ಆಸ್ಟರಿನ್, ಮಾತ್ರೆ ಒಂದೇ ಸರ್ವ ರೋಗಕ್ಕೂ ಮದ್ದು

ಆಸ್ಟರಿನ್, ಮಾತ್ರೆ ಒಂದೇ ಸರ್ವ ರೋಗಕ್ಕೂ ಮದ್ದು

ಮನುಷ್ಯ ಅಂದ ಮೇಲೆ ಕೈಕಾಲು ನೋವು, ಹೊಟ್ಟೆನೋವು, ಹೃದಯದ ಬೇನೆ, ಪಾರ್ಶ್ಯುವಾಯು ಕಣ್ಣಿನ ದೋಶ, ರಕ್ತದ ಹೆಚ್ಟು ಒತ್ತಡ ಹೀಗೆ ಏನೇನೋ ಕಾಯಿಲೆಗಳು ಬರುತ್ತವೆ. ಇವೆಲ್ಲವುಗಳಿಗೂ ಬೇರೆ ಬೇರೆ ಔಷಧಿ ಪಡೆದು ಸೇವಿಸುವುದು ಕಷ್ಟ. ಜತೆಗೆ ಇವೆಲ್ಲಕ್ಕೂ ಹಣವ್ಯಯವೂ ಹೆಚ್ಚು. ಅದರಲ್ಲೂ ಬಡವರಿಗೆ ಇಂಥಹ ರೋಗಗಳು ಕಾಣಿಸಿಕೊಂಡರೆ ಇನ್ನು ಕಷ್ಟ. ಆದರೆ ಇವೆಲ್ಲವುಗಳನ್ನು ಗುಣಪಡಿಸುವ ಏಕೈಕ ಮಾತ್ರೆ ಒಂದು ಇದೆ ಎಂದರೆ ನಂಬುವಿರಾ? ಅಂಥಹ ಔಷಧಿಯೇ ಆಸ್ಟರಿನ್. ಇದನ್ನು ಸೇವಿಸಿದರೆ ಹೃದಯಾಘಾತವಾಗುವುದನ್ನು ಕಡಿಮೆ ಮಾಡುತ್ತದೆ ಪಾರ್‍ಶ್ವವಾಯುರೋಗ ನಿವಾರಣೆಯಾಗುತ್ತದೆ. ಗರ್ಭಪಾತವನ್ನು ತಡೆಗಟ್ಟುತ್ತದೆ. ಕಣ್ಣಿಗೆ ಪರೆ ಬರುವುದನ್ನು ನಿಲ್ಲಿಸುತ್ತದೆ. ರಕ್ತದ ಒತ್ತಡವನ್ನು ಸಮಗೊಳಿಸುತ್ತದೆ. ಜ್ವರ, ನೆಗಡಿ, ನೋವುಗಳನ್ನು ಉಪಶಮನ ಮಾಡುತ್ತದೆ! ಇದು ಬಹುರೋಗಿ ನಿವಾರಣಾ ರಾಮಬಾಣವಾಗಿದೆ. ಈ ಸಿದ್ಧೌಷಧವು ೧೮೦೦ ಅಂತ್ಯದಲ್ಲಿ ಕಂಡು ಹಿಡಿಯಲ್ಪಟ್ಟಿತು. 325 M.G.ಯ ಇದರ ಮಾತ್ರೆಯನ್ನು ದಿನಂಪ್ರತಿ ಜಗತ್ತಿನಾದ್ಯಂತ ಲಕ್ಷಾಂತರ ಜನಸೇವಿಸುತ್ತಾರೆ. ಮಾನವ ಶರೀರದಲ್ಲಿ ತಯಾರಾಗುವ ಇಂಟರ್‌ಲ್ಯೂಕೆನ್-2, ಮತ್ತು ಇಂಟರ್‌ಪೆರಾನ್, ಎಂಬ ರೋಗ ನಿರೋಧಕಗಳನ್ನು ಶರೀರ ತೀವ್ರವಾಗಿ ಉತ್ಪತ್ತಿ ಮಾಡುವುದಕ್ಕೆ ಆಸ್ಟಿರಿನ್ ಸರಿಪಡಿಸುತ್ತದೆ ಎಂದು ಇತ್ತೀಚೆಗೆ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.

ಆದರೆ ಕೆಲವರಿಗೆ ಆಸ್ಟಿರಿನ್ ತೆಗೆದುಕೊಂಡಾಗ ವಾಂತಿ, ಅಲರ್ಜಿ, ಎದೆ‌ಉರಿ ಉಂಟಾಗುತ್ತದೆ ಇದರಿಂದ ಅಂತರಿಕ ರಕ್ತಶ್ರಾವ ಮೂತ್ರಜನಾಂಗಕ್ಕೆ ಹಾನಿ ಉಂಟಾಗಬಹುದು. ಅಸ್ತಮಾ ಇರುವವರಿಗೆ ಇದರಿಂದ ತೊಂದರೆಯಾಗಬಹುದು. ಆದ್ದರಿಂದ ಈ ನೋವು ನಿವಾರಕ ಸಿದೌಷಧಿಯನ್ನು ವೈದ್ಯರನ್ನು ಕೇಳಿಯೇ ತೆಗೆದುಕೊಳ್ಳಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಟ್ಟುತ್ತಿರುವೆನು ಮಂದಿರವನ್ನು
Next post ತಿದ್ದಲಾರದ ಭೂತ

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…