ಸಂದೆಗದ ಹರಿವಿನೊಳು ತತ್ವಗಳೆ ಹಿಮಫಲಕ
ಹಾಯುವಾಯಾಸದೊಳು ಮನ ಗಳಿಗೆ ನಿಲ್ಲೆ
ಆ ಸೋಂಕಿನೊಳೆ ಕರಗಿ ಮರಳಿ ಹೊಳೆಸೇರುವುವು
ಚಿತ್ತವಾಳ್ವುದು ಮರಳಿ ಆ ಹರಿವಿನಲ್ಲೆ
ಕರಣವಿರೆ ವಿಷಯಗಳು ಚಿತ್ತವಿರೆ ಚಿಂತೆಗಳು
ಜೀವವಿರೆ ಜಗವೆಂಬ ದ್ವೈಧವೇ ಮೆರೆಯೆ
ಆ ನಿಲವೊಳಿದು ತೋರಿ ಈ ನಿಲವೊಳದು ತೋರಿ
ಒಂದೊ ಜೋಡಿಯೊ ಎಂಬ ಸಂದೆಗವೆ ನೆರೆಯೆ-
ಕೊನೆಗೆ ‘ನಾ’ನೆನೆ ನನ್ನ ದೈವವಂ ತೋರಿ
ಭಿನ್ನಿಸುವ ಗುಡಿಯೆ, ನಿನ್ನದೆ ಕೊನೆಯ ದಾರಿ?
*****