ಎಷ್ಟೊಂದಿವೆ ವಜ್ರದ ಬೊಟ್ಟು
ಎಷ್ಟೊಂದಿವೆ ವಜ್ರದ ಬೊಟ್ಟು
ಅಟ್ಟಲ ಮೇಲೆ ಎತ್ತಿಟ್ಟು
ಹೋಗಿದ್ದಾರೆ ಹೊರಗೆಲ್ಲೋ
ಕೈಗೆ ಸಿಗುವಂತಿಲ್ವಲ್ಲೋ!
ಅವಕ್ಕೆ ಹಗಲು ಆಗೋಲ್ಲ
ರಾತ್ರಿಯಲ್ಲೇ ಮಾತೆಲ್ಲ
ಮೈಯನು ಕುಲುಕಿ ನಗುತಾವೆ
ಕಂಬನಿ ಚೆಲ್ಲಿ ಅಳುತಾವೆ.
ನಾ ಯಾರೆಂದು ಗೊತ್ತಾಯ್ತ?
ಅಥವಾ ಬುದ್ಧಿ ಪೆಚ್ಚಾಯ್ತ?
(ಉತ್ತರ: ನಕ್ಷತ್ರ)
*****