ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಶ್ರೀ ಬಾಹುಬಲಿ ಪಾಲಿಟೆಕ್ನಿಕ್ ಕಾಲೇಜಿನ, ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿ ಟಿ. ಎನ್. ಪ್ರದೀಪ್ ಬಾಬು ಅವರು ದಿ ಬೈಕ್ ಸೆಷ್ಟಿ ಸಿಸ್ಟಮ್ ಎಂಬ ಬೈಕಿನ ಸಿಗ್ನಲ್ ನೂತನವಾಗಿ ಕಂಡು ಹಿಡಿದಿದ್ದಾರೆ. ಈ ಸಿಸ್ಟಂ ಅನ್ನು ದ್ವಿಚಕ್ರ ವಾಹನಗಳಿಗೆ ಅಳವಡಿಸಿದರೆ ಯಾರೂ ಕೂಡ ಬೈಕ್‌ಗಳನ್ನು ಕದಿಯಲು ಸಾಧ್ಯವಿಲ್ಲ. ಈ ಸಿಸ್ಟಂ ಅಳವಡಿಸಿಕೊಳ್ಳಲು ದುಬಾರಿ ವೆಚ್ಚ ಮಾಡಬೇಕಿಲ್ಲ ಕೇವಲ ೫೦೦ ರೂ. ಗಳಿಂದ ಇಂತಹ ಒಂದು ಅದ್ಭುತ ರಕ್ಷಣೆಯನ್ನು ಎಲ್ಲ ತರಹದ ಬೈಕ್ಗಳಿಗೂ ಬಳಸಿಕೊಳ್ಳಬಹುದು. ನಿಮಗೆ ಮಾತ್ರ ತಿಳಿದಿರುವಂತಹ ರಹಸ್ಯ ಸ್ಥಳಗಳಲ್ಲಿ ಸ್ವಿಚ್ ಅಳವಡಿಸಲಾಗುತ್ತದೆ. ಬೈಕನ್ನು ಸ್ಟ್ಯಾಂಡ್ ಹಾಕಿ ನಿಲ್ಲಿಸಿ ಹೋಗುವಾಗ ಈ ರಹಸ್ಯ ಸ್ವಿಚ್‌ನ್ನು ಆನ್ ಮಾಡಿ ಹೋಗಬೇಕು. ಯಾರಾದರೂ ಅಪರಿಚಿತರು ಸ್ಟ್ಯಾಂಡ್ ತೆಗೆದ ಕೂಡಲೇ ಸೈರನ್ ಕೂಗುತ್ತದೆ. ಹಾಗೂ ಯಾವುದೇ ಕಾರಣಕ್ಕೂ ನಿಮ್ಮ ಬೈಕ್ ಸ್ಟಾರ್ಟ್ ಆಗುವುದೇ ಇಲ್ಲ ಹಾಗೂ ಬೈಕ್ ಕದಿಯಲು ಸಾಧ್ಯವಾಗುವದೇ ಇಲ್ಲ. ಈ ಸಿಸ್ಟಂ ಅಳವಡಿಸಿಕೊಳ್ಳುವವರು ೯೪೪೮೦೭೩೮೪೪ ಗೆ ಸಂಪರ್‍ಕಿಸಲು ಕೋರಿದ್ದಾರೆ.
*****