ಮನವೆಂದರೆ ಮರವೆಗೆ ಒಳಗು ಮಾಡಿತ್ತು.
ತನುವೆಂದರೆ ತಾಮಸಕ್ಕೊಳಗು ಮಾಡಿತ್ತು.
ಧನವೆಂದರೆ ಆಸೆ ಎಂಬ ಪಾಶಕ್ಕೊಳಗು ಮಾಡಿತ್ತು.
ಇವು ಮಾಯಾ ಪಾಶವೆಂದು ಬಿಟ್ಟು ಹುಟ್ಟನರಿದು,
ಬಟ್ಟಬಯಲಲ್ಲಿ ನಿಂದು, ಚಿತ್ತ ನಿರ್ಮಳವಾಗಿ ನೋಡಿ
ಕಂಡ ಶರಣಗೆ ತನುವೆ ಲಿಂಗವಾಯಿತ್ತು.
ಮನವೆ ಘನವಾಯಿತ್ತು. ಆ ಧನವೆ ಜಂಗಮವಾಯಿತ್ತು.
ಈ ತ್ರಿವಿಧವನು ತ್ರಿವಿಧಕಿತ್ತು, ತಾ ಬಯಲ ದೇಹಿಯಾದನಯ್ಯ,
ಆ ಮಹಾ ಶಿವಶರಣನು. ಇದರ ನೆಲೆಯನರಿಯದೆ,
ಈ ಮನದ ಬೆಂಬಳಿಗೊಂಡಾಡಿದವರೆಲ್ಲ
ನರಗುರಿಗಳಾದರಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ.
*****