ಅಲ್ಲಿರಲಿ ಇಲ್ಲಿರಲಿ ಎಲ್ಲಿರಲಿ ತಲೆಬಾಗಿ
ನಾ ತೆರೆದ ಮಲೆದೇಗುಲದ ಬಾಗಿಲಿದಿರು
ನಿಂತ ತೆರವಾಗುತಿದೆ ನನ್ನ ಕಂಗಳಿಗಾಗೆ
ಅರೆ ಬಾನು ಮರ ಹಕ್ಕಿ ಹೊಳ್ಳ ಹೂ ಹೊದರು
ಅಂತರಂಗದ ದೈವ ಮೂಲೆತಿರುಗಿನೊಳವಿತು
ಸನ್ನೆಗೈದಂತೆಯೇ ಮೈಗರೆವ ಪರಿಗೆ
ಒಂದು ನಗೆ ಒಂದು ನುಡಿ ಒಂದು ಚಲನದಿ ಹೊಳೆದು
ಆವುದೋ ನೆನವೊಸಗೆ ಮರಳುವುದು ಮರೆಗೆ
ಆ ನೆನಹಿನೊಸಗೆಗಳ ನಿಧಿಗೊಳುತ, ಗುಡಿಯೆ, ನಿಂತೆ
ನನ್ನ ಮಾನಸ ನಿನ್ನ ಶ್ಯಾಮಸುಂದರಗರ್ಭದೊಳಗವನು
ತಡತಡಕಿ ತೀರದಂತೆ.
*****