ಇಂಗ್ಲೆಂಡ್‍ನ ಪ್ರಸಿದ್ದಿ ಸಾಹಿತಿ ಶೆರಿಡಾನ್ ತುಂಬಾ ಸಾಲವನ್ನು ಮಾಡಿದ ವ್ಯಕ್ತಿ- ಸಾಲಕೊಟ್ಟವನನ್ನು ಕಂಡಕೂಡಲೆ ಕಣ್ಣು ತಪ್ಪಿಸಿ ಮರೆಯಾಗಿಬಿಡುತ್ತಿದ್ದ. ಒಮ್ಮೆ, ಕುದುರೆಮೇಲೆ ಸವಾರಿ ಮಾಡುತ್ತಿದ್ದಾಗ ಶೆರಿಡಾನ್ ಸಾಲ ಕೊಟ್ಟಿದ್ದ ವ್ಯಕ್ತಿ ಎದುರಾದ. ಸಮಯ ಪ್ರಜ್ಞೆ ಕೆಲಸ ಮಾಡಿತು. “ಅರೇ ನಿಮ್ಮ ಕುದುರೆ ಎಷ್ಟು ಸುಂದರವಾಗಿದೆ. ಇಂತಹ ಕುದುರೆ ನೋಡಿಯೇ ಇರಲಿಲ್ಲ. ವೇಗವಾಗಿ ಓಡುತ್ತದೆಯೋ?” ಓಹ್, ತುಂಬಾ ವೇಗವಾಗಿ ಓಡಬಲ್ಲದು. ಕುದುರೆಗೆ ಒಂದು ಚಾಟಿ ಏಟು ಬಿದ್ದರೆ ಸಾಕು. ಓಟ ಕೀಳುತ್ತದೆ. ನೋಡು ಬೇಕಾದರೆ.” ಎನ್ನುತ್ತಾ ಕುದುರೆಗೆ ಒಂದು ಏಟು ಬಿಗಿದ. ಕುದುರೆ ಯಜಮಾನನನ್ನೂ ಕೂರಿಸಿಕೊಂಡು ನಾಗಾಲೋಟ ಓಡಿತು, ಶರಿಡಾನ್‍ಗೆ ಇದೇ ಬೇಕಾಗಿತ್ತು. ತನ್ನ ಸಮಯ ಸ್ಪೂರ್ತಿ ಸಹಾಯಕ್ಕೆ ಬಂತು!
***