ಮನೆಯಲ್ಲ ಮಠವಲ್ಲ ರಾಜನರಮನೆಯಲ್ಲ
ಇದು ನಾಟ್ಯ ಮಂದಿರ ಛಾತ್ರ ಸತ್ರವಲ್ಲ
ಜೀವ ಬಯಸುವ ಭೋಗದುಪಕರಣವಲ್ಲವಿದು
ಆವರ್ಥ ಘಟಿಸಿತೀ ತೆರ ಮಲೆಯ ಕಲ್ಲ?
ಗೋಪುರದ ತುದಿಯಲ್ಲಿ ಬಾನನೆತ್ತುತ ನಿಂತು
ಇರುಳಿನೊಳು ಮಿರುತಾರಗೆಯ ಮಾಲೆಗೊಳುತ
ಮೋಡ ಮುತ್ತುವ ಜಡೆಗೆ ಜಾಹ್ನವಿಯೆ ಜಾರಿಬರೆ
ಪಕ್ಕಕೆಳವೆರೆಸೆಕ್ಕಿ ಕಣ್‌ಸವಿಯ ಕೊಳುತ

ಮೆರೆವಿದರ ದರ್ಶನವೆ ದುಡುಕಿಸುವುದೆನ್ನೆದೆಯ ನಡೆಯ
ಮನುಜಗಿದು ನೆಲೆಯಾಸೆಯೋ ಕಟ್ಟ ಕಡೆಯ?
*****