ಹೊತ್ತು ಹೊತ್ತಿಗೆ ಮತ್ತೆ
ತಿಪ್ಪೆಯಲ್ಲಿ ಕರ್ಪುರವನರಸುವಂತೆ,
ತಿಪ್ಪೆಯಂತಹ ಒಡಲೊಳಗೆ ಕರ್ತುವನರಸಿಹೆನೆಂಬ
ಅಣ್ಣಗಳಿರಾ ನೀವು ಕೇಳಿರೋ, ಹೇಳಿಹೆನು.
ಆ ಕರ್ತುವನರಸುವದಕ್ಕೆ ಚಿತ್ತ ಹೇಗಾಗಬೇಕೆಂದರೆ,
ಜಲದೊಳಗಣ ಸೂರ್ಯನ ಪ್ರತಿಬಿಂಬದಂತಿರಬೇಕು.
ಮೋಡವಿಲ್ಲದ ಚಂದ್ರಮನಂತಿರಬೇಕು.
ಬೆಳಗಿದ ದರ್ಪಣದಂತಿರಬೇಕು.
ಇಂತು ಚಿತ್ತ ಶುದ್ಧವಾದಲ್ಲದೆ,
ಕರ್ತುವಿನ ನೆಲೆಯ ಕಾಣಬಾರದೆಂದರು
ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ.
*****