ಅವರು ಸಲಹಾ ಕೇಂದ್ರದಲ್ಲಿ ಮಾನಸಿಕ ರೋಗಿಗಳಿಗೆ ಆಪ್ತ ಸಲಹೆ ನೀಡುತ್ತಿದ್ದರು. ಇವರು ಎಷ್ಟು ನನ್ನ ಹತ್ತಿರದವರಾಗಿ ಮನದಾಳದಲ್ಲಿ ಹೊಕ್ಕು ಸಲಹೆ ನೀಡುತ್ತಾರೆ ಎಂದು ಅನಿಸುತಿತ್ತು. ರೋಗಿಯನ್ನು ರಸ್ತೆಯಲ್ಲೋ, ಮಾರುಕಟ್ಟೆಯಲ್ಲೋ ಎದುರಾದಾಗ ಅಪರಿಚಿತರಂತೆ ಹೋಗಿಬಿಡುತ್ತಿದ್ದರು. ರೋಗಿಗೆ ಅವರ ವೃತ್ತಿಪರತೆಯ ಬಗ್ಗೆ ಬಹಳ ಗೌರವವಿದ್ದರೂ, ಒಂದು ಮುಗುಳು ನಗೆ ಎಷ್ಟು ದುಬಾರಿ ಎಂದು ಮನಸ್ಸು ಖಿನ್ನವಾಗುತಿತ್ತು.
*****