ಮಾತೇ ಜ್ಯೋತಿರ್ಲಿಂಗ ಅನುಭವ
ಮಾತೇ ಜ್ಯೋತಿರ್ಲಿಂಗ
ಸತ್ಯದ ಕಿಡಿಯಿರೆ ಒಳಗೇ
ನಿತ್ಯವು ಬಾಳನು ಬೆಳಗೇ || ಪ ||
ಮಾನವ ಪಡೆದಿಹ ಸಂಪದ ಮಾತು
ಜಾಣರ ಸಾಧನೆ ಬೇರು
ಮೌನದ ಗರ್ಭವು ತಳೆಯುವ ಮಗುವು
ಜ್ಞಾನದ ಫಲವನು ತಂದಿಹುದು || ೧ ||
ಪ್ರೀತಿಯ ಪುಷ್ಪವು ಮಾತಾಗಿರಲಿ
ನೀತಿಯ ಬೀಜವ ತಾ ಪಡೆದು
ನೂತನ ಅರ್ಥವ ಚೆಂದದಿ ತಿಳಿಸುತ
ಜ್ಯೋತಿಯ ಬೆಳಗಲಿ ಹೊಳೆಹೊಳೆದು || ೨ ||
*****