ಸುಭದ್ರೆ – ೧೮

ಸುಭದ್ರೆ – ೧೮

ಮಾಧವನು ಮುಖ್ಯ ವೈದ್ಯನೊಡನೆ ರೋಗಿಗಳಿರುವ ಸ್ಥಳಕ್ಕೆ ಹೋದನು. ಸುಬದ್ರೆಯು ಮಲಗಿದ್ದ ಕೊಠಡಿಯಬಳಿಗೆ ಬರುತ್ತಲೆ, ವೈದ್ಯನು ಮಾಧವನನ್ನು ಸ್ಕಲ್ತ. ಹೊತ್ತು ಮರೆಯಾಗಿರ ಹೇಳಿ ತಾನೊಬ್ಬನೆ ಒಳಗೆ ಹೋದನು. ಆಗ ಸುಭದ್ರೆಯು ಸಂಪೂ ರ್ಣವಾಗಿ ವಿಕಾಸವಾದ ಕಣ್ಣುಗಳಿಂದ ಮೇಲ್ಚಾವಣಿಯನ್ನು ನೋ ಡುತ್ತಾ ಮಲಗಿದ್ದಳು. ವೈದ್ಯನು “ಸುಭದ್ರಾಬಾಯಿ! ” ಎನ್ನುತ್ತಲೆ ಗಕ್ಕನೆ ತಿರುಗಿ ನೋಡಿದಳು. ಅಯ್ಯೊ! ನೀವೇ? ಅವರು ಬಂದರೇನೋ ಎಂದಿದ್ದೆ.“ ಎಂದು ತನ್ನಷ್ಟಕ್ಕೆ ತಾನೆ ಹೇಳಿಕೊಂಡಳು.

ವೈದ್ಯ– “ಅವರು ಎಂದರೆ ಯಾರು“

ಸುಭದ್ರೆ_-ಇನ್ನಾ ರು? ನನ್ನ ಕಣ್ಣೆದುರಿಗೆ ಇದುವರೆಗೂ ನಿಂತಿದ್ದವರು.

ವೈದ್ಯ_-ಅವರಾರು?

ಸುಭದ್ರೆ– ನಾನು ಹೇಗೆ ಹೇಳಲಿ?

ವೈದ್ಯ-ನಿಮ್ಮ ಭರ್ತನೆ ?

ಸುಭದ್ರೆ ಸುಮ್ಮನಿದ್ದಳು.

ವೈದ್ಯ – ಅವರ ಹೆಸರೇನು ?

ಸುಭದ್ರೆ–ಹೇಗೆ ಹೇಳಲಿ ?

ವೈದ್ಯ—ನಾನು ಹೇಳುತ್ತೇನೆ ಕೇಳಿ, “ಮಾಧವರಾಯರು. “?

ಸುಭದ್ರೆ- ಆಶ್ಚರ್ಯದಿಂದ) ನಿಮಗೆ ಯಾರುಹೇಳಿದರು?

ವೈದ್ಯನು —(ತನ್ನಷ್ಟಕ್ಕೆ ತಾನೆ) “ಇದುವರೆಗೂ ಕಾಣದ ನಗುವು ಈಗ ತೋರಿಬರುತ್ತಿದೆ. . ನಾನು. ಇಷ್ಟನ್ನು ಕಂಡು ಹಿಡಿಯಲಾರದೆ ಹೋದೆನಲ್ಲಾ –ಎಂತಹ ಮೂಢ!“ ಎಂದಂದುಕೊಂಡು. ಸುಭದ್ರೆಯ ಪ್ರಶ್ಕೆ ಗೆ ಉತ್ತರವಾಗಿ “ಅವರೇ” ಎಂದನು.

ಸುಭದ್ರೆ—ಅವರನ್ನೆಲ್ಲಿ ನೋಡಿದ್ದಿರಿ! “

ವೈದ್ಗ — ಇಲ್ಲಿಯೇ !

ಸುಭದ್ರೆ-ಅವರೇತಕ್ಕೆ ಇಲ್ಲಿಗೆ ಬರುವರು ? ಕುಚೋದ್ಯ ಮಾಡುತ್ತೀರಾ?

ವೈದ್ಯ—ಈಗ ಮಾಯಾಮಂತ್ರಮಾಡಿ ಅವರನ್ನು ನಿಮ್ಮೆ ದು ರಿಗೆ ಬರುವಂತೆಮಾಡಲೆ!

ಸುಭದ್ರೆ -ಎಲ್ಲಿ ನೋಡೋಣ

ವೈದ್ಯ —ನೀವು ಎದ್ದು ಕೂತುಕೊಳ್ಳಿ….ಸರಿ.. ಹಾಗೆ…. ಕಣ್ಣುಮುಚ್ಚಿಕೊಳ್ಳಿ ಈಗ ನಾನು ಮಂತ್ರಮಾಡುತ್ತೇನೆ. ಒಂದು, ಎರಡು, ಮೂರು,ಎಂದಕೂಡಲೆ ಕಣ್ಣುಬಿಡಬೇಕು ಅದಕ್ಕೆ ಮುಂಚೆ ಬಿಟ್ಟರೆ ಎಲ್ಲವೂ ಮಾಯವಾಗುವುದು.

ಸುಭದ್ರೆ_ಇದೇನೋ ಬ್ರಾಹ್ಮಣಿತಿಯು ಗಂಡನಿಗೆ ವಡೆ ಮಾಡಿಕೊಟ್ಟ ಕಥೆಯಂತಿದೆ.

ವೈದ್ಗ–ಒಂದು ಸಾರಿ ನನ್ನನ್ನು ಪರೀಕ್ಷೆ ಮಾಡಿ ನೋಡಿದರೆ ನನ್ನ ಮಂತ್ರದ ಮಹಿಮೆಯು ಗೊತ್ತಾಗುವುದು.

ಸುಭದ್ರೆಯುಎದ್ದು ದಿಂಬನ್ನೊರಗಿಳಕೊಂಡು ಕುಳಿತಳು, ಎರಡು ಕೈಗ ಳಿಂದಲೂಕಣ್ಣು ಗಳನ್ನು ಮುಚ್ಛಿ ಕೊಂಡಳು. ವೈದ್ಯನು, “ಹುಂ ! ಮಹಂಕಾಳಿ ! ಚಂಡಿ! ಚಾಮುಂಡಿ ” ಹ್ರೀಂ, ಹ್ರೂಂ, ಪಟಪಟ ಝುಂಕಾರಧ್ವನಿಭೈರವಿ, ನನ್ನ ಇಷ್ಠಾರ್ತವನ್ನು ನೆರವೇರಿಸು“ ಎಂದು, ಸುಭದ್ರೆಯನ್ನು ಕುರಿತು “ಸುಭದ್ರಾಬಾಯಿ! ಒಂದು, ಎರಡು, ಮೂರು. ಎಂದು ಚಿಟಿಕಿಯನ್ನು ಹೊಡೆದನು. ಸುಭದ್ರೆಯು ಕಣ್ದೆ ರೆಯಲಾಗಿ ತನ್ನ ಪ್ರಾಣಸ್ಕ್ರರೂಪನಾದವನೆ ಸ್ವಯಂ ನಿಂತಿದ್ದನು. ಸುಭದ್ರೆಯು ತನ್ನ ಕಣ್ಣನ್ನೆ ತಾನು ನಂಬಲಾರದೆ ಹೋದಳು. ಹಾಗೆಯೆ ಪತಿಯ ಬಾಹುಗಳು ಸ್ಪರ್ಶವಾದುದರಿಂದ ಕನಸಲ್ಲವೆಂದೂ ವ್ಯಕ್ತವಾ ಯಿತು. ದಂಪತಿಗಳಿಬ್ಬರೂ ಆನಂದಾತಿಶಯದಿಂದ ಅವಾಕಕ್ಕಾದರು. ಸುಭದ್ರೆಯು ಆಹಾರನಿದ್ರೆಗಳಿಲ್ಲದೆ ಬಹಳ ಬಡವಾಗಿದ್ದರೂ ಅವಳ ಸೌಂ ದರ್ಯವು ಸ್ನಲ್ಲವೂ ಕಡಿಮೆಯಾಗಿರಲಿಲ್ಲ. ತಲೆಯನ್ನು ಬಾಚಿಕೊಂಡು ಏಷ್ಲೋ ದಿನಗಳಾಗಿ ಹೋಗಿದ್ದುವು. ಹಳೆಯದಾದ ಮಾಸಲು ಬಣ್ಣದ ಸೀರೆಯನ್ನುಟ್ಟಿದ್ದಳು. ಆಭರಣದ, ಸೊಲ್ಲೇ ಇಲ್ಲ. ಹೀಗಿದ್ದ ರೂ ಆ ವಿಶಾಲವಾದ ಕಾಂತಿಯುಳ್ತವಾದ ನೇತ್ರದ್ವೆಯವೂ, ಶುಭ್ರ ವಾದ ದಂತ ಪಂಕ್ತಿಯೂ, ವಿಶಾಲವಾದ ಹಣೆಯೂ, ನಸುನೀಟ ವಾದ ಮೂಗೂ, ಮೇಲಾಗಿ, ಸ್ಕ್ರರ್ಣಕಾಂತಿಗೆ, ಸಮವಾದ ಶರೀರ ಕಾಂತಿಯೂ ಎಂತಹ ವಿರಕ್ತನನ್ನಾ ದರೂ ಮರುಳುಮಾಡುವಂತಿ ದ್ದುವು. ಮಾಧವನ್ನು ತಾನೇ ಧನ್ಯನೆಂದುಕೊಂಡನ್ನು ವೈದ್ಯನು “ನಾನೆಲ್ಲಿಯೂ ಇಂತಹ ಯುಗ್ಮವನ್ನು ನೋಡಲಿಲ್ಲ“ ಎಂದಂದು ಕೊಂಡು, ಮಾಧವನನ್ನು ಕುರಿತು , “ರಾಯರೆ ! ನಾನು ಇನ್ನು ಸ್ವಲ್ಪ ಹೊತ್ತು ಬಿಟ್ಟುಕೊಂಡು ಬರುತ್ತೇನೆ. ಇಲ್ಲಿಯೇ ಇರೋಣಾ ಗಲಿ“ ಎಂದು ಹೇಳಿ ಹೋದನು .

ಸುಭದ್ರೆಯೂ ಮಾಧನನೂ ಏನೇನುಮಾತಾಡು ತ್ತಿದ್ದ ರೋ ನಾವರಿಯಿವು. ಸುಭದ್ರೆಯು ತನ್ನ ಕಷ್ಟಗಳನ್ನೆಲ್ಲಾ ಹೀಳಿಕೊಂಡಿರಬ ಹುದು. ಮಾಧವನೂ ತಾನು ಪಂಡರಾಪುರವನ್ನು ಬಿಟ್ಟು ಹೊರಟ ಮೇಲೆ ನಡೆದು ದೆಲ್ಲನನ್ನೂ ತಿಳಿಸಿರಬಹುದು. ಸ್ವಲ್ಪ ಹೊತ್ತು ಕಳೆದ ಅನಂತರ ಗಂಗಾಬಾಯಿ, ಶಂಕರರಾಯ, ನವಾಬ, ಈ ಮೂರು ಜನವೂ ಆಸ್ಪತ್ರೆಗೆ ಬಂದು ದಂಪತಿಗಳದುರಿಗೆ ನಿಂತರು. ಅವರನ್ನು ವೈದ್ಯನು ಕರೆಯಕಳುಹಿಸಿದ್ದನು. ಸುಭದ್ರೆಗೆ ಅವರನ್ನು ಕಂಡೊಡನೆಯೆ ಎಲ್ಲಿಂದ ಲೋ ಹೊಸ ಶಕ್ತಿಯುಂಟಾಯಿತು.. ಸರಾಗವಾ[\, ಎದ್ದುಕೂರಲಾರದವಳು ಮಂಚದಿಂದ ಕೆಳಗೆ ಜಗ್ಗನೆ ಇಳಿದು ಮೊದಲುಶಂಕರರಾಯ ನಿಗೂ, ಅನಂತರ ಗಂಗಾಬಾಯಿಗೂ ನಮಸ್ಥಾ ರ ಮಾಡಿದಳು. ಇದ ನ್ನೆ ಲ್ಲಾ ನೋಡುತ್ತಿದ್ದ ವೈದ್ಯನಿಗೆ ಪರಮಾಶ್ಚರ್ಯವುಂಟಾಯಿತು. “ಮನಸ್ಸಿನ ಶಕ್ತಿಯ ಮುಂದೆ ಔಷಧದ ಶಕ್ತಿ ಎಷ್ಟರದು?“ ಎಂದನು. ಶಂಕರರಾಯನು ಸುಭದ್ರೆಯ ರೂಪಲಾವಣ್ಯವನ್ನು ನೋಡಿ ಮುಗ್ಧ ನಾದನು. “ಮನೆಗೆ ಮಹಾಲಕ್ಸ್ಮೀ ಸ್ವರೂಪಳಾದವಳ ಮೇಲೆ ನಿಷ್ಕಾ ರಣವಾಗಿ ದ್ವೇಷಮಾಡಿ ಅಮೃತವನ್ನು ವಿಷಮಾಡಿಕೊಂಡಿ ದದೆನಲ್ಲಾ ! ಭಗವಂತನ . ಕರುಣೆಯು ಅಪರಿಮಿತವಾದುದು“ ಎಂದಂದುಕೊಂಡನು.

ಮುಖ್ಯವೈದ್ಗನು ಆಸ್ಪತ್ರೆಯಿಂದ ಸುಭದ್ರೆಯನ್ನು ಕರೆದು ಕೊಂಡು ಹೋಗಬಹುದಿಂದೂ, ಅಳೆಗೆ ಸ್ವಲ್ಪ ಸರಿಯಾದ ಆಹಾರ, ವಿಶ್ರಾಂತಿಗಳನ್ನು ಕೊಟ್ಟರೆ ಒಂದು ವಾರದೊಳಗೆ ಸಂಪೂರ್ಣವಾಗಿ ಗುಣವಾಗುವುದೆಂದೂ ಹೇಳಿದನು, ಅದರಂತೆಯೆ ಸುಭದ್ರೆಯನ್ನು ಕರದುಕೊಂಡುಹೋದರು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚೈತ್ಯಾಲಯ
Next post ಡಂಭಗಳೇಕೆ!

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…