ಅವನಿಗೆ ಪ್ರಶ್ನೆ ಕೇಳುವುದೆಂದರೆ ಬಲು ಪ್ರಿಯ. ಪ್ರಶ್ನಾರ್ಥ ಚಿನ್ಹೆಗೆ ಜೋತುಬಿದ್ದು ಉತ್ತರ ಧೃವದಿಂದ ದಕ್ಷಿಣ ಧೃವಕೆ ಉತ್ತರವ ಹುಡಿಕಿ ಬಾಳು ಸಾಗಿಸುತಿದ್ದ. ಉತ್ತರಗಳು ತಲೆ ತುಂಬಿದರು ಹೃದಯ ಬರಿದಾಗಿ ಬರಡಾದಾಗ ಎಚ್ಚೆತ್ತು ಪ್ರಶ್ನೆಗಳನ್ನು ಹೂಳಿಟ್ಟ. ಪೂರ್ವದಲ್ಲಿ ಹುಟ್ಟಿದ ಸೂರ್ಯ ಉತ್ತರದಲ್ಲಿ ಉತ್ತರವಿತ್ತು ಇವನ ಹೃದಯವನ್ನು ಬೆಳಕಿನಿಂದ ತುಂಬಿದ. ಅವನ ಮನವು ಅಂತರ ದೃಷ್ಟಿಯಲ್ಲಿ ನಿರಾಳವಾಯಿತು.
*****