ಹೆಂಡತಿ ತರುಣಿ ಯಾಗಿದ್ದಾಗ ಅವಳು ಅವನ ಜೊತೆಯಲ್ಲೇ ಇರಬೇಕಿತ್ತು. ಎಲ್ಲಿಗೂ ಒಬ್ಬಳನ್ನೇ ಹೋಗಲು ಬಿಡುತ್ತಿರಲಿಲ್ಲ. ಯೌವ್ವನ ಧಾಟಿ ವೃದ್ಯಾಪ್ಯಕ್ಕೆ ಬಂದೊಡನೆ “ಈಗ ನೀನು ಸ್ವಾತಂತ್ರಳು” ಎಂದ ಪತಿ. ಸ್ವಾತಂತ್ರ್ಯ ಏನು ಎಂದು ತಿಳಿಯದ ಮುದುಕಿ ಕೋಲು ಹಿಡಿದು ಹುಡುಕುತ್ತ ಮೆಲ್ಲಮೆಲ್ಲನೆ ಜಗದಲ್ಲಿ ನಡೆದಳು.
*****