ಹರಕಲು ಊಣ್ಣೆ ಬಟ್ಟೆ, ತಲೆಗೆ ಕುಲಾವಿ ಹಾಕಿದ ಪುಟ್ಟ ಮಗುವನ್ನು ಎತ್ತಿ ಕೊಂಡು “ರಂಗೋಲಿ ಬೇಕಾಮ್ಮಾ?” ಎಂದಳು. ರಂಗೋಲಿ ಖರೀದಿಸುವಾಗ ಮಗುವನ್ನು ನೋಡಿ ನನಗೆ ಕನಿಕರವಾಯಿತು. “ಮಗು ಊಟ ಮಾಡುತ್ತಾನಾ?” ಎಂದು ಕೇಳಿದೆ. “ಕೊಡಮ್ಮ ಎಂದು ಕೈ ಒಡ್ಡಿದಳು. ಮನೆಯಲ್ಲಿದ್ದ ಚಾಕೊಲೇಟು, ಜೊತೆಗೆ ಅನ್ನಕ್ಕೆ ಮೊಸರು ಹಾಕಿ, ಬೇಯಿಸಿದ ತರಕಾರಿ ಹಾಕಿ ಮಗುವಿಗೆ ತಿನ್ನಿಸು” ಎಂದೆ. “ನೀರು ಕೊಡಮ್ಮ” ಎಂದು ಕೈ‌ಒಡ್ಡಿದಳು. ಒಳಗಿಂದ ನೀರು ತರುವ ಹೊತ್ತಿಗೆ ಚಾಕೊಲೇಟೆ ತಿಂದು ಅವಳು ಮೊಸರನ್ನ ತಿನ್ನುತಿದ್ದಳು. “ಯಾಕೆ ಮಗುವಿಗೆ ತಿನ್ನಿಸಲಿಲ್ಲವೇ?” ಎಂದೆ. “ಅದಕ್ಕೆ ಬಾಯಲ್ಲಿ ಇಟ್ಟರೆ ಉಗುಳಿತು. ನಾನು ತಿಂದು ಮೊಲೆಯೂಡಿಸುವೆ” ಎಂದಳು. ಮಗು ರಂಗೋಲಿಯಲ್ಲಿ ಕೈಯಾಡಿಸಿ ಬೆರಳು ಚೀಪುತಿತ್ತು.
*****