Day: March 18, 2025

ಉಮರನ ಒಸಗೆ – ೬೧

ಪೋಪುದೆ ಗುಲಾಬಿಯೊಡನಯ್ಯೊ! ಮಧುಮಾಸಮದು; ಮುಗಿವುದೇ ಯವ್ವನದ ಪರಿಮಳಿತ ಲಿಖಿತಂ! ಒನದಿ ಪಾಡುವ ಬುಲ್ಬುಲಂಗಳಕ್ಕಟ! ತಾವ ದೆತ್ತಣಿಂ ಬಂದು ಮೇಣೆತ್ತ ಪೋದಪುವೋ! *****

ಮಲೆದೇಗುಲ – ೭

ಕತ್ತಲದು ಕಗ್ಗತ್ತಲರಿವಾಳನರಿಯದೆಯೆ ಮತಮತಗಳಟ್ಟಣೆಯ ಕಟ್ಟಿ ನಿಲುವಿರುಳು ಸನಿಯನಷ್ಟನೆ ಬೆಳಗಿ ಕೊನೆಗೆ ಶರಣೆಂದೆಯೇ ಎಲ್ಲ ಮತಿ ಮೈಗರೆವ ನಿಲುಗಡೆಯ ಹುರುಳು ಉಳಿವುದೆಣಿಸುತ ಚಿತ್ತ ವಿಜ್ಞಾನದೊಳು ತೊಳಲಿ ಅಳಿವುದೆಣಿಸುತ ಪರದ […]