ಹಕ್ಕೀ ಮಾತ್ರ ಮೊಟ್ಟೇನ
ಇಡುತ್ತೆ ಅನ್ನೋದ್ ಸುಳ್ಳಮ್ಮಾ,
ತೆಂಗಿನ ಮರಗಳು ತಲೆಯಲ್ಲಿ
ಮೊಟ್ಟೆ ಇಟ್ಟಿಲ್ವೇನಮ್ಮಾ?

ಸೇಂಗಾ ಗಿಡಗಳು ನೆಲದಲ್ಲಿ
ಕಪ್ಪನೆ ಮಣ್ಣಿನ ಬುಡದಲ್ಲಿ
ಗೊಂಚಲು ಗೊಂಚಲು ಮೊಟ್ಟೇನ
ಇಟ್ಟಿಲ್ವಾಮ್ಮಾ ಮರೆಯಲ್ಲಿ?

ಹಲಸಿನ ಮರಾನ ನೋಡಮ್ಮ,
ಎಲೆಗಳ ಮಧ್ಯೆ ಮರೆಯಲ್ಲಿ
ಮೊಟ್ಟೆ ಇಟ್ಟಿಲ್ವೇನಮ್ಮಾ
ಎಲ್ಲಾ ಕಡೆಯೂ ಮೈಯಲ್ಲಿ?

ಮಿಸ್ ಹೇಳಿದ್ರು ಭೂಮೀನೂ
ಮೊಟ್ಟೆ ಥರಾನೆ ಇದೆಯಂತೆ
ರಾತ್ರಿ ಹೊಳೆಯೋ ನಕ್ಷತ್ರ
ಚಂದ್ರನ ಮೊಟ್ಟೆ ಅನ್ಸತ್ತೆ!
*****