ಪಾಪಿಯ ಪಾಡು – ೨೪

ಪಾಪಿಯ ಪಾಡು – ೨೪

ಮೇರಿಯಸ್ಸನು ಕೋಸೆಟ್ಟಳನ್ನು ಜೀನ್ ವಾಲ್ಜೀನನಿಂದ ಸ್ವಲ್ಪ ಸ್ವಲ್ಪವಾಗಿ ದೂರಮಾಡುತ್ತ ಬಂದನು. ಈ ವಿಷಯದಲ್ಲಿ ಕೋಸೆ ಟ್ಟಳು ಯಾವ ಮಾತನ್ನೂ ಆಡದೆ ಸುಮ್ಮನಿದ್ದಳು. ತಾನು ಅಷ್ಟು ದಿನಗಳಿಂದಲೂ ತಂದೆಯೆಂದು ಕರೆದು ಪ್ರೀತಿಸುತ್ತಿದ್ದವನ ವಿಷಯ ದಲ್ಲಿ ಅವಳಿಗೆ ನಿಜವಾಗಿಯೂ ಬಹಳ ಪ್ರೇಮವಿತ್ತು. ಗಂಡನ ಮೇಲೆಯಾದರೋ ಮತ್ತೂ ಹೆಚ್ಚಿನ ಪ್ರೇಮವಿತ್ತು.

ಜೀನ್ ವಾಲ್ಜೀನನ ಮೇಲೆ ಆಪಾದಿತವಾಗಿದ್ದ ಎರಡು ವಿಷ ಯಗಳು ಮೇರಿಯಸ್ಸನ ಮನಸ್ಸನ್ನು ಬಹಳವಾಗಿ ಕೊರೆಯು ತಿದ್ದುವು. ಅಪರಾಧಿಯೆನಿಸಿ ಶಿಕ್ಷಿತನಾಗಿದ್ದ ಜೀನ್ ವಾಲ್ಜೀ ನನು, ಗ್ರಾವಾಧಿಕಾರಿಯಾದ ಮೆಡಲೀನ್ ಎಂಬಾತನ ಹಣವನ್ನು ಕದ್ದಿದ್ದನೆಂದಾಗಿ ಬ್ಯಾಂಕಿನ ಗುಮಾಸ್ತನೊಬ್ಬನು ತನಗೆ ಹೇಳಿದ ವರ್ತಮಾನವು ಇವುಗಳಲ್ಲಿ ಒಂದು. ಈ ಕಾರಣ ದಿಂದ, ಮೇರಿಯಸ್ಸನು, ತನಗೆ ವರದಕ್ಷಿಣೆಯಾಗಿ ಬಂದಿದ್ದ ಆರು ಲಕ್ಷ ಫಾಂಕುಗಳ ಹಣವನ್ನು ಮುಟ್ಟಲಿಷ್ಟಪಡದೆ, ಮೇಡಲೀ ನನು ಸಂಧಿಸಿದರೆ ಆತನಿಗೆ ಆ ಹಣವನ್ನು ಹಿಂದಕ್ಕೆ ಕೊಟ್ಟುಬಿಡ ಬೇಕೆಂದಾಲೋಚಿಸಿಕೊಂಡಿದ್ದನು.

ಅವನ ಮನಸ್ಸನ್ನು ಬಹಳವಾಗಿ ಬಾಧಿಸುತ್ತಿದ್ದ ಮತ್ತೊಂದು ವಿಷಯವೇನೆಂದರೆ : ಯುದ್ಧವು ನಡೆದ ದಿನ ಜೀನ್ ವಾಲ್ಜೀನನು ಜೇವರ್ಟನನ್ನು ಕರೆದುಕೊಂಡು ಹೋಗುತ್ತಿದ್ದುದನ್ನು ತಾನು ಮದ್ಯದ ಅಂಗಡಿಯ ಕಿಟಿಕಿಯಿಂದ ನೋಡಿದ್ದು, ಅನಂತರ ಗುಂಡು ಹಾರಿದ ಶಬ್ದವನ್ನು ಕೇಳಿದ್ದ ಕಾರಣ, ಜೀನ್ ವಾಲ್ಜೀನನು ಜೇವರ್ಟನನ್ನು ಕೊಂದಿದ್ದನೆಂದು, ತನ್ನ ಮನಸ್ಸಿಗುಂಟಾದ ಕಲ್ಪನೆಯು.

ಮೇರಿಯಸ್ಸನಿಗೂ ಕೋಸೆಟ್ಟಳಿಗೂ ಮದುವೆಯಾಗಿ ಒಂದು ವರ್ಷ ಕಳೆಯಿತು. ಜೀ ವಾಲ್ಜೀನನು ಇವರನ್ನು ನೋಡಿ ಬಹಳ ದಿನಗಳಾಗಿದ್ದುದರಿಂದ ಅವನು ಅವರಿಗೆ ಹೊಸ ಬನಂ ತಾದನು. ಅವನು ಬರಬರುತ್ತ ಬಹಳ ನಿರ್ಬಲನಾಗಿ ರೋಗದಿಂದ ಮಲಗಿದನು. ಕಡೆಗೆ ಅವನ ಪರಿಚಾರಿಣಿಯು ವೈದ್ಯನನ್ನು ಕರೆ ತಂದಳು. ಆತನು ಜೀನ್ ವಾಲ್ಜೀನನನ್ನು ನೋಡಿ, ಮಾತನಾಡಿ ಮಹಡಿಯಿಂದಿಳಿದು ಬಂದ ಮೇಲೆ ಸರಿಚಾರಿಣಿಯು ವೈದ್ಯನನ್ನು ಪ್ರಶ್ನೆ ಮಾಡಿದಳು : ‘ಏನು, ವೈದ್ಯರೇ, ವಿಚಾರ ?’ ‘ ನಿಮ್ಮ ರೋಗಿಯ ರೋಗವು ಪ್ರಬಲವಾಗಿದೆ.’ ‘ ಆತನ ರೋಗವಾದರೂ ಏನು ?’ ‘ ಏನೆಂದು ಹೇಳಲಿ ! ಎಲ್ಲ ರೋಗವೂ ಇದೆ, ಒಂದು ರೋಗವೂ ಇಲ್ಲ. ಹೀಗಾಗಿದೆ. ನೋಡಿದರೆ ಆತನು ಯಾರೋ ತನಗೆ ಅತ್ಯಾಪ್ತರಾದ ಮಿತ್ರರನ್ನು ಕಳೆದುಕೊಂಡು ದುಃಖಪಡು ತ್ತಿರುವಂತೆ ಕಾಣುವುದು. ಇದರಿಂದ ಜನರು ಸಾಯುವುದೂ ಉಂಟು.’ ‘ ಆತನು ತಮಗೆ ಏನನ್ನು ಹೇಳಿದನು ?’ ‘ತಾನು ಆರೋಗ್ಯವಾಗಿರುವೆನೆಂದು ಹೇಳಿದನು.’ ‘ ತಾವು ಮತ್ತೆ ಇಲ್ಲಿಗೆ ಬರುವಿರಾ, ಪಂಡಿತರೇ ?’ ‘ಬರುವೆನು. ಆದರೆ, ನಾನಲ್ಲದೆ ಬೇರೊಬ್ಬರು ಬರಬೇಕು,’ ಎಂದು ವೈದ್ಯನು ಉತ್ತರಕೊಟ್ಟನು.

ಇದಾದ ಸ್ವಲ್ಪ ಕಾಲದ ಮೇಲೆ, ಒಂದು ದಿನ ಜೀನ್ ವಲ್ಜೀನನಿಗೆ ಅತ್ಯಂತ ನಿಶ್ಯಕ್ತಿಯುಂಟಾಗಿ, ತನಗೆ ಅವಸಾನ ಕಾಲವೂ ಸವಿಾಪಿಸಿತೆಂದು ಅವನಿಗೆ ತೋರಿತು. ಬಹು ಪ್ರಯತ್ನ ದಿಂದ, ತನ್ನ ಹಿಂದಣ ಕೆಲಸಗಾರನ ಉಡುಪನ್ನು ಧರಿಸಿ, ಹಸಿಬೆ ಯನ್ನು ತೆರೆದು, ಕೋಸೆಟ್ಟಳ ಕರಿಯ ಉಡುಪನ್ನು ತೆಗೆದು ಹಾಸುಗೆಯಮೇಲೆ ಹಾಸಿದನು. ಅನಂತರ, ಆಗ ಹಗಲಾಗಿ ಬೆಳಕಿದ್ದರೂ, ಎರಡು ಮೇಣದ ಬತ್ತಿಗಳನ್ನು ಮೇಜಿನಿಂದ ತೆಗೆದು, ಅಲ್ಲಿದ್ದ ಬೆಳ್ಳಿಯ ಕೊಳವೆಯೊಳಕ್ಕೆ ಸೆಕ್ಕಿ ಹಚ್ಚಿದನು. ಅದಾದ ಮೇಲೆ ಬಹು ಪ್ರಯಾಸದಿಂದ ಕೋಸೆಟ್ಟಳಿಗೆ ಒಂದು ಕಾಗದವನ್ನು ಬರೆಯಲಾರಂಭಿಸಿದನು.

ಅನಂತರ ಹಾಗೆಯೇ ಬರೆವಣಿಗೆಯನ್ನು ನಿಲ್ಲಿಸಿದನು. ಲೇಖನಿಯು ಬೆರಳಿಂದ ಕಳಚಿ ಬಿದ್ದು ಹೋಯಿತು. ತನ್ನ ಸ್ಥಿತಿ ಯನ್ನು ಕುರಿತು ಅವನಿಗೆ ಆಗಾಗ ಉಂಟಾಗುತ್ತಿದ್ದ ಕೇವಲ ನಿರಾಶೆಯ ದುಃಖದಲ್ಲಿ ಸಿಕ್ಕಿ ಬಿಕ್ಕಿ ಬಿಕ್ಕಿ ಅಳುವುದಕ್ಕಾರಂಭಿಸಿ ದನು. ಪಾಪ ! ಎರಡು ಕೈಗಳಿಂದಲೂ ತಲೆಯನ್ನು ಹಿಡಿದು ಕೊಂಡು ಚಿಂತಿಸುತ್ತ ಕುಳಿತು, ತನ್ನಲ್ಲಿ ತಾನು ಗಟ್ಟಿಯಾಗಿ ಅಳು ವುದಕ್ಕೆ ಮೊದಲು ಮಾಡಿದನು. ಪಾಪ! ಅವನ ಆಕ್ರಂದನವು ದೇವರೊಬ್ಬನೇ ಕೇಳಿದವನು.

‘ ಮುಗಿಯಿತು, ಎಲ್ಲವೂ ಮುಗಿಯಿತು. ಇನ್ನು ಅವಳನ್ನು ನಾನೆಂದೆಂದಿಗೂ ಕಾಣುವಂತಿಲ್ಲ. ನನ್ನ ಜೀವಮಾನದಲ್ಲಿ ಅವಳು ನನಗೊಂದು ಆನಂದಜ್ಯೋತಿಯಾಗಿದ್ದಳು. ಇನ್ನು ಅವಳ ಮುಖ ವನ್ನೇ ನೋಡದೆ ನಾನು ಅಂಧಕಾರದಲ್ಲಿ ಬೀಳುವೆನು. ಅಯ್ಯೋ ! ಒಂದು ನಿಮಿಷ ಮಾತ್ರ, ಒಂದು ಕ್ಷಣಮಾತ್ರ) ಅವಳ ಧ್ವನಿಯನ್ನು ಕೇಳಿ, ಅವಳ ಉಡುಪುಗಳನ್ನು ಮುಟ್ಟಿ ಆ ದೇವ ಕನೈಯ ಮುಖ ವನ್ನು ನೋಡಿ ಸಾಯಬೇಕಲ್ಲವೇ ? ಸಾಯುವುದಕ್ಕೆ ನನಗೆ ಭಯವಿಲ್ಲ ; ಆದರೆ ಅವಳನ್ನು ನೋಡದೆ ಸಾಯುವುದೆಂದರೆ ನನ್ನ ಎದೆಯು ಒಡೆಯುವುದು. ಅವಳು ನನ್ನನ್ನು ನೋಡಿ ಒಂದು ಸಲ ಕಿರುನಗೆ ನಕ್ಕರೆ ಸಾಕು. ನನ್ನೊಡನೆ ಒಂದು ಮಾತನ್ನಾಡಿ ದರೂ ಸಾಕು, ಅದರಿಂದ ಯಾರಿಗಾದರೂ ತೊಂದರೆಯೇ ? ಇಲ್ಲ, ಅದೆಲ್ಲವೂ ಪೂರಯಿಸಿತು. ಎಲ್ಲಕ್ಕೂ ಅಂತ್ಯವಾಯಿತು. ಇದೋ, ನಾನೊಬ್ಬಂಟಿಗನೇ ! ದೇವರೇ ! ದೇವರೇ ! ಅವಳನ್ನು ನಾನು ಇನ್ನೊಂದೆಂದಿಗೂ ನೋಡುವಂತಿಲ್ಲ ವೇ !’ ಎಂದು ದುಃಖಿಸು ತ್ತಿದ್ದನು.

ಇಷ್ಟು ಹೊತ್ತಿಗೆ ಯಾರೋ ಕದವನ್ನು ತಟ್ಟಿದರು. ಅದೇ ದಿನ ಥೆನಾರ್ಡಿಯರನು, ಮೇರಿಯಸ್ಸನಿಗೆ, ಜೀನ್ ವಾಲ್ಜೀನನು ತಲೆತಪ್ಪಿಸಿಕೊಂಡು ತಿರುಗುವ ಅಪರಾಧಿಯೆಂದು ಹೇಳಿ, ಅವನಿಂದ ಸ್ವಲ್ಪ ಹಣವನ್ನು ಕಸಿದುಕೊಳ್ಳಬೇಕೆಂಬ ಉದ್ದೇಶ ದಿಂದ ಮೇರಿಯಸ್ಸನ ಮನೆಗೆ ಬಂದಿದ್ದನು. ಜೀನ್ ವಾಲ್ಜೀನನು ಮೆಡಲಿನನ ಹಣವನ್ನು ಕದ ಕಳ್ಳನೆಂದೂ, ಜೇವರ್ಟನನ್ನು ಕೊಂದ ಕೊಲೆಪಾತಕನೆಂದೂ ತನಗೆ ತಿಳಿದಿತೆಂದು ಮೇರಿಯಸ್ಕನು ಥೆನಾ ರ್ಡಿಯರನಿಗೆ ಉತ್ತರ ಹೇಳಿದನು, ಥೆನಾರ್ಡಿಯರನು ಹಳದಿಯ ಬಣ್ಣಕ್ಕೆ ತಿರುಗಿದ್ದ ಕೆಲವು ಹಳೆಯ ವರ್ತಮಾನ ಪತ್ರಿಕೆಗಳ ತುಂಡುಗಳನ್ನು ತೋರಿಸಿ ಮೇರಿಯಸ್ಸನ ಈ ತಪ್ಪು ತಿಳುವಳಿಕೆ ಯನ್ನು ತಿದ್ದಿದನು. ಒಂದರಲ್ಲಿ ಜೀನ್ ವಾಲ್ಜೀನನೂ ಮೇಡ ಲಿನನೂ ಒಬ್ಬನೇ ಮನುಷ್ಯನೆಂದು ಸ್ಫುಟಪಟ್ಟಿತ್ತು. ಇನ್ನೊಂದ ರಲ್ಲಿ ಬೇವರ್ಟನು ತನ್ನ ಮೇಲ್ಪಟ್ಟ ಅಧಿಕಾರಿಗೆ ಬರೆದಿದ್ದ ಒಂದು ಲೇಖನದಿಂದ, ಒಬ್ಬ ಮನುಷ್ಯನು ತನ್ನ ತಲೆಯನ್ನು ಹಾರಿಸುವುದಕ್ಕೆ ಪ್ರತಿಯಾಗಿ ಪಿಸ್ತಲನ್ನು ಅಂತರಿಕ್ಷಕ್ಕೆ ಹಾರಿಸಿ ತನ್ನ ಪ್ರಾಣವನ್ನು ಉಳಿಸಿದನೆಂದು ತಿಳಿಸಿದ್ದ ವಿಚಾರವು ಪ್ರಕಟವಾಗಿತ್ತು.

ಇದರಿಂದ ಜೀನ್ ವಾಲ್ಜೀನನು ತಟ್ಟನೆ ಘನತೆಗೇರಿ ಅಪ ವಾದ ವಿಮುಕ್ತನಾದನು. ಮೋರಿಯಸನಿಗೆ ಆನಂದವು ಉಕ್ಕಿ. ಮೇರೆ ವಿಾರಿ, ಆಹಾ ! ಈ ದುಃಖಿಯು ಬಹು ವಿಚಿತ್ರ ಪುರುಷನು ! ಆ ಆಸ್ತಿಯೆಲ್ಲವೂ ಅವನದೇ ನಿಜ, ಅವನೇ ಮೇಡಲಿ ನನು, ಅವನೇ ಬಡವರ ಬಂಧು, ದೇವತಾ ಪುರುಷ, ಅವನೇ ಜೀನ್ ವಾಲ್ಸಿನಸು-ಜೇವರ್ಟನ ಪ್ರಾಣದಾನ ಮಾಡಿದವನು ! ಅವನೇ ಧೀರ ! ಅವನೇ ಪೂಜ್ಯ ! ‘ ಎಂದು ಉದ್ಘೋಷಿಸಿದನು.

ಅದಕ್ಕೆ ಥೆನಾರ್ಡಿಯರನು, ‘ ಅವನು ಪೂಜ್ಯನೂ ಅಲ್ಲ, ಧೀರನೂ ಅಲ್ಲ. ಅವನೊಬ್ಬ ಕೊಲೆಪಾತಕ, ಕಳ್ಳ, ಸುಮಾರು ಒಂದು ವರ್ಷದ ಹಿಂದೆ, ಪ್ಯಾರಿಸ್ ನಗರದಲ್ಲಿ ಯುದ್ದವು ನಡೆದ ದಿನ, ಒಬ್ಬನು ಈ ನಗರದ ನೆಲಮಾಳಿಗೆಯ ಚರಂಡಿ ಯೊಳಗಿನಿಂದ ತಾನು ಕೊಂದಿದ್ದ ಒಬ್ಬ ಮನುಷ್ಯನ ಹೆಣವನ್ನು ಹೊತ್ತುಕೊಂಡು ಬರುತ್ತಿದ್ದುದನ್ನು ನಾನು ಕಂಡು ಅವನೊಡನೆ ಮಾತನಾಡುತ್ತ, ಮೆಲ್ಲನೆ ಅವನಿಗೆ ತಿಳಿಯದಹಾಗೆ ಆ ಸತ್ಯವನ ಅಂಗಿಯಲ್ಲಿ ಒಂದು ಚೂರು ಬಟ್ಟೆಯನ್ನು ಹರಿದುಕೊಂಡೆನು. ತಿಳಿಯಿತೇ ? ಆ ಹೆಣವನ್ನು ಹೊತ್ತುಕೊಂಡು ಬರುತ್ತಿದ್ದವನೇ ಜೀನ್ ವಲ್ಜೀನನು. ಅವನೊಡನೆ ಮಾತನಾಡಿದವನೇ ಈಗ ನಿನ್ನೊ ಡನೆ ಮಾತನಾಡುತ್ತಿರುವ ನಾನು, ಇದೋ ಆ ಅಂಗಿಯ ಚೂರು.’

ಥೆನಾರ್ಡಿಯರನು ಹೀಗೆ ಹೇಳುತ್ಯ, ರಕ್ತದ ಕರೆಗಳಾಗಿದ್ದ ಒಂದು ಕಪ್ಪು ಬಟ್ಟೆಯ ತುಂಡನ್ನು ತನ್ನ ಜೇಬಿನಿಂದ ತೆಗೆದು ತೋರಿಸಿದನು.

ಮೇರಿಯಸ್ಸನ ಮುಖವು ಕಳೆಗೆಟ್ಟಿತು. ಉಸಿರಾಡಿಸು ವನೋ ಇಲ್ಲವೋ ಎಂಬಂತೆ ಸ್ತಬ್ದ ನಾದನು. ಅವನ ದೃಷ್ಟಿ ಯೆಲ್ಲವೂ ಆ ಕರಿಯ ಬಟ್ಟೆಯ ಮೇಲೆಯೇ ನಟ್ಟಿತು. ಆಗ ಒಂದು ಮಾತನ್ನೂ ಆಡದೆ, ಆ ಬಟ್ಟೆಯನ್ನೇ ನೋಡುತ್ತ, ಹಿಂದು ಹಿಂದಕ್ಕೆ ಗೋಡೆಯ ಬಳಿಗೆ ಹೋಗಿ, ಚಿಮಣಿಯ ಬಳಿಯಲ್ಲಿದ್ದ ಕಿರುಮನೆಯ ಬಾಗಿಲಿನ ಬೀಗಕ್ಕೆ ತಗುಲಿಸಿದ್ದ ಬೀಗದಕೈಗಾಗಿ ಬಲಗೈಯಿಂದ ತಡಕಿದನು. ಬೀಗದಕ್ಕೆ ಸಿಕ್ಕಿತು. ಥೆನಾರ್ಡಿ ಯರನು ಹಿಡಿದಿದ್ದ ಬಟ್ಟೆಯ ಚೂರಿನ ಮೇಲೆ ಬೆರಗಾಗಿ ನಟ್ಟಿದ್ದ ಇವನ ದೃಷ್ಟಿಯನ್ನು ಬೇರೆಮಾಡದೆ ಹಾಗೆಯೇ ಹಿಂದಕ್ಕೆ ಕೈ ಹಾಕಿದನು.

;ಆತನು ಹೊತ್ತು ತಂದ ಮನುಷ್ಯನು ನಾನೇ, ಇದೋ ಆ ಅಂಗಿ!’ ಎಂದು ಮೇರಿಯಸ್ಸನು ಕೂಗಿ, ರಕ್ತದ ಕಲೆಗಳಿಂದ ತುಂಬಿದ್ದ ಒಂದು ಹಳೆಯ ಕರಿಯ ಅಂಗಿಯನ್ನು ಜಮುಖಾನದ ಮೇಲೆ ತೆಗೆದೆಸೆದನು. ಥೆನಾರ್ಡಿಯರನ ಕೈಯಿಂದ ಆ ಬಟ್ಟೆಯ ಚೂರನ್ನು ಎಳೆದುಕೊಂಡು, ಅಂಗಿಯ ಮೇಲಕ್ಕೆ ಬಾಗಿ, ಹರಿದಿದ್ದ ಅಂಚಿಗೆ ಅದನ್ನು ಇಟ್ಟು ನೋಡಿದನು. ಅಂಚುಗಳು ಸ್ವಲ್ಪವೂ ವ್ಯತ್ಯಾಸವಿಲ್ಲದೆ ಸರಿಯಾಗಿ ಹೊಂದಿಕೊಂಡುವು. ಈ ಚೂರನ್ನು ಸೇರಿಸಲು ಅಂಗಿಯು ಪೂರ್ತಿಯಾಗಿ, ಹರಕು ಮುಚ್ಚಿತು.

ಮೇರಿಯಸ್ಸನು ನಡುಗುತ್ಯ, ನಿರಾಶನಾಗಿ, ತಳಪಳಿಸುತ್ತ ಎದ್ದನು. ಜೇಬಿಗೆ ಕೈಹಾಕಿ, ಮಹಾ ರೋಷದಿಂದ ಥೆನಾರ್ಡಿ ಯರನ ಬಳಿಗೆ ಬಂದು, ಒಂದು ಸಾವಿರದೈನೂರು ಫಾಂಕುಗಳ ಬೆಲೆಯ ನೋಟುಗಳನ್ನು ಮುಷ್ಟಿಯಿಂದ ಅವನ ಮುಖಕ್ಕೆ ಚುಚ್ಚುವಂತೆ ಹಿಡಿದು, “ ತೆಗೆದುಕೊ, ನೀನೊಬ್ಬ ನೀಚ, ಸುಳ್ಳು, ಗಾರ, ಚಾಡಿಕೋರ, ಪಟಿಂಗ! ಆ ಮನುಷ್ಯನಲ್ಲಿ ದೋಷಾ ರೋಪಣೆ ಮಾಡಲು ಬಂದು, ಆತನು ಸತ್ಯವಂತನೂ ಯೋಗ್ಯನೂ ಎಂಬುದನ್ನು ವ್ಯಕ್ತಗೊಳಿಸಿದೆ. ಆತನನ್ನು ನಾಶಮಾಡಬೇಕೆಂದು ಬಂದು, ಆತನ ಪ್ರಭಾವವನ್ನು ಹೊರಗೆಡಹಿದವನಾದೆ, ಹೋಗು, ತೊಲಗು ! ವಾರ್ಟಕದನ ಸಂದರ್ಭದಿಂದ ಮಾತ್ರವೇ ನೀನು ನನ್ನ ಕೈ ತೋಪದಿಂದ ಪಾರಾಗಿರುವೆ,’ ಎಂದು, ಕೆರಳಿ ನುಡಿದನು.

‘ ಹೀಗೆ ಮೇರಿಯಸ್ಸನು ಒಂದು ಸಾವಿರದೈನೂರು ಫ್ರಾಂಕುಗಳ ನೋಟುಗಳನ್ನು ಥೆನಾರ್ಡಿಯರನ ಕಡೆಗೆ ಎಸೆದು ಅವನನ್ನು ಮನೆಯಿಂದಾಚೆಗೆ ತಳ್ಳಿದನು. ಅನಂತರ ಕೋಸೆಟ್ಟಳನ್ನು ಕೂಗಿ, ಜೀನ್ ವಾಲ್ಜೀನನನ್ನು ನೋಡಬೇಕೆಂದು ಆತುರದಿಂದ ಹೊರಟನು.
*****
ಮುಂದುವರೆಯುವುದು

ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್‌”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆತ್ಮರಾಗ
Next post ಕೋಲಾಟದ ತುಂಡು ಪದಗಳು (೧)

ಸಣ್ಣ ಕತೆ

 • ನಿರಾಳ

  ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

 • ಟೋಪಿ ಮಾರುತಿ

  "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

 • ಒಲವೆ ನಮ್ಮ ಬದುಕು

  "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

 • ದೇವರೇ ಪಾರುಮಾಡಿದಿ ಕಂಡಿಯಾ

  "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

 • ಮೈಥಿಲೀ

  "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…