ಹೂವಿನೊಳಗೆ ಕಾಯಿ ಇದೆ,
ಹಣ್ಣಿನೊಳಗೆ ಬೀಜವಿದೆ,
ಅಲೆಗಳ ಕೆಳಗೆ ಘನ ಜಲವಿದೆ,
ಮೋಡಗಳ ಹಿಂದೆ ಅನಂತಾಕಾಶವಿದೆ,
ತಾನ ತಾನಗಳ ವಿವಿಧ
ಇಂಚರಗಳೊಳಗೊಂದು ಏಕನಾದವಿದೆ
ಬಣ್ಣ ಬಣ್ಣ ಚಿತ್ರಗಳ ಹಿಂದೊಂದು
ಬಿಳಿ ಬಟ್ಟೆ ಇದೆ
ಉಬ್ಬು ತಗ್ಗುಗಳ ಮಾಂಸದೊಳಗೆ
ಬೆಂಬಲವಾದಸ್ಥಿಪಂಜರವಿದೆ
ಈಚೆ ಬಂದಾಚೆ ಹೋಗುವ
ವೀಚಿಯಾಕಾರಗಳ ಹಿಂದೊಂದು ನಿರಾಕಾರವಿದೆ
ದಿನ-ಮಾಸ-ವರ್ಷಗಳೆಣಿಕೆಯ ಕಾಲದ ಹಿಂದೆ
ಕೊನೆ ಮೊದಲಿರದ ಕಾಲ ಚಾಚಿಕೊಂಡಿದೆ
***