ಆಹಾ ನನ್ನ ಬಾಳು ಇದೆಯೇನು!
ಸ್ವಾರ್‍ಥವೆ ನನ್ನ ಉಪಯೋಗವೇ
ದೈವ ಧರ್‍ಮಗಳ ಮಾತನಾಡಿ
ಸುಳ್ಳು ಮೋಸಗಳ ಯೋಗವೆ!

ಆತ್ಮದಲ್ಲಿ ನಡೆದ ರಾಗಗಳಿಗೆ
ಕೇಳದೆ ಮಾಡುತಿಹೆ ಕೋಲಾಹಲ
ನಿನ್ನವರು ನಿನ್ನ ಮನ ಓಲೈಸಲು
ಕುಡಿಯುತ್ತಿರುವೆ ನಿತ್ಯ ಹಾಲಾಹಲ

ಎಂದಿಗಾದರೂ ನೀನು ತೊರೆದು
ಪರಮಾತ್ಮನ ಧ್ಯಾನಿಸಬೇಕಲ್ಲವೆ!
ಎಷ್ಟೊತ್ತಿನ ವರೆಗೂ ಇದ್ದರೂ
ಮೂಲ ಸ್ಥಾನಕ್ಕೆ ಮನ್ನಿಸಬೇಕಲ್ಲವೆ!

ಬಾಳಿನಲ್ಲಿ ಅಸತ್ಯಗೆ ಹವಣಿಸದಿರೂ
ಕುಶಲ ಬದುಕಿಗೆ ಹಪ ಹಪಿಸದಿರೂ
ನಿನ್ನೆದೆಯಲಿ ಪವಿತ್ರ ವಿದ್ದರ ಮಾತ್ರ
ಮಾಣಿಕ್ಯ ವಿಠಲನಂತೆ ಬಾಳಿರು
*****