ಬಿಂದಿಗೆ ಬಿಂದಿಗೆ ನೀರಿಗೆ ಬಾ ಬಿಂದಿಗೆ
ಸಂಜೆಯಾದರೆ ಬರತೀನವ್ವ
ಮಲ್ಲಿಗೆ ಮೊಗ್ಗೆ
ಬಿರಿತಾವೆ

ಬಿಂದಿಗೆ ಬಿಂದಿಗೆ ನೀರಿಗೆ ಬಾ ಬಿಂದಿಗೆ
ಹಕ್ಕಿ ಮರಳಿದರೆ ಬರುತೇನವ್ವ
ಚಿಲಿಪಿಲಿ ರಾಗವ
ಹಾಡುತಾವೆ

ಬಿಂದಿಗೆ ಬಿಂದಿಗೆ ನೀರಿಗೆ ಬಾ ಬಿಂದಿಗೆ
ಗಾಳಿ ಬೀಸಿದರೆ ಬರುತೇನವ್ವ
ಮರಮರ ಎಲೆಗಳು
ಆಡುತಾವೆ

ಬಿಂದಿಗೆ ಬಿಂದಿಗೆ ನೀರಿಗೆ ಬಾ ಬಿಂದಿಗೆ
ಚ೦ದಿರ ಬಂದರೆ ಬರುತೇನವ್ವ
ಬಾವಿಯೊಳಗವ
ಬಿದ್ದಿರುವ
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)