“ಫಾರ್ಚೂನ್- ೫೦೦ ಲಾರ್‍ಜೆಸ್ಟ್ ಕಂಪೆನೀಸ್” ಪಟ್ಟಿಯಲ್ಲಿ ಇಡೀ ವಿಶ್ವದ ೫೦೦ ಬೃಹತ್ ಕಂಪನಿಗಳ ಪಟ್ಟಿಯಲ್ಲಿ ಭವ್ಯ ಭಾರತದ ಏಳು ಅದ್ಭುತ ಕಂಪನಿಗಳೂ ಸ್ಥಾನಮಾನ ಪಡೆದುಕೊಂಡಿರುವುದೊಂದು ಹೆಗ್ಗಳಿಕೆಯ ವಿಷಯವಾಗಿದೆ.

೧ ಭವ್ಯ ಭಾರತದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒ‌ಎನ್‌ಜಿಸಿ)

೨ ಭಾರತೀಯ ತೈಲ ನಿಗಮ (ಐ‌ಒಸಿ)

೩ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷಸನ್ ಲಿಮಿಟೆಡ್ (ಎಚ್ ಪಿಸಿ‌ಎಲ್)

೪ ರಿಲಿಯನ್ಸ್ ಇಂಡಸ್ಟ್ರೀಸ್

೫ ಟಾಟಾ ಮೋಟಾರ್‍ಸ್

೬ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿ‌ಐ)

೭ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿ‌ಎಲ್)

ಇವೆಲ್ಲ “ಫಾರ್ಚೂನ್ ೫೦೦ ಲಾರ್‍ಜ್‌ಸ್ಟ್ ಕಂಪನೀಸ್” ಪಟ್ಟಿಗೆ ಸೇರಿವೆ.

ಜಾಗತಿಕ ಮಟ್ಟದ ಈ ೫೦೦ ಬೃಹತ್ ಕಂಪನಿಗಳು ೨೦೧೪ ರಲ್ಲಿ ಒಟ್ಟಾರೆಯಾಗಿ ೩೧.೨ ಲಕ್ಷ ಕೋಟಿ ಅಮೆರಿಕನ್ ಡಾಲರ್ ವರಮಾನ ಗಳಿಸಿದ್ದು ಒಟ್ಟು ೧.೭೦ ಲಕ್ಷ ಕೋಟಿ ಡಾಲರ್‌ಗಳಷ್ಟು ನಿವ್ವಳ ಲಾಭದತ್ತ ಮುನ್ನಡೆದಿದ್ದವು!

ಈ ೫೦೦ ಕಂಪನಿಗಳು ವಿಶ್ವದ ೩೬ ದೇಶವಿದೇಶಗಳಲ್ಲಿ ವಹಿವಾಟು ನಡೆಸಿದ್ದು ಒಟ್ಟಾರೆಯಾಗಿ ೬೫ ಲಕ್ಷ ಮಂದಿಗೆ ಈಗಾಗಲೇ ಉದ್ಯೋಗ ನೀಡಿವೆ.

ಈ ಫಾರ್ಚೂನ್ ೫೦೦ ಲಾರ್‍ಜೆಸ್ಟ್ ಕಂಪನೀಸ್- ಪಟ್ಟಿಯಲ್ಲಿ ವಾಲ್‌ಮಾರ್ಟ್ ಮೊತ್ತ ಮೊದಲ ಸ್ಥಾನದಲ್ಲಿದೆ.

ಚೀನಾದ ತೈಲ ಸಂಸ್ಕರಣೆ ಕಂಪನಿ ಆನ್ ಒಪೆಕ್ ಗ್ರೂಪ್ ಎರಡನೆಯ ಸ್ಥಾನದಲ್ಲಿದೆ.

ನೆದರ್‌ಲೆಂಡಿನ ರಾಯಲ್ ಡಚ್‌ಷಲ್, ಚೀನಾ ನ್ಯಾಷನಲ್ ಪೆಟ್ರೋಲಿಯಂ ಎಕ್ಸಾನ್ ಮೊಬಿಲ್ ನಂತರದ ಸ್ಥಾನಮಾನದಲ್ಲಿದೆ.

ಈ ೫೦೦ ಜಾಗತಿಕ ಮಟ್ಟದ ಕಂಪನಿಗಳಲ್ಲಿ ಆಪಲ್ ೧೫ ನೇ ಸ್ಥಾನದಲ್ಲಿ ಜೆಪಿ ಮಾರ್ಗನ್ ಚೇಸ್ ೬೧ ನೇ ಸ್ಥಾನದಲ್ಲಿ, ಐಬಿ‌ಎಂ ೮೨ ನೆಯ ಸ್ಥಾನದಲ್ಲಿ, ಮೈಕ್ರೋಸಾಫ್ಟ್ ೯೫ ನೆಯ ಸ್ಥಾನದಲ್ಲಿ ಗೂಗಲ್ ೧೨೪ ನೆಯ ಸ್ಥಾನದಲ್ಲಿ ಪೆಪ್ಸಿ ೧೪೧ ನೆಯ ಸ್ಥಾನದಲ್ಲಿ ಇಂಟೆಲ್ ೧೮೨ ನೆಯ ಸ್ಥಾನದಲ್ಲಿ ಗೋಲ್ಡ್‌ಮನ್ ಸ್ಯಾಕ್ಸ್ ೨೭೮ ನೆಯ ಸ್ಥಾನದಲ್ಲಿ ಇವೆಲ್ಲ ಕಂಪನಿಗಳು ಅಮೆರಿಕ ಮೂಲದವೇ ಆಗಿವೆ.

ಹೋದ ವರ್ಷದೊಂದಿಗೆ ತುಲನೆ ಮಾಡಿದಲ್ಲಿ ಈ ಬಾರಿ ಟಾಟಾ ಮೋಟಾರ್ಸ್ ಹಾಗೂ ಎಸ್‌ಬಿ‌ಐ, ಒ‌ಎನ್‌ಜಿಸಿ- ರಿಲಯನ್ಸ್- ಎಚ್‌ಪಿಸಿ‌ಎಲ್‌- ಬಿಪಿಸಿ‌ಎಲ್ ಇವೆಲ್ಲ ಫಾರ್ಚೂನ್ ಪಟ್ಟಿಯ ಬ್ಯಾಂಕಿಂಗ್‌ನಲ್ಲಿ ಕೆಳಕ್ಕಿಳಿದಿವೆ.

ಏನೇ ಇದ್ದರೂ ಭವ್ಯ ಭಾರತದ ಕಂಪನಿಗಳು ಬೇರೆ ಯಾವುದೇ ದೇಶದ ಕಂಪನಿಗಳಿಗಿಂತ, ಕಡಿಮೆ ಇಲ್ಲವೆಂಬುದೊಂದು ಹೆಗ್ಗಳಿಕೆಯಲ್ಲವೇ??
*****