ತಂಟ್ಳುಮಾರಿ ಪಾಂಡುರಂಗ
ಮಾಡುತಾನೆ ತಂಟೆಯ
ಮಂಗಳಾರತಿ ಮುಗಿದ ಮೇಲೂ
ಬಾರಿಸುತಾನೆ ಗಂಟೆಯ!

ಇನ್ನೂ ಯಾತಕೆ ಎಂದರೆ ಹೇಳ್ತಾನೆ:
ನಾಳೆಯ ಲೆಕ್ಕಕೆ ಬರಕೊಳ್ಳಿ
ತುಸು ಬಡ್ಡೀನಾದ್ರೂ
ಇಸಕೊಳ್ಳಿ!
*****