ದೇವರ ಕಾಣಲು

ದೇವರ ಕಾಣಲು ಹೋದವರಿದ್ದಾರೆ ಕಾಡುಬೆಟ್ಟಗಳ ಹಾದು
ಕಾಡ ಕಾಣಲಿಲ್ಲ ಬೆಟ್ಟವ ಕಾಣಲಿಲ್ಲ
ದೇವರ ಕಾಣಲಿಲ್ಲ

ಮರವ ಕಾಣದೆ ಕಾಡ ಕಾಣುವುದು
ಬಯಲ ಕಾಣದೆ ಬೆಟ್ಟವ ಕಾಣುವುದು
ಎಂತೊ ಮನುಷ್ಯ
ಮನುಷ್ಯರ ಕಾಣದ ದೇವರ ಕಾಣುವುದು?

ಪಾಪವ ನೀಗಲು ಹೋದವರಿದ್ದಾರೆ ಪುಣ್ಯ ಕ್ಷೇತ್ರಗಳಿಗೆ
ಅರ್ಘ್ಯ ನೀಡಿದರು ಕಾಸು ನೀಡಿದರು
ಪಾಪ ನೀಗಲಿಲ್ಲ

ಅಹಂಕಾರ ನೀಗದೆ ಮಮಕಾರ ಗಳಿಸುವುದು
ಸ್ವಾರ್ಥ ನೀಗದೆ ಪ್ರೀತಿ ಗಳಿಸುವುದು
ಎಂತೊ ಮನುಷ್ಯ
ಪಾಪ ನೀಗದೆ ಪುಣ್ಯವ ಗಳಿಸುವುದು ?

ಅರಿವು ಗಳಿಸಲು ಹೋದವರಿದ್ದಾರೆ ದೇಶವಿದೇಶಗಳಿಗೆ
ಊರು ಸುತ್ತಿದರು ಮೇರು ಹತ್ತಿದರು
ಅರಿವು ಲಭಿಸಲಿಲ್ಲ

ಹುಟ್ಟೂರು ಕೇರಿಗಳನೆ ಸುತ್ತದವರು ಎಲ್ಲಿ ಹೋದರೆ ಏನು
ಕಾಯಕವಿಲ್ಲದೆ ಕೈಲಾಸ ಎಟುಕುವುದು
ಎಂತೊ ಮನುಷ್ಯ
ಸ್ಥಾವರ ಮರೆತವ ಜಂಗಮನಾಗುವುದು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೬
Next post ಮಾತೇ ಜ್ಯೋತಿರ್ಲಿಂಗ

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…