಿಗಳೇ ಆಗುವರೆಂಬ ಭರವಸೆಯೆಲ್ಲಿದೆ? ಅದರಂತೆ ಮನೆಯಲ್ಲಿ ಉಳಿದವರೆಲ್ಲರೂ ತಪ್ಪದೆ ಗುರಿ ಮುಟ್ಟುವರೆ೦ಬ ನಿಶ್ಚಯ ವದರೂ ಎಲ್ಲಿರುತ್ತದೆ?

ಬಾಗೇವಾಡಿಯಿ೦ದ ಹೊರಬೀಳುವಾಗ ಬಸವಣ್ಣ ಇನ್ನೂ ಎಳೆಯ; ಹಾಲುಗಲ್ಲದ ಹಸುಳೆ. ಆಂಥವನು ಹುಟ್ಟಿದ ಸ್ಥಳಬಿಟ್ಟು ಎಲ್ಲಿಗೋ….ಅದೆಲ್ಲಿಗೋ ಹೊರಡುವನೆಂದರೆ ಅದೇನು ಸಾಮಾನ್ಯವಾದ ಸಾಹಸವೇ? ಅವನನ್ನು ಬ೦ಧು-ಬಳಗಗಳ ಮಮತೆ ಹಿ೦ದೆಳೆಯಲಿಲ್ಲ; ಬದುಕು-ಒಡವೆಗಳು ಆತನ ದಾರಿಯನ್ನು ಅಡ್ಡಯಿಸಲಿಲ್ಲ; ವಂಶಪ್ರೀತಿಯು ತರುಬಿ ತಡೆಗಟ್ಟಿ ನಿಲ್ಲಿಸಲಿಲ್ಲ.

ಭಯಾನಕನಾದ ಮರಣವನ್ನು ಅಪ್ಪಿಕೊಳ್ಳಲು ಆನಂದದಿಂದ ಸಿದ್ಧನಾದವನಿಗೆ. ಬಾಳಿನ ಸೌಕರ್ಯಗಳೆಲ್ಲ ಮರಣಕ್ಕಿಂತಲೂ ಭೀಕರವಾಗಿ ಕಾಣಿಸಿರಬೇಕಲ್ಲವೇ? ತನ್ನವರು-ಇನ್ನವರು ಎನ್ನದೆ ಎಲ್ಲರೂ ಮರಣಕ್ಕಿಂತ ಕ್ರೂರ
ರಾಗಿ ಹಿಂಸೆಪಡಿಸಿದಂತೆ ಅನಿಸಿರಬೇಕಲ್ಲವೇ? ಎತ್ತ ಹೋದರೂ ಬದುಕೇನು ಎನ್ನುವ ಜೀವವು ಸತ್ತು ಹೋಗಿಯೇ ಬದುಕೇನು ಎಂದು ಗಟ್ಟಿಗೊಳ್ಳಬೇಕಾದರೆ ಪರಿಸರವು ಅದೆಷ್ಟು ಕರಾಳವಾಗಿದ್ದೀತು? ಕ೦ಗಾಲನಾಗಿದ್ಧರೂ ಜೀವ
ಹಿಡಿಯಬೇಕೆನ್ನುವುದು ಜೀವಸೂತ್ರವಾಗಿದ್ದರೂ, ಈ ಮನುಷ್ಯರೆಂಬವರಷ್ಟೇ ಅಲ್ಲ; ಸಚೇತನ ವಸ್ತುಗಳನ್ನೂ ದಾಟಿ ಜಡಾತ್ಮಕಗಳನ್ನೂ ಮೀರಿಹೋಗಿ ಸಮಾಧಾನ ತೆಳೆಯವುದಕ್ಕೆ ಸಾವೊಂದೇ ಸರಿಯಾದ ದಾರಿಯೆ೦ದು, ಮರ-
ಣಕ್ಕೆ ಶರಣುಹೋಗುವವರ ಕೃತಿಯು ಅದೆಷ್ಟು ಕ್ರೂರವೂ ಭಯಾನಕವೂ ಆಗಿ ತೋರುವುದಲ್ಲ !

ಹೆಚ್ಚಿನ ಸುಖವನ್ನು ಬಯಸಿ ಕೊಂದುಕೊಳ್ಳುವ ಮರಣವಿದಾಯಿತು. ಆದರೆ ಅದಕ್ಕಾಗಿ ಜೀನವುಳಿಸಿಕೊಂಡು ಸತ್ತುಹೋಗುವ ದಾರಿಯನ್ನು ಶರಣರು ಕಂಡಿದ್ದಾರೆ. ಈ ಮರಣದಲ್ಲಿಯೂ ಶರಣರ ಪರೀಕ್ಷೆ ಆಗದಿರಲಾರದು.

ಆತ್ಮಹತ್ಯೆಯೆನಿಸಿದರೂ, ಮರಣದ ಮಡಿಲಲ್ಲಿ ಪವಡಿಸಿದನೆನಿಸಿದರೂ ಮರಣನೆ೦ಬುದು ಭಯಾನಕ; ಜೀವಿತಮರಣ ಅದಕ್ಕೂ ಭಯಾನಕ. ಕೈ-ಕಾಲು ಕಡಿದರೂ ಜೀವವುಳ್ಳವನಂತೆ, ಕಣ್ಣು-ಮೂಗುಗಳನ್ನು ಕಿತ್ತಿಹಾಕಿದರೂ ಬದುಕಿ ಉಳಿದನನ೦ತೆ, ಅಂಗೋಪಾ೦ಗಗಳು ಬೆಂಕಿಯಲ್ಲಿ ಹುರುಪಳಿಸುತ್ತಿದ್ದರೂ ಜೀವಹಿಡಿದವನಂತೆ, ಜೀವಿತ ಮರಣವನ್ನು ಅಪ್ಪಿದವನ ಸ್ಥಿತಿಯಾಗಿರುತ್ತದೆ.

ಮನೆವಾರ್ತೆಯಿ೦ವ ಒಮ್ಮೊಮ್ಮೆ ಎದ್ದು ಓಡಿಸಲ್ಬಟ್ಟು ಆತ್ಮಹತ್ಯೆಗೆ ಈಡಾದವರು ಸಾಮಾನ್ಯ ಜನರೆನ್ನೋಣ. ಆದರೆ ಮನೆವಾರ್ತೆಯ ಎದ್ಧಲಗಾಟ ದಿಂದ ಗಿರಿಯನ್ನು ಸೇರಿ, ಗುಹೆಯನ್ನು ಹೊಕ್ಕು, ಆರಣ್ಯವನ್ನು ತಿರುಗಿ, ಜೀವನದ ಸರ್ವ ಸೌಕರ್ಯಗಳಿಗೂ ನೀರೆರೆದು ಅಂದರೆ, ಆಶೆಬಿಟ್ಟು ಜೀವಿತಮರಣ ದಂಥ ಮಹಾಭಯಾನಕವಾದ ದಿವ್ಯ ಮಾಡಲು ನಿಂತ ಅಸಾಮಾನ್ಯರ ಜೀವನಗಳೂ ನಮ್ಮ ಕಣ್ಣ ಮುಂದಿವೆ.

ಕಪ್ಪಡಿಗೆ ಹೊರಟ ಬಸನಣ್ಣನು ಒಮ್ಮೆ  ಜೀವಿತಮರಣವನ್ನು ಹೊಂದಿಬಿಡಲಿಲ್ಲ. ಕಪ್ಪಡಿಯಿಂದ ಕಲ್ಯಾಣಕ್ಕೆ ಹೊರಟಾಗಲೂ ಅವನಿಗೆ ಎರಡನೆಯ ಸಾರೆ ಜೀವಿತಮರಣವು ಸ೦ಧಿಸಿತು. ನವಜನ್ಮದ ಶಿಶುವು ಜೀವಿತ
ಮರಣವೆಂಬ ಗರ್ಭದಲ್ಲಿಯೇ ಹುಟ್ಟಿಬರುತ್ತದೆ. ಬಾಗೇವಾಡಿಯ ಬಸನಣ್ಣನು ಮೊದಲನೆಯ ಜೀವಿತಮರಣದಲ್ಲಿ ಆಳಿದುಬಿಟ್ಟು, ನವಜನ್ಮ ತೊಟ್ಟಾಗ ಸಂಗನ ಬಸನಣ್ಣನಾಗಿ ಮಾರ್ಪಟ್ಟನು. ಇನ್ನೊಂದು ಜೀವಿತಮರಣದಲ್ಲಿ ತೀರಿಹೋಗಿ, ನವಜನ್ಮ ತಳೆದಾಗ ಸ೦ಗನಬಸನಣ್ಣನು ಕಲ್ಯಾಣ ಬಸನಣ್ಣನಾಗಿ ತೋರ್ಪಟ್ಟನು.

ಅಕ್ಕಮಹಾದೇವಿಯೆ೦ದರೆ ಮನೆಯಲ್ಲಿ ಬೆಳೆದು ಬ೦ದ ಫಸಲು ಅಲ್ಲ. ಅದನ್ನು ಜಿಟ್ಟು ಹೊರಬಿದ್ದಾಗಲೇ ಆಕೆಯ ಕಲ್ಯಾಣವು ಚೆನ್ನಮಲ್ಲಿಕಾರ್ಜುನ ನೊಡನೆ ಸಾಧಿಸಿತು.

ಮೊಳಗಿ ಮಾರಯ್ಯನು ಕಾಶ್ಮೀರದ ರಾಜನಾಗಿದ್ದರೂ ಆ ರಾಜ ಜೀವನವು ಅಪಥ್ಯಕರವೆನಿಸಿ, ಆತನು ತನ್ನ ರೋಗನನ್ನು ಗುಣಪಡಿಸಿಕೊಳ್ಳುವ ಸಲುನಾಗಿ ಕಲ್ಯಾಣದ ಕಡೆಗೆ ಹೊರಟನು. ಶರಣರ ಸಂಗದಲ್ಲಿ ಸೇರಿ ನಿಂತನು. ಕಾಯಕನನ್ನು ಕೈಗೊಂಡನು. ಕಟ್ಟಿಗೆಯ ಹೊರೆಹೊತ್ತು ಮಾರಿ ಜೀವನ ನಿರ್ವಹಿಸುವ ಹೂಣಿಕೆಯನ್ನು ಸ್ವಯ೦ಪ್ರೇರಣೆಯಿ೦ದ ಆರಿಸಿಕೊಂಡ ಕಾರಣದಿಂದ ಅದು ಆತನಿಗೆ ಸಹನೀಯವಾಯಿತು; ಅಸುಖವೆನಿಸಲಿಲ್ಲ.
ಆತನು ಅದರಲ್ಲಿಯೇ ತೃಪ್ತಿಪಟ್ಟನು.

ಮನೆಬಿಟ್ಟು ಬಂದ ಬಸನಣ್ಣನು, ಮತ್ತೆ ಮಹಾಮನೆಗೆ ತೆರಳಲೇ ಬೇಕಾಯಿತು.

ಜಾಣನಾದ ತೋಟಿಗನು ಮಡಿಯಲ್ಲಿ ಬೀಜಗಳನ್ನೂರಿ ಅಗಿಗಳನ್ನು ಮೊಳೆಯಿಸುವನು. ಅಗಿಗಳು ಒಂದು ಹದಕ್ಕೆ ಬಂದ ಬಳಿಕ, ಅವುಗಳನ್ನು ಕಿತ್ತೊಯ್ದು ತೋಟದ ಬೇರೆ ಬೇರೆ ಸ್ಥಳಗಳಲ್ಲಿ ನೆಡುತ್ತಾನೆ. ಕಿತ್ತೊಯ್ಯುವಾಗ ಅಗಿಯು ಮರಣಸ೦ಕಟಪಡುತ್ತಿದ್ದರೆ ಆಶ್ಚರ್ಯವಲ್ಲ. ಮರಣಸ೦ಕಟವನ್ನುಂಡ ಮೇಲೆಯೇ ಅದು, ಇನ್ನೊಂದು ಕಡೆಯಲ್ಲಿ ಬೆಳೆದು ಬರಬಲ್ಲದು; ಸಾರ್ಥಕವಾದ ಬೆಳಸನ್ನು ನೀಡಬಹುದು. ಆದರೆ ಮರಣಸಂಕಟ ಸಹಿಸಲಾರೆನೆಂದೂ, ಮಡಿಯಲ್ಲಿ ಅಗಿಯಾಗಿ ಸುರಕ್ಷಿತ ಇರಬಯಸುವೆನೆ೦ದೂ ಹಿಡಿದು ಅಗಿ ಆಗಿನಮಟ್ಟಿಗೆ ಮರಣಸಂಕಟಕ್ಕೀಢಾಗದೆ ಉಳಿಯಿತು! ಆದರೆ ಅದರ ಬೆಳವಣಿಗೆ ನಿಂತುಬಿಡುವುದು ನಿಶ್ಚಯವೇ. ಬೆಳವಣಿಗೆ ನಿಂತ ಬೆಳೆಯು ನಿಮಿಷನಿಮಿಷಕ್ಕೂ ಸಾವಿನೆಡೆಗೇ ಎಳೆದೋಡಹತ್ತುವದು.

ಮರಣಸಂಕಟಕ್ಕೆ ಅಂಜಿ ಮರಣಕ್ಕೇ ಈಡಾಗುವವರ ಉದಾಹರಣೆಗಳನ್ನು ಎತ್ತಿತೋರಿಸಬೇಕಾಗಿಲ್ಲ. ಕಣ್ಣು ಹೊರಳಿಸಿದಲ್ಲಿ ಉದಾಹರಣೆ; ಕೈ-ಉರಳಿಸಿದಲ್ಲಿ ಉದಾಹರಣೆ.

“ಇದಕಾರಂಜುನರು, ಇದಕಾರಳಕುವರು 7
ಉರಿಬರಲಿ ಸಿರಿಬರಲಿ! ಮರಣವೇ ಮಾನವಮಿ.”

ಎನ್ನುವ ಕೆಚ್ಚಿನ ನುಡಿಯಲ್ಲಿ ಮರಣವು ಮಾನವಮಿಯಂತೆ ಉಲ್ಹಾಸದ ಹಬ್ಬವಾಗಿದೆ. ಸೀಮೋಲ್ಲಂಫನ ಮಾಡಿನಿಂತ ವೀರನ ರಕ್ತವು ಕುದಿದೇಳು ವಂತೆ, ಮರಣಸೀಮೆಯನ್ನು ದಾಟನಿಂತ ಮುಮುಕ್ಷುವಿನ ಅಂತರಂಗವು ಹೊಸ
ಕುದುರೆಯಂತೆ ಕುಣಿಯುತ್ತಿರುವದು; ಉಲ್ಹಾಸದಿ೦ದ ಹೇಷಾರನ ಗೆಯ್ಯು ತ್ತಿರುವದು.

ಮನೆ ಕಿಚ್ಚಿನ ಕುಂಡವಾದರೆ ಅದರಲ್ಲಿ ಹಾರದೆ ಅದರಿ೦ದ ಹಾರಿನಿಂತು ಮನೆಗೆ, ಮನೆಯವರ ಪಾಲಿಗೆ ಸತ್ತು ಬಿಡುವುದು ವಾಸ್ತವಿಕ ದಾರಿ. ವನದ ಲ್ಲಿಯೋ ಮರದಲ್ಲಿಯೋ ಅಜ್ಞಾತಜೀವಿಯಾಗಿ ಪುನರ್ಜನ್ಮವೆತ್ತಿ ಸುಂದರವಾದ
ಬದುಕಿನ ಪೊದೆಯನ್ನು ಬೆಳೆಯಿಸಿಕೊಳ್ಳಬೇಕು.

ವನಕ್ಕೆ ಹೋಗುವುದು ಮುಖ್ಯವಲ್ಲ. ಅದರಂತೆ ಮನೆಯಲ್ಲಿ ಉಳಿಯುವುದೇ ಮುಖ್ಯವಲ್ಲ. ಎಲ್ಲಿಯೇ ಹೋದರೂ, ಎಲ್ಲಿಯೇ ಉಳಿದರೂ ಬಾಳು ಕುಡಿವಳ್ಳಿಯಾಗಿ ಬೆಳೆದುಬರಬೇಕು. ಮನೆಯಲ್ಲಿ ನಿಂತವನು ವನವನ್ನು ಚಿಂತಿ
ಸಿದರಾಗಲಿ, ವನವನ್ನು ಸೇರಿದನನು ಮನೆಯನ್ನು ನೆನೆಸಿದರಾಗಲಿ ಏನೇನೂ ಪ್ರಯೋಜನವಿಲ್ಲ; ಎಳ್ಳಷ್ಟೂ ಪ್ರಯೋಜನವಿಲ್ಲ.

ಮನೆ ನಮ್ಮ ಸಂರಕ್ಷಣೆಗಾಗಿ ಮಾಡಿಕೊಂಡ ಸಾಧನ. ತಾಯಿ-ತಂದೆಗಳು ಮುದ್ದು-ಮಮತೆಗಳನ್ನು ಉಣ್ಣಿಸಿ ಬಾಳಬಳ್ಳಿಯನ್ನು ಹಬ್ಬಿಸುವ ಹಂದರ. ಮಡದಿಮಕ್ಕಳು ಬಾಳಬಳ್ಳಿಯ ಕುಡಿಯಲ್ಲಿ ಕಂಗೊಳಿಸುವ ಹೂ-ಹಣ್ಣುಗಳು, ನಿಜವೇ. ಆದರೆ ಮಡಿಯಿಂದ ಕಿತ್ತಿ ಬೇರೆಡೆಯಲ್ಲಿ ಹಬ್ಬದಾಗಲೇ ಸಫಲಿಸುವ ಜಾತಿಯ ಬಳ್ಳಿಯಾಗಿದ್ದರೆ ಗತಿಯೇನು ? ಅ೦ಥವರಿಗೆ ಮನೆ ಮಸಣವಾಗುತ್ತದೆ, ತಾಯಿ ನಾಯಿಯಾಗುತ್ತಾಳೆ, ತಂದೆ ಹಂದಿಯಾಗುತ್ತಾನೆ, ಮಡದಿ-ಮಕ್ಕಳು ಜೀವಹಿಂಡುವುದಕ್ಕೆ ಕೊರಳಿಗೆ ಬಿದ್ದ ಉರುಲು ಆಗುತ್ತಾರೆ.

ಕುಡಿವ ನೀರೆನ್ನಬಹುದೇ-ನೀರಲದ್ದುವಾಗ?
ಆಡುವ ಕಿಚ್ಚೆನ್ನಬಹುದೇ-ಮನೆಯ ಸುಡುವಾಗ?
ಒಡಲು ತನ್ನದೆನ್ನಬಹುದೆ:-ಪುಣ್ಯಪಾಪವನುಂ ಬಾಗ?
ಜೀವ ತನ್ನದೆನ್ನಬಹುದೆ:–ಮಿಕ್ಕುಹೋಹಾಗ?’
ಇವನೊಡೆ ಬಡೆದು ಕೆಳೆಯೆಂದಾತ ನಂಬಿಗರ ಚೌಡಯ್ಯ.

ಸಾಧನೆಗೆ ಪ್ರತಿಕೂಲನಾಗಿ ಮನೆ, ಮಡದಿ, ಮಕ್ಕಳು ಆಡ್ಡಗಟ್ಟಿ ನೆರೆದು ನಿಂತಿರುವಾಗ ಮನೆಬಿಟ್ಟು ಓಡಿ ಹೋಗುವ ಎಳಿತವಿದ್ದರೆ ಅವನು ಸಹಜವಾಗಿ ಇಲ್ಲವೆ ತುಸುವೆ ತೊ೦ದರೆಯಿಂದ ಕಡೆಗಾಗಿ ಸಿಡಿದು ನಿಲ್ಲಬಹುದು. ಆದರೆ ಮನೆಯ ಭಾರವನ್ನು ಹೊರುವುದಕ್ಕೆ ಸೋತು ಇಲ್ಲವೆ, ಹೆಂಡಿರು-ಮಕ್ಕಳಿಂದ ಮೊದಲಿನಷ್ಟು ಸುಖಸಿಗಲೊಲ್ಲದೆಂದು ಬೇಸತ್ತು ಮನೆ ಬಿಟ್ಟು ಹೊರಡುವದಕ್ಕಾಗಲಿ, ಮಡದಿಮಕ್ಕಳಿಂದ ಕಾಣೆಯಾಗುವುದಕ್ಕಾಗಲಿ ಬಹಳ ಬಂಡವಲು ಬೇಕಿಲ್ಲ. ಅದೆ೦ಥದೋ ಒ೦ದಿಷ್ಟು ವೈರಾಗ್ಯವಾದರೆ ಸಾಕು.

ಬೇಡವಾದ ವಸ್ತುವನ್ನು ಕು೦ದಿಟ್ಟು ಜರೆಯುವುದೂ, ಆದೇ ದಾರಿಯೊಳಗಿನ ಒಂದು ಮೆಟ್ಟಿಲು. ಮನೆ ಅಲ್ಲ ಸೆರೆಮನೆಯೆ೦ದೂ, ನಾರಿಯಲ್ಲ ಮಾರಿಯೆಂದೂ, ಎರವಿನ ಸ೦ಸಾರವೆಂದೂ ಕುಂದಿಟ್ಟು, ಕ೦ದಿಟ್ಟು ಮೂದಲಿಸುವು
ದನ್ನು ಕೇಳಬಹುದು. ಸ೦ಸಾರವು ನೀರಮೇಲಿನ ಗುರುಳೆಯೆ೦ದೂ ಹೊತ್ತು ಬ೦ದರೆ ಕತ್ತೆಯ ಕಾಲು ಹಿಡಿಸುವದೆಂದೂ ಹೊತ್ತು ನೋಡಿ ಗೊತ್ತಿಗೆ ಹಚ್ಚುವದೆ೦ದೂ ಆದನ್ನು ಅಣಕಿಸಿ, ತೆಗಳಿ ಮನೆಬಿಡುವವರ ಮಾತು ನಾನು ಹೇಳುವದಿಲ್ಲ.

ಅತ್ತಲ್ಲ ಇತ್ತಲ್ಲ :ಎತ್ತಹೋಗುವುದೆಂಬದನ್ನು ತಿಳಿಯದೆ, ತತ್ತರಾಡಿಸುತ್ತ ನಿಲ್ಲುವದಕ್ಕಿ೦ತ, ಏನೇ ಅಣಕಿಸಿದರೂ ಮನೆಬಿಟ್ಟು ಹೊರಟವನು ಮುಂದಡಿಯಿಟ್ಟ ಹಾಗೆಯೇ ಸರಿ. ಆ ಪ್ರಸ೦ಗಿಕ ವೈರಾಗ್ಯವು ತೀವ್ರ ಪರಿಣಾಮವನ್ನು
ಉಂಟುಮಾಡಲೂ ಬಹುದು. ಆದರೆ ಸ್ಥಿರವಾದ ಪರಿಣಾವನ್ನುಂಟು ಮಾಡುವುದಕ್ಕೆ ಬೇರೊ೦ದು ಶಕ್ತಿಯೇ ಬೇಕು. ಅದಕ್ಕೆ ಸವಿವರವಾದ ಕ್ರಮ ವಾದ ಬೇರೊಂಮ ದಾರಿಯೇ ಇದೆ.

ಆ ದಾರಿಯೆಂದರೆ ಪ್ರಣಾತ್ಮಕ ಶಿಕ್ಷಣ.

ನಿರ್ಬ0ಧ, ನಿಗ್ರಹ, ನಿರಶನ, ವಿರತಿ ವೈರಾಗ್ಯಗಳ ಹಾದಿಯು ಸವಿವರ ವಾದ ಈ ಶಿಕ್ಷಣಕ್ಕಿ೦ತ ಸುಲಭವಾಗಿರಬಲ್ಲದು; ತೀವ್ರಪರಿಣಾಮಕಾರಿಯೂ ಆಗಿರಬಲ್ಲದು. ನಿಷ್ಟುರವೂ ಸವಿವರವೂ ಆದ ಶಿಕ್ಷಣಕ್ಕಿಂತ ತೀವ್ರ ಪರಿಣಾಮಕಾರಿ- ಯಾದುದಾಗಲಿ, ಸುಲಭವಾದುದಾಗಲಿ ಬಹಳ ದಿವಸ ತಾಳಲಾರದು. ಆಲ್ಪಕಾಲಮಾತ್ರ ತಾಳಿಕೆಯಾಗಬಲ್ಲದು.

ವೈರಾಗ್ಯದ ದಾರಿಯಲ್ಲಿ ಪ್ರಾಣಶಕ್ತಿಯೊಡನೆ ಘೋರ ವಿರೋಧವನ್ನೇ ಕಟ್ಟಿಕೊಳ್ಳಬೇಕಾಗುತ್ತದೆ. ಆದ್ದರಿಂದ ಆ ಶಕ್ತಿಯು ಒ೦ದಾನೊಂದು ವ್ರಸಂಗ ದಲ್ಲಿ ಸಹಾಯನೀಡುವ ಸಹಕಾರನೀಡುವ ಸಂಭವವೇ ಉಳಿಯುವದಿಲ್ಲ. ಪ್ರಾಣಶಕ್ತಿಯನ್ನು ಕಡೆಗಣಿಸಿ ಫಲವಿಲ್ಲ. ವ್ಯಕ್ತಿಗಾಗಲಿ ಅವನ ಚಟುವಟಿಕೆ ಗಳಿಗಾಗಲಿ ಸಮಗ್ರ ವಿಕಾಸವ ದಾರಿಯಲ್ಲಿ ಪ್ರಾಣಶಕ್ತಿಯು ಅತ್ಯಂತ ಮಹತ್ತಮವಾದ ಶಕ್ತಿಯಾಗಿದೆ.

ವೈರಾಗ್ಯವು ಮನೆ ಬಿಡಿಸುವುದಲ್ಲದೆ ಪ್ರಪಂಚ ಬಿಡಿಸಲಾರದು. ಮಡದಿ.-ಮಕ್ಕಳನ್ನು ಅಗಲಿಸಬಲ್ಲದಲ್ಲದೆ ಸಂಸಾರ ತೊಲಗಿಸದು. ಯಾಕಂದರೆ ಅಶನ ಕುಂದದು; ಹಸಿವೆ ಹಿಂಗದು. ಬಿದ್ದುಕೊಳ್ಳುವ ನೆಲ ಬಿಡದು.

ಆರುವನೊಲ್ಲೆಂದು ಅರಣ್ಯಕ್ಕೆ ಹೋಗುವುದು-
ದುರಳತನ.
ಊರೊಳಗಿರ್ದಡೆ ನರರ ಹಂಗು.
ಅರಣ್ಯದೊಳಗಿರ್ದಡೆ ತರುಗಳ ಹಂಗು.
ಬಂದ ಪದಾರ್ಥವ ಲಿಂಗಾರ್ಪಿತವ ಮಾಡಿಕೊಂಬ
ಶರಣನೇ ಜಾಣ ಸಕಳೇಶ್ವರಾ.

ಓದದ ಲೆಂಕನೂ ಬೇಡವ ಭಕ್ತನೂ ಆಗಿ ನಿಂತನನಿಗೆ ನಿಂತ ನೆಲವೇ ನಿಲಯವಾಗಿಬಿಡುತ್ತದೆ. ಆತನ ನವಜನ್ಮದಲ್ಲಿ, ಜೀವಿತಮರಣದಿಂದು೦ಟಾದ ಪುನರ್ಜನ್ಮದಲ್ಲಿ ಆತನ ಬಳಗವೇ ಬೇರೆಯಾಗುತ್ತದೆ. ಆತನ ಮನೆತನವೇ ಬೇರೆ ವಿಧದ್ದಾಗುತ್ತದೆ. ಅಲ್ಲಿ ಜಾತಿಯ ಕುರುಹಾಗಲಿ, ನೀತಿಯ ಮರೆಹಾಗಲಿ ಕಾಣಿಸಿಕೊಳ್ಳುವದಿಲ್ಲ. ರಕ್ತ ಸಂಬಂಧವು ಹಣಿಕೆಹಾಕುವದಿಲ್ಲ.

ಅಪ್ಪನು ಡೋಹರ ಕಕ್ಕಯ್ಯ ನಾಗಿ,
ಮುತ್ತಯ್ಯ ಚೆನ್ನಯ್ಯನಾದರೆ ಅನು ಬದುಕುವೆನು,
ಮತ್ತಾ ಶ್ವಪಚನ ಸನ್ನಿಧಿಯಿಂದ
ಭಕ್ತಿಯ ಸದ್ಗುಣನ ನಾನರಿವೆನಯ್ಯ.
ಕಷ್ಟಜಾತಿ ಜನ್ಮದಲಿ ಜನಿಸಿದೆ.
ಎನಗಿದು ವಿಧಿಯೇ ಕೂಡಲಸ0ಗಮದೇವಾ?

ಊರಿಗೊಂದು ಮನೆ ಮನೆಗೊಬ್ಬ ಬ೦ಧು, ಬಂಧುವಿಗೊಂದು ಹೃದಯ ತನ್ನದಾದ ಜೀವಿಗೆ ತನ್ನವರಾರು-ಅನ್ನಿಗರಾರು? ದೇವನೊಲಿದ ಜಾತರೆಲ್ಲರೂ ತನ್ನ ಆಪ್ತಬಂಧುಗಳೇ. ರಕ್ತಸಂಬಂಧಿಗಳೇ, ಸಕಲಜೀವಾತ್ಮರಿಗೆ
ಲೇಸನೇ ಬಯಸುವ ಕುಲಗೋತ್ರದವರೆಲ್ಲ ತನ್ನ ಮನೆತನದೊಳಗಿನವರೇ. ಆ ಬಳಗವು ತೋರಿಸುವ ಆತ್ಮೀಯತೆ ಎಂಥದೆಂದೆರೆ–

ಹುಟ್ಟಿದೆ ಶ್ರೀಗುರುವಿನ ಹಸ್ತದಲ್ಲಿ.
ಬೆಳೆದೆನು ಆಸಂಖ್ಯಾತರ ಕರುಣದೊಳಗೆ
ಭಾವವೆಂಬ ಹಾಲು, ಸುಜ್ಞಾನವೆ೦ಬ ತುಪ್ಪ
ಪರಮಾರ್ಥವೆಂಬ ಸಕ್ಕರೆಯನಿಕ್ಕಿದಿರಿ ನೋಡಾ.
ಇಂತಪ್ಪ ತ್ರಿವಿಧಾಮೃತವ ದಣಿಯಲೆರೆದು ಸಲಹಿದಿರಿ.
ಎನ್ನ ವಿವಾಹವ ಮಾಡಿದಿರಿ.
ಸಯವಪ್ಪ ಗಂಡಗೆ ಕೊಟ್ಟಿರಿ.
ಕೊಟ್ಟಮನೆಗೆ ಕಳುಹಲೆಂದು ಆಸಂಖ್ಯಾತರೆಲ್ಲರು
ನೆರೆದು ಬ೦ದಿರಿ.
ಬಸವಣ್ಣ ಮೆಚ್ಚಲು ಒಗೆತನವ ಮಾಡುವೆ.
ಚೆನ್ನಮಲ್ಲಿಕಾರ್ಜುನನ ಕೈಪಿಡಿದು, ನಿಮ್ಮ ಮಂಡೆಗೆ
ಹೂವ ತಾಹೆನಲ್ಲದೆ ಹುಲ್ಲು ತಾರೆನು.

ಇಂತಹ ಮನೆವಾರ್ತೆ ಎಲ್ಲಿ ಸಿಕ್ಕರೂ ಬೇಕು; ಎಷ್ಟು ಸಿಕ್ಕರೂ ಬೇಕು.  ಅದಕ್ಕೆ ಏನು ಬೆಲೆಬಿದ್ದರೂ ಕಡಿಮೆಯೇ; ಎಷ್ಟು ಬೆಲೆಬಿದ್ದರೂ ಹೆಚ್ಚಲ್ಲ. ಇಂಥ ಮನೆವಾರ್ತೆಯಲ್ಲಿ ನೂರುವರುಷ ಬದುಕಿದರೂ ಸರಿ; ಮೂರು ವರುಷ ಬದುಕಿದರೂ ಸಾಕು. ಅದು ಮಹಾಮನೆಯ ಮಹತ್ತಾದ ಬಾಳು.

ಜೀವ ಬೇಡವಾಗಿದ್ದರೂ ಜೀವಿತ ಬೇಡವಾಗಿರಬಾರದು. ಹಳೆಯಬಾಳು ಕೊಡಲು ನಿಂತವರಿಗೆ ಹೊಸಬಾಳು ಕೈವಶವಾಗುವದು. ಹಳೆಯದಿರುವ ವರೆಗೆ ಹೊಸದು ಬರುವುದಕ್ಕೆ ದಾರಿ ಎಲ್ಲಿ?  ಬರುವುದಾದರೂ ಎಲ್ಲಿ೦ದ?

ಭಕ್ತನ ಮನ ಹೆಣ್ಣಿನೊಳಗಾದರೆ ವಿವಾಹವಾಗಿ
ಕೂಡುವದು.
ಭಕ್ತನ ಮನ ಮಣ್ಣಿನೊಳಗಾದರೆ ಕೊಂಡು
ಆಲಯವ ಮಾಡುವುದು.
ಭಕ್ತನ ಮನ ಹೊನ್ನಿನೊಳಗಾದರೆ ಬಳಲಿ
ದೊರಕಿಸುವುದು ನೋಡಾ ಕಪಿಲಸಿದ್ಧ  ಮಲ್ಲಿಕಾರ್ಜುನ.

ಕಣ್ಣಿಗೆ ಕಂಡರೂ ಕೈಗೆ ಸಿಗದ೦ತೆ ಸುತ್ತಲಿನ ಒಡವೆಗಳ ಪಸಾರದ ಉದ್ದೇಶವೇನಿರಬಹುದು? ಹೋರಾಟಕ್ಕೆ ಕಾರಣವಾಗಿ ಗೆಲುಮೆಯ ಸಾಧನ ನಾಗಿ ಗೆಲ್ಲಲು ಕಲಿಯುವ ಶಾಲೆಯೇ ಈ ಸಂಸಾರ. ಶಾಲೆಯ ವಿದ್ಯಾರ್ಥಿಗೆ
ವಸತಿಗೃಹವಾಗಿದೆ-ಈ ಮನೆ, ಮಹಾಮನೆ. ಮನೆಯನ್ನೂ ಮನೆವಾರ್ತೆ ಯನ್ನೂ ಬಿಟ್ಟು ಇನ್ನಾವ ಹೋರಾಟವಿದೆ? ಮತ್ತಾವ ಗೆಲುವು ಬೇಕು?

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏಕನಾದ
Next post ನಗೆಡಂಗುರ-೧೪೫

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

cheap jordans|wholesale air max|wholesale jordans|wholesale jewelry|wholesale jerseys