Home / ಲೇಖನ / ಇತರೆ / ಮೂಲಧಾತು ಒಂದೇ

ಮೂಲಧಾತು ಒಂದೇ

ಪ್ರಿಯ ಸಖಿ,

ಇವನೊಬ್ಬ ಬೊಂಬೆ ಮಾರುವವನು. ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸಿದ ವಿವಿಧ ರೀತಿಯ ಬೊಂಬೆಗಳನ್ನು ಬಿದಿರಿನ ದೊಡ್ಡ ಬುಟ್ಟಿಯಲ್ಲಿ ಹೊತ್ತುಕೊಂಡು ಅವನು ಬೀದಿ ಬೀದಿಗಳಲ್ಲಿ ತಿರುಗಿ ವ್ಯಾಪಾರ ಮಾಡುತ್ತಾನೆ. ಒಂದೊಂದು ಬೊಂಬೆಗೂ ಬೇರೆ ಬೇರೆ ಬೆಲೆ. ಹಾಗೇ ಬೊಂಬೆಗಳೂ ವಿಭಿನ್ನ ಆಕಾರ, ರೂಪ ಪಡೆದಿವೆ.

ಇವನ ಬುಟ್ಟಿಯಲ್ಲಿ ಎಲ್ಲ ಬೊಂಬೆಯೂ ಉಂಟು. ಗಣಪತಿ, ಕೃಷ್ಣ-ರಾಧೆ, ಶಿವ-ಪಾರ್ವತಿ, ವಿವೇಕಾನಂದ, ಗಾಂಧೀಜಿ, ಏಸುಕ್ರಿಸ್ತ, ನವಿಲು, ಡುಮ್ಮ-ಡುಮ್ಮಿ, ಗಿಣಿಗಳು, ಅಳುವ ಮಗು, ಬಸವಣ್ಣ, ಗಾಂಧೀಜಿಯವರ ತತ್ವ ಸಾರುವ ಮೂರು ಕೋತಿಗಳು…. ಒಂದೆ, ಎರಡೇ ಇವನ ಬುಟ್ಟಿ ಎಂದರೆ ಒಂದು ಮಿನಿ ಭಾರತವಿದ್ದಂತೆ! ಅದರೊಳಗೆ ಎಷ್ಟೊಂದು ಬಣ್ಣದ ವಿಭಿನ್ನ ರೀತಿಯ ಬೊಂಬೆಗಳು! ಒಂದೊಂದು ಬೊಂಬೆಗೂ ಅದರದ್ದೇ ಆದ ಮಹತ್ವ, ತತ್ವ, ಅದರದ್ದೇ ವಿಭಿನ್ನ ರೂಪು, ಚಾಪು. ಬೊಂಬೆಗೆ ಬಳಿದ ಬಣ್ಣಗಳೂ ಬೇರೆ ಬೇರೆ. ಆದರೆ ಎಲ್ಲಾ ಬೊಂಬೆಗಳನ್ನು ತಯಾರಿಸಲು ಉಪಯೋಗಿಸಿದ ಮೂಲವಸ್ತು ಮಾತ್ರ ಒಂದೇ!

ಸಖಿ, ಒಮ್ಮೆ ಆ ಬೊಂಬೆಗಳಿಗೆ ಮಾನವರನ್ನು ಹೋಲಿಸಿ ನೋಡಿಕೊಂಡರೆ, ಹೇಗೆ? ಆ ಬೊಂಬೆಗಳಂತೆಯೇ ನಮ್ಮೆಲ್ಲರ ಹುಟ್ಟಿನ ಮೂಲಧಾತು ಒಂದೇ. ಅದೇ ರಕ್ತ ಮಾಂಸ ಜೀವ… ಇತ್ಯಾದಿಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಹುಟ್ಟಿಗೆ ಮೊದಲೇ ಮಗುವಿನ ಜಾತಿಯನ್ನು ಗುರುತಿಸುವ ಯಾವ ಸಂಕೇತವನ್ನೂ ಮಗುವಿನಲ್ಲಿ ನಾವು ಕಾಣುವುದಿಲ್ಲ. ಆದರೆ ಮಗು ಹುಟ್ಟಿದೊಡನೆ, ಹುಟ್ಟಿದ ಮನೆಯ ಜಾತಿ, ಭಾಷೆ, ಸಂಸ್ಕಾರ, ಆಚಾರ ವಿಚಾರಗಳಿಗೆ ತಕ್ಕಂತೆ ಮಗುವಿನ ಪರಿಸರವೂ ನಿರ್ಮಾಣವಾಗುತ್ತದೆ. ಮುಸಲ್ಮಾನರ ಮನೆಯಲ್ಲಿ ಹುಟ್ಟಿದ ಜೀವ ಮುಸ್ಲೀಮನಾಗುತ್ತದೆ. ಹಿಂದುವಿನ ಮನೆಯಲ್ಲಿ ಹುಟ್ಟಿದ ಜೀವ ಹಿಂದುವಾಗುತ್ತದೆ. ಹಾಗೇ ಇನ್ನಿತರ ಜಾತಿಗಳಲ್ಲಿ ಹುಟ್ಟಿದ ಜೀವವೂ ಕೂಡ.  ಆದರೆ ವಿಶಾಲಾರ್ಥದಲ್ಲಿ ವಿವೇಚಿಸಿದರೆ ನಾವಲ್ಲರೂ ಒಂದೇ!

ಈ ಸರಳ ತತ್ವವನ್ನೇ ಸಂಕುಚಿತಗೊಳಿಸಿರುವ ನಾವು ಮೇಲು-ಕೀಳು, ಶ್ರೇಷ್ಠ-ನೀಚ ಎಂದೆಲ್ಲಾ ಕಿತ್ತಾಡಿ ಹೊಡೆದಾಡುತ್ತೇವೆ. ನಮ್ಮ ಬಣ್ಣ, ರೂಪ, ಆಚಾರ, ವಿಚಾರ, ವೇಷಭೂಷಣ, ಬುದ್ಧಿ, ವಿವೇಕ ಎಲ್ಲವೂ ವಿಭಿನ್ನವಾಗಿಯೇ ಇರಬಹುದು- ಆದರೆ ಬೊಂಬೆಗೆ ಮೂಲವಸ್ತು ಒಂದೇ ಇದ್ದಂತೆ, ನಮ್ಮೆಲ್ಲರ ಹುಟ್ಟಿಗೆ ಕಾರಣವಾಗಿರುವ ಮೂಲಧಾತು ಒಂದೇ! ಇವನ್ನೆಂದೂ ನಾವು ಮರೆಯಬಾರದು. ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...