ಆಯ್ದು ತಿನ್ನುವ ಕೋಳಿಗಳ
ಕಾಲು ಕುತ್ತಿಗೆಗಳು ಯಾವಾಗ ಮುರಿದಾವು
ಎಂದು ಹೇಳಲಾಸಲ್ಲ
ಯಾವ ಹಣ ರಣಹದ್ದುಗಳ ಬಾಯಿಗೆ
ನಮ್ಮ ಹೀಚು ಹೂಮೊಗ್ಗುಗಳು
ಸಿಕ್ಕಾವು ಹೇಳಲಾಸಲ್ಲ
ರಕ್ಕಸ ಬೀದಿಗಳಲ್ಲಿ ಯಮಲೋಕದ
ಬಾಗಿಲುಗಳ ಮುಂದೆ ಸುಳಿದಾಟ

ಆರಡಿ ನೆಲಗಳಿಗೆ, ನಾಲ್ಕು ಹೆಗಲುಗಳಿಗೆ
ಹೊಯ್ದುಕೊಳ್ಳುವ ಬಾಯಿ ಬಸುರುಗಳಿಗೆ
ಮುಂಗಡ ಹೇಳಿದಂತಾಗುವುದೋ,
ವಾಯು ವಿಹಾರದ ಹೊಸ ಪಾರಿವಾಳಗಳ
ಪಿಸುಮಾತುಗಳು ಗಂಟಲಲ್ಲೇ ಸಿಕ್ಕು
ಯಾವ ರಾವಣಪ್ಪರು, ಕೀಚಕನ ಕುಲಜರು
ಆ ಹಸಿ ಮಾಂಸ ಚಪ್ಪರಿಸುವರೋ,
ರೆಕ್ಕೆ ಪುಚ್ಚ ಸುಲಿಯುವರೋ,
ಹೇಳಲಾಸಲ್ಲ

ನಮ್ಮ ಹರಣಗಳು ಗಾಳಿಯಲ್ಲಿ
ಹಾರಾಡಿ ಗೋಳಿಡುತ್ತಿವೆ
ಉಳಿಸಿರೋ ನಮ್ಮ
ನಾವು ದುರ್ಬಲರು! ಅಬಲೆಯರು!
ಹಸುಕಂದಗಳು! ಉಳಿಸಿರೋ
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)