“ಏ! ಮಿಂಚೆ ಏಕೆ ವಕ್ರ ವಕ್ರ ವಾಗಿ ಕುಣಿಯುತಿರುವೆ?” ಎಂದು ಗುಡುಗು, ಗುಡಿಗಿ ಗದರಿಸಿತು. “ಮೋಡದ ಮರೆಯಲ್ಲಿ ಅಡಗಿ ಗುಡಗ ಬೇಡ. ಹೊರಗೆ ಬಂದು ನೋಡು, ಇದು ಮಿಂಚಿನ ಬೆಳಕಿನ ನೃತ್ಯ, ವಕ್ರ ನೃತ್ಯವಲ್ಲ.” ಎಂದಿತು ಮಿಂಚು, ಮಿಂಚಿನ ಮಾತಿನಲ್ಲಿ ಮರ್ಮವಿದೆ ಎಂದು ಅರಿತು, ಗುಡುಗು ತನ್ನ ಧ್ವನಿಯ ಧಾಟಿಯನ್ನು ಬದಲಿಸಿ ಕೊಂಡಿತು.
*****