ಹೊತ್ತು ಹೊತ್ತಿಗೆ ಕಿಚ್ಚನೆ ಬರಿಸಿದರೆ,
ಕಲೆ ಉರಿದುದೆಂದು,
ಹೊತ್ತು ಹೊತ್ತಿಗೆ ಪ್ರಾಣಕ್ಕೆ
ಪ್ರಸಾದವ ಸ್ಥಾಪ್ಯವ ಮಾಡಿ,
ತನುವ ಖಂಡಿಸದೆ, ಕಾಯವ ಮರಗಿಸದೆ,
ಭಾವವನೆ ಬಯಲು ಮಾಡಿ,
ಭವಕೆ ಸವೆದು, ಕಾಣದಪ್ತತವನೆ ಕಂಡು,
ಮಹಾಬೆಳಗಿನಲಿ ಬಯಲಾದರು
ಕಾಣಾ ಅಪ್ಪಣಪ್ರಿಯ ಚನ್ನಬಸವಣ್ಣಾ.
*****