ಮೊಳಕೆಯೊಡೆದು ಮೇಲೇರುವ ತವಕ
ಚಿಗುರಾಗಿ ಗಿಡವಾಗಿ ಮೈನೆರೆದ ಮರವಾಗಿ
ಮುತ್ತೈದೆಯಾಗಿ ಅದಕ್ಕೆ ಮಗುವಾಗಿ
ಮಗುಬಿಳಲು ಮತ್ತೆ ಬೇರಾಗಿ ಬೆಳೆದು ಮರವಾಗಿ
ಮತ್ತೆ ಬಿಳಲು ಟಿಸಿಲು ಬೇರು
ಒಂದೇಸಮನೆ ಕಾರುಬಾರು
ನಡೆಸುವ ದೈತ್ಯ ಆಲ.
*****