“ಮರ! ಭೂಮಿಯಿಂದ ನೀನೇನ ಕಲಿತೆ?” ಎಂದು ಓರ್ವ ದಾರಿಹೋಕ ಕೇಳಿದ. ಭೂಮಿ ನನ್ನ ಗಟ್ಟಿಯಾಗಿ ನಿಲ್ಲಿಸಿ ಬೆಳಸಿತು. ಎತ್ತರಕ್ಕೆ ಬೆಳೆದು ಆಕಾಶದೊಡನೆ ಮಾತನಾಡುವುದನ್ನು ಕಲಿತೆ. ಆಕಾಶ ನನಗೆ ಮಳೆಹನಿ ಮುತ್ತುಗಳನ್ನು ಇತ್ತು ನನ್ನ ಹರ್ಷವನ್ನು ಹಸುರಾಗಿಸಿತು. ನೀನು ಮಾತ್ರ ನನ್ನ ಕಡೆದು ಹಾಕಲು ಯಾವಾಗಲು ಹೊಂಚುಹಾಕುವೆ. “ಇನ್ನೊಬ್ಬರನ್ನು ಏನು ಕಲಿತೆ ಎಂದು ಕೇಳುವದಕಿಂತ ನೀನು ಏನು ಕಲಿತೆ ಎಂಬುದನ್ನು ತಿಳಿದುಕೋ” ಎಂದಿತು ಮರ.
*****