ಸಕಲ ಸಂದೇಹಗಳು ಬಳಲಿ ಬಳಿಗೈತಂದು
ಬಿಡುವ ಬಯಸುವ ತವರೆ, ಮಲೆಯ ದೇಗುಲವೆ,
ವಾಸ್ತವದೊಳಲೆದಿರವು ಪಡೆವರಿವಿನರಕೆಯಿಂ-
ದೊಡೆವಽಶಾ೦ತಿಯು ಮದ್ದೆ, ಮುನಿಹೃದಯಫಲವೆ,
ಒಂದೊಂದು ನಿಲವಿನೊಳಗೊಂದೊಂದು ಸೊಗವಳಲ
ತೋರಿ ತಿರಿವೀ ಭವದ ನಿಶ್ಚಲಕೇ೦ದ್ರವೇ.
ಋಜುಅನೃಜು ಋತಅನೃತ ಲೇಸುಕೇಡೆಂಬ ಬೆಲೆ-
ಗಳವಡದ ಯೋಗಿಗಳ ಮುದದಿಂ ಸಾಂದ್ರವೇ,
ನಿಂತಿಹೆನು ನಾ ನಿನ್ನ ಬಾಗಿಲಿಗೆ ನಮ್ರನಾಗಿ
ನುಡಿ ತುಯ್ದು ಬವಣೆಗೊಳೆ ಭಾವಗಳ ಭಾರದಿಂ ತಲೆಯ ಬಾಗಿ.
*****