ರತುನ ದಿಂದ ರತುನ ಕಂಡೆ
ಕುತನಿ ಗಾದಿ ಕಂಡೆನೆ
ತಂಪು ತನನ ಸಂಪು ಪವನ
ನಿವುಳ ಹವುಳವಾದೆನೆ ||೧||

ಮುಗಿಲ ಗಾನ ನಗೆಯ ಯಾನ
ಹಗೆಯ ಹೊಗೆಯ ನಂದಿಸಿ
ನೆಲದ ತಾಳ ಪಕ್ಷಿ ಮೇಳ
ವೃಕ್ಷ ವೃಕ್ಷ ತುಂಬಿಸಿ ||೨||

ನೋಡು ತೆಂಗು ನೋಡಿ ನಂಬು
ಇಹಕೆ ಮಹಕೆ ಹೊಂದಿದೆ
ನೋಡು ಗಾಳಿ ಮೌನ ಕೇಳಿ
ಹೇಳಿದಂತೆ ಸಂದಿದ ||೩||

ಅಹಾ ಕಂಡ ಕಂಡು ಕುಣಿದೆ
ನಾನೆ ನಾನೆ ಸತ್ಕೃತಿ
ನಾನೆ ಶಿವನ ಮಧುರ ಕವನ
ವಿಶ್ವಗಾನ ಸಂಸ್ಕೃತಿ ||೪||
*****