ಬದುಕಿನ ವಾಸ್ತವತೆಗಳ ಮೇಲೆ ಚೆಲ್ಲಿದ ಬೆಳಕು ಬ್ರೌನಿಂಗ್‌ನ -ಡ್ರೆಮ್ಯಾಟಿಕ್ ಮೊನೊಲಾಗ್ “My last Duchess”

ಬದುಕಿನ ವಾಸ್ತವತೆಗಳ ಮೇಲೆ ಚೆಲ್ಲಿದ ಬೆಳಕು ಬ್ರೌನಿಂಗ್‌ನ -ಡ್ರೆಮ್ಯಾಟಿಕ್ ಮೊನೊಲಾಗ್ “My last Duchess”

ಭಾಗ -೨

ಹಿಂದಿನ ಸಂಚಿಕೆಯಲ್ಲಿ ವಿಮರ್ಶಿಸಿದ “Andrea Del Sarto” ಡ್ರೆಮ್ಯಾಟಿಕ ಮೋನೋಲಾಗ್‌ನಲ್ಲಿ ಹೆಣ್ಣಿನ ಸೋಗಲಾಡಿತನವನ್ನು ಸಮರ್ಥವಾಗಿ ಚಿತ್ರಿಸಿದ್ದ ರಾಬರ್ಟ ಬ್ರೌನಿಂಗ್ “My last Duchess” ಮೊನೋಲಾಗ ನಲ್ಲಿ ಅದ್ವಿತೀಯ ಎನ್ನುವಷ್ಟರ ಮಟ್ಟಿಗೆ ಗಂಡಿನ ಅತಿಯಾದ ಪೊಸೆಸಿವ್ ಅಸೂಯೆಯಿಂದ ಕೂಡಿದ ಸ್ಯಾಡಿಸ್ಟ ಮನೋಭಾವವನ್ನು ಕಟ್ಟಿಕೊಟ್ಟಿದ್ದಾನೆ.

ಆತನೊಬ್ಬ ಡ್ಯೂಕ್ ಇಟಾಲಿಯ ರಾಜ. ಫೆರ್ರಾರಾ ಆತನ ಹೆಸರು. ಅಪ್ರತಿಮ ಸುಂದರಿಯಾದ ತನ್ನ ಮೊದಲ ಪತ್ನಿಯ ಕಲಾಕೃತಿಯನ್ನು ತನ್ನ ಅತಿಥಿಗೆ ತೋರಿಸುತ್ತಿದ್ದಾನೆ. ಅತಿಥಿ ಬೇರಾರೂ ಅಲ್ಲ. ಆತನ ಮಗಳನ್ನು ಎರಡನೆ ಮದುವೆಯಾಗಲಿದ್ದಾನೆ ಡ್ಯೂಕ್.

“That is my last Duchess painted on the wall
Looking as if she were alive”

ಆತನ ಹಿಂದಿನ ಡಚಸ್ ಈಗ ಜೀವಂತವಿಲ್ಲ. ಅವಳ ಕಲಾಕೃತಿಯಿದೆ. ಆತನಿಗೆ ಆಕೆಯ ರೂಪದ ಮೇಲೆ ಬಹಳ ಅಭಿಮಾನ. ಆದರೆ ಚಿತ್ರದಲ್ಲಿಯ ಆಕೆಯ ರೂಪ ಮಾತ್ರ ಆತ ಮೆಚ್ಚಿಕೊಳ್ಳುತ್ತಾನೆ. ಆತನೊಬ್ಬ ಸ್ಯಾಡಿಸ್ಟ. ಅಮರಳಾದ ಡಚಸ್‌ಳ ಬಗ್ಗೆ ಆತನಿಗೆ ಅನುಕಂಪವಿಲ್ಲ. ಪತ್ನಿಯ ಚಿತ್ರ ಅವನ ಪಾಲಿಗೆ ಅದೊಂದು ಕಲಾಕೃತಿಯಷ್ಟೇ. ರಕ್ಕಸ ಸ್ವಭಾವದ, ಧಮನಕಾರಿ ಪ್ರವೃತ್ತಿಯ ಡ್ಯೂಕ್ ಅಸೂಯಾಪರ. ಮುಗ್ಧತೆ ಹಾಗೂ ಸಂತಸಗಳ ಕೊಲೆಗಡುಕ. ಡಚಸ್ ಳ ತೀರಾ ಸೋಷಿಯಲ್ ಮತ್ತು ಎಲ್ಲರೊಂದಿಗೆ ಆತ್ಮೀಯ ಒಡನಾಟ ಆತನಿಗೆ ಇಷ್ಟವಿಲ್ಲ. ಗಂಡಿನ ಧಿಮಾಕು ದರ್ಪದ ಮುಖಗಳ ಪರಿಚಯ ಮಾಡಿಸುತ್ತದೆ ಕಾವ್ಯ. ಆಕೆಯ ನಿಷ್ಕಲ್ಮಶ ನಗುವನ್ನು ಮೆಚ್ಚದವರೇ ಇಲ್ಲ ಆದರೆ ಆತನನ್ನು ಹೊರತುಪಡಿಸಿ. ಆಕೆಯ ವರ್ತನೆ ಆತನಲ್ಲಿ ಅಸಹ್ಯವೆನ್ನಿಸಿತ್ತು. ಡ್ಯೂಕ್ ನೊಬ್ಬನ ಧೂರ್ತ ಸ್ವಭಾವವನ್ನು ರಾಜ ಪತ್ನಿಯನ್ನು ಅಮಾನುಷವಾಗಿ ಕೊಲ್ಲಿಸಿದ. ಆತನ ಮಾತ್ಸರ್ಯದ ಭೀಕರತೆಯನ್ನು ಕವನ ನಾಟಕೀಯವಾಗಿ ಬಿತ್ತರಿಸುತ್ತದೆ. ಆಕೆ ಸುಂದರಿಯರಲ್ಲಿ ಅತಿ ಸುಂದರಿ. ಅಪ್ರತಿಮ ಲಾವಣ್ಯವತಿ. ಅದೇ ಆಕೆಯ ಸಾವಿಗೆ ಕಾರಣ.
ಆತನಿಗೆ ಇರ್ಷೆ ಉಂಟುಮಾಡುವ ಆಕೆಯ ಪ್ರತಿಯೊಂದು ನಡವಳಿಕೆಗಳು ಆಕೆಯನ್ನು ದುರಂತಕ್ಕೆ ದೂಡುತ್ತವೆ. ಆದರೆ ಆಕೆಯೊಂದಿಗೆ ಆ ವಿಚಾರ ಪ್ರಸ್ತಾಪಿಸುವುದು ತನ್ನ ಅಹಂಮಿಕೆಗೆ ಧಕ್ಕೆ ಎಂದುಕೊಂಡ ರಾಜ. ಹಾಗಾಗೆ ಆಕೆಯನ್ನು ಕೊಲ್ಲಿಸಿದ. ಆಕೆ ಬದುಕಿದ್ದಾಗ ಆಕೆಯ ಸೌಂದರ್ಯವನ್ನು ದ್ವೇಷಿಸುತ್ತಿದ್ದ ಆದಕ್ಕಾಗೆ ಆಕೆಯ ಗೋರಿ ತೋಡಿದ. ಸ್ಥಿಮಿತಗೆಟ್ಟ ಮನಸ್ಸಿನ ರಾಜ ಆಕೆಯ ಮರಣಾನಂತರ ಡಚ್‌ಸ್‌ಳ ಚಿತ್ರಿತ ಕಲಾಕೃತಿಯನ್ನು ವರ್ಣಿಸುವ ಪರಿ ಪುರುಷ ಸ್ವಭಾವಕ್ಕೆ ಸಹಜವೆಂಬಂತೆ ಬಣ್ಣಿಸಿದ್ದಾನೆ ಬ್ರೌನಿಂಗ್. ಆತನೊಬ್ಬ ಸ್ವಾರ್ಥಿ. ಪ್ರಾಪಂಚಿಕ.

ಬ್ರೌನಿಂಗ್‌ನ “The Last Ride Together” ಕಾವ್ಯ ಹೊಸ ಹಾಗೂ ಬೆಚ್ಚಗಿನ ಮೆಚ್ಚುಗೆಯ ಸ್ಪಂದನೆಯನ್ನು ಮೂಡಿಸುತ್ತದೆ. ಅದೊಂದು ಫಲಾಪೇಕ್ಷೆಗಳಿಲ್ಲದ ಸಿಹಿಯಾದ ಭಾವನೆ, ಆತನೊಬ್ಬ ಆದರ್ಶ ಪ್ರೇಮಿ. ತನ್ನ ಪ್ರೇಮಿಯಿಂದ ಆತನಿಗೆ ಕೊನೆಯ ನಕಾರದ ಉತ್ತರ ಬಂದಿದೆ. ಕಪ್ಪು ಕಣ್ಣಿನ ಬಾಗಿದ ಹುಬ್ಬಿನ ಆ ಸುಂದರಿಯನ್ನು ಬಯಸಿದ ಆತನ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಆದರಾತ ಉದಾತ್ತ ನಾಯಕ. ಅವಳ ನಕಾರಕ್ಕೆ ಆತ ಅವಳನ್ನು ಶಪಿಸುವುದಿಲ್ಲ. ಧಿಕ್ಕರಿಸುವುದಿಲ್ಲ. ಬದಲಾಗಿ ಆಕೆಗೆ ಆತ ಋಣಿ. ಅವಳ ಸಿಹಿಯಾದ ನೆನೆಪುಗಳ ಅವನೊಂದಿಗೆ ಬೆಸೆದಿದ್ದಕ್ಕಾಗಿ. ಆದರೆ ಆಕೆಯಲ್ಲಿ ಆತನದೊಂದು ಕೊನೆಯ ವಿನಂತಿಯಿದೆ. ತನ್ನ ಬಂಡಿಯಲ್ಲಿ ಕೂತು ಆಕೆ ಅವನೊಂದಿಗೆ ಕೊನೆಯ ಸವಾರಿ ಮಾಡಬೇಕೆಂಬುದು. ಅದಕ್ಕೆ ಆಕೆಯ ಒಪ್ಪಿಗೆಯಿದೆ.

ಆ ಸವಾರಿ ಮೌನದ ದಾರಿಯಲ್ಲಿದೆ. ಆಕೆ ಆತನ ಬಂಡಿಯಲ್ಲಿ ಅವನ ಭುಜಕ್ಕೊರಗಿ ಕಣ್ಣು ಮುಚ್ಚಿ ಕುಳಿತಿದ್ದಾಳೆ. ಇದಾತನ ಸ್ವರ್ಗ ಸಮಾನ ಸುಖ. ಅರೆಕ್ಷಣ ಆತನಿಗೆ ಆ ಭಂಗಿಯಲ್ಲಿ ಇರುವಾಗಲೇ ಈ ಜಗತ್ತಿನ ಕೊನೆಯಾಗಲಿ ಎಂದೆನಿಸುತ್ತದೆ. ಮತ್ತೊಮ್ಮೆ ಸಾಮಾನ್ಯನಾಗಿ ಯೋಚಿಸುತ್ತಾನೆ. ತನ್ನ ಕೈ ತಪ್ಪಿ ಹೋಗಲಿರುವ ಆನಂದ ಈ ಕ್ಷಣ ತನ್ನ ಜೊತೆಗಿದೆ. ತನ್ನ ಮಾತಿಗೆ ತಪ್ಪಿ ಅವಳನ್ನು ಪಡೆಯಬಹುದು. ಆದರೆ ಆ ವರ್ತನೆ ಆಕೆ ತನ್ನನ್ನು ದ್ವೇಷಿಸುವಂತೆ ಮಾಡಬಹುದು. ಆದರೆ ಮರುಕ್ಷಣ ವಿಭಿನ್ನವಾಗಿ ಸನ್ಮಾರ್ಗಿಯಾಗಿ ಮೂಡಿಬರುತ್ತಾನೆ ಆತ. ಸೋಲು ಸಾಮಾನ್ಯ ಸಂಗತಿ. ಎಲ್ಲ ಗಂಡುಗಳಿಗೂ ಅವರಿಗೆ ಬಯಸಿದ್ದೆಲ್ಲವೂ ದೊರೆತ ಸಂದರ್ಭಗಳಿಲ್ಲ. ಗುರಿ ಸಾಧಿಸಿದ ವೀರರಿಗೆಲ್ಲ ರಾಜ ಪದವಿಯೇ ಬಂದೊದಗಿಲ್ಲ. ದೇಶಕ್ಕಾಗಿ ಪ್ರಾಣ ಅರ್ಪಿಸಿದ ಸೇನಾ ಜನರಲ್‌ನ ಅಂತ್ಯ ಸಂಸ್ಕಾರ ಸ್ಮಶಾನದಲ್ಲೆ ನಡೆಯಲ್ಪಡುತ್ತದೆ. ಕವಿಯೊಬ್ಬ ಪ್ರೇಮದ ಪರಿಕಲ್ಪನೆಗಳನ್ನು ಅದ್ಬುತವೆನಿಸುವ ರೀತಿಯಲ್ಲಿ ಕವನಗಳ ಮೂಲಕ ಪ್ರಸಂಶಾತ್ಮಕವಾಗಿ ವಿವರಿಸುತ್ತಾನೆ. ಆದರೆ ಅಂತಹ ಕವಿಯೂ ಸ್ವಂತ ಬದುಕಿನಲ್ಲಿ ಪೂರ್ಣ ಸಂತೃಪ್ತ ಎಂದು ಹೇಳಲಾಗುವುದಿಲ್ಲ ಎಂದು ಯೋಚಿಸುತ್ತ ಪ್ರೇಮಿ ತನ್ನನ್ನು ತಾನು ಸಮಾಧಾನಿಸಿಕೊಳ್ಳುತ್ತಾನೆ. ಶಿಲ್ಪಯೊಬ್ಬ ಕಲ್ಲಿನಿಂದ ಸುಂದರವಾದ ವೀನಸ್‌ನನ್ನು ಕೆತ್ತಲು ಸಾವಿರಾರು ವರ್ಷಗಳ ಪರಿಶ್ರಮ ಪಡುತ್ತಾನೆ. ಆದರೆ ಜನ ಸುಂದರವಾದ ಹುಡುಗಿಯೊಬ್ಬಳನ್ನು ನೋಡಬಯಸುತ್ತಾರೆಯೇ ಹೊರತು ಆ ಕಲೆಯನ್ನಲ್ಲ. ಹೀಗಾಗೆ ಆತ ವಿಷಾದ ಪಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲವೆಂದುಕೊಳ್ಳುತ್ತಾನೆ.

ಬ್ರೌನಿಂಗನ ಸಿದ್ಧಾಂತ ಈಗ ಆಧ್ಯಾತ್ಮದೆಡೆಗೆ ಸಾಗುತ್ತದೆ. ಆ ಉತ್ಕೃಷ್ಟ ಆನಂದಕ್ಕಿಂತ ಅಪೂರ್ವವಾದ ಸಂಗತಿ ಬೇರಿಲ್ಲ. ಪ್ರೇಮಿಗೆ ತನ್ನ ಪ್ರೀತಿಪಾತ್ರಳ ಜೊತೆಗೂಡಿ ಹೊರಟ ಸವಾರಿ ಸ್ವರ್ಗದೆಡೆಗಿನ ಪ್ರಯಾಣ ಎಂದೆನಿಸುತ್ತದೆ. ಆ ಆನಂದದ ಅನುಭವ ತನ್ನ ಬದುಕಿನುದ್ದಕ್ಕೂ ಸಾಕಾಗುವಷ್ಟು ಎಂದುಕೊಳ್ಳುತ್ತಾನೆ.

“And heaven just prove that I and she
Ride, ride together, for ever ride?”

ಬದುಕೊಂದು ಸವಾರಿ. ನಮ್ಮ ಪ್ರೀತಿಪಾತ್ರರೊಡನೆ ಕಳೆದ ಕ್ಷಣಗಳು ಬದುಕಿನುದ್ದಕ್ಕೂ ಖುಷಿಕೊಡುವಂತೆ ನಮ್ಮನ್ನು ತಿದ್ದಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂಬುದನ್ನು ಕಾವ್ಯ ಅರಹುತ್ತದೆ.

ಬ್ರೌನಿಂಗ್‌ನ ಆಶಾವಾದವನ್ನು ಬಿಂಬಿಸುವ ಒಂದು ಕವಿತೆ “Prospice”. ಕವಿಗೆ ಸಾವೆಂದರೆ ಭಯವಿಲ್ಲ. ಪ್ರಾಪಂಚಿಕವಾದ ನೋವು ದುಃಖ ದುಮ್ಮಾನಗಳಿಂದ ಮುಕ್ತಿ ತರುವುದು ಸಾವು. ಆತ್ಮಕ್ಕೆ ಸಾವಿಲ್ಲ. ಆತ್ಮದ ಅವಿನಾಶತ್ವದಲ್ಲಿ ನಂಬಿಕೆಯಿಟ್ಟ ಬ್ರೌನಿಂಗ್ ಈ ಕವಿತೆಯನ್ನು ಬರೆದಿದ್ದು ಪ್ರೀತಿಯ ಪತ್ನಿ,ಕವಯತ್ರಿ, ಎಲಿಜಬೆತ್ ಬ್ರೌನಿಂಗ್ ಳ ಸಾವಿನ ನಂತರ. ಅದಕ್ಕಾಗಿ ಆತ ಸಾವನ್ನು ತಾನಾಗೆ ಅಹ್ವಾನಿಸುತ್ತಾನೆ ಆ ಮೂಲಕವಾದರೂ ದೇವರ ಲೋಕದಲ್ಲಿ ತನ್ನ ಪ್ರೀತಿಯ ಮಡದಿಯನ್ನು ಸೇರಬಹುದು ಎಂಬ ಆಶಾವಾದವಿದೆ.

ಹೀಗೆ ತನ್ನ ಸಂಕೀರ್ಣ ಕಾವ್ಯಗಳ ಮೂಲಕ ಕೆಲವೊಮ್ಮೆ ಕಟು ಟೀಕೆಗೆ ಒಳಗಾದರೂ ಬದುಕಿನ ಚಿತ್ರವಿಚಿತ್ರ ಸಂಗತಿಗಳನ್ನು ಡ್ರೆಮ್ಯಾಟಿಕ ಮೊನೊಲೊಗ್ ನಲ್ಲಿ ಅನನ್ಯವಾಗಿ ಬಿತ್ತರಿಸಿದ ಬ್ರೌನಿಂಗ್ ಡಿಸೆಂಬರ ೧೨, ೧೮೮೯ರಲ್ಲಿ ವೆನಿಸ್ ನಲ್ಲಿ ಮರಣ ಹೊಂದಿದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾತೇ ಜ್ಯೋತಿರ್ಲಿಂಗ
Next post ರಸದ ಬೀಡು!

ಸಣ್ಣ ಕತೆ

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

 • ಮುದುಕನ ಮದುವೆ

  ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

 • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

  ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

 • ರಣಹದ್ದುಗಳು

  ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

 • ವ್ಯವಸ್ಥೆ

  ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…