ಕೋಲಾಟದ ತುಂಡು ಪದಗಳು (೧)

(ಹೂಂಗಾ ತರೋ ಮಲ್ಲಗೀರಣ್ಣಾ )

ಹೂಂಗಾ ತರೋ ಮಲ್ಲಿಗೀರಣ್ಣಾ
ಹೂಂಗಿನ ಬೆಲಿಯೇನೇಲ್ ಕೇಳ್ ಬಾರ್ ಚಿನ್ನಾ
ಕೋಲು ಕೋಲನ್ನ ಕೋಲ ಕೋಲನ್ನಾ
ಕೋಲು ಕೋಲು ಕೋಲನ್ನ || ೧ ||

ಸಂಪುಗೆ ಸಂಪುಗೆ ಯಾವೂರ ಸಂಪುಗೇ?
ದ್ಯೇವರಿಗೆ ಹೋಗ್ ಸಂಪಿಗೇ
ದ್ಯೇವರಿಗೆ ಹೋಗ್ ಮಿಂದಾ ಮಕ್ಳ
ತುರ್‍ವ ನೋಡ್ ಸಂಪಿಗೇ
ಕ್ಯೇದುಗೇ ಕ್ಯೇದುಗೇ ಯಾತರ ಕ್ಯಾದುಗೇ
ದೇವರಿಗೆ ಹೋಗ್ವ ಕ್ಯಾದುಗೇ || ೨ ||

ಮಲ್ಲುಗೇ ಮಲ್ಲುಗೇ ಯಾತರ ಮಲ್ಲುಗೇ
ದೇವರಿಗೆ ಹೋಗ್ ಮಿಂದಾ ಮಕ್ಳ
ತುರವ ನೋಡ್ ಮಲ್ಲುಗೇ
ಮಲ್ಲುಗೇ ಮಲ್ಲುಗೇ ಯಾತರ ಮಲ್ಲುಗೇ
ದ್ಯೇವರಿಗೆ ಹೋಗ್ವ ಮಲ್ಲುಗೇ
ದೇವರಿಗೆ ಹೋಗ್ವ ಮಲ್ಲುಗೇ || ೩ ||

ಅಳ್ಳದ ಹೂಗು ಬೆಳ್ಳಗಾದ್ರೆ ಮಲ್ಲಿಗೇನ ಮಾಡ್ವದೂ
ಚೆಲ್ವಿ ಗಂಡ ಚೆಲ್ವಿನಾದ್ರೆ ಜಾನಕೇನ್ ಸಲ್ವರೋ
ಕೋಲು ಕೋಲನ್ನ ಕೋಲ ಕೋಲನ್ನಾ
ಕೋಲು ಕೋಲು ಕೋಲು ಕೋಲನ್ನಾ || ೪ ||

ರೋಟ್ಟಿಯ ತಿಂದೆ ನೋಡೂ ತುಪ್ಪದಿಂದಾ
ನಾನ ಸೋಳಪ್ಪುದೂ ನಾನ್ ರೊಕ್ಕದಿಂದಾ
ಬಚುವನಾ ಬಚುವನ್ನಿರೇ ಬಚವನಾ
ಪಾದಕೆ ಚರಣೆನ್ನಿರೇ || ೫ ||

ಮೇನೆ ಮುತ್ತಿನ ಚತುಗೇ ಆದ ನನ್ನ
ಕಲ್ಲಾ ಪಾಂಡೋರ ಬಚುವೇ
ಕೋಲು ಕೋಲನ್ನ ಕೋಲ ಕೋಲನ್ನಾ
ಕೋಲು ಕೋಲು ಕೋಲು ಕೋಲನ್ನಾ || ೬ ||

ಕಾರಿಕಾಯು ಕಡಜಲಕಾಯು ಹೊಡೆದಾಟ
ವಳ್ಳೆ ಗಂಡಗೆ ಹೋಗು ಪುಂಡಿಗ್ಯೆಲ್ಲ ಹೊಡೆದಾಟ
ಕೋಲು ಕೋಲನ್ನ ಕೋಲ ಕೋಲನ್ನಾ
ಕೋಲು ಕೋಲು ಕೋಲು ಕೋಲನ್ನಾ || ೭ ||
*****

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಪಿಯ ಪಾಡು – ೨೪
Next post ನರ ಚಿತ್ತ ವ್ಯರ್‍ಥವಲ್ಲವೇ? ಸುರೆ ಪಿತ್ತವೇರಿದರೆ?

ಸಣ್ಣ ಕತೆ

 • ಗದ್ದೆ

  ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

 • ಮಾದಿತನ

  ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

 • ಮಿಂಚಿನ ದೀಪ

  ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

 • ಆ ರಾತ್ರಿ

  ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…