ಕದ್ದಿಂಗಳಿನಿರುಳು:
ಬುವಿ ಬಾನಂತರವೆಲ್ಲವ ಕತ್ತಲು ತುಂಬಿರಲು,
ದೆಸೆಯಳಿಯದೆ ನಿಲಲು
ತಮಕಿವು ಸೇತುವೊ ಎನೆ ದಟ್ಟೈಸಿರೆ ತಾರೆಗಳು,
ಭೂತ ಭವಿಷ್ಯವನು
ಮುಸುಕಿನೊಳವಿತಿಟ್ಟಂತಿಳೆ ಹೊದೆದಿರೆ ಮೌನವನು,
ಸೆರೆಬಿದ್ದಿಹ ಕಾಲ
ಹುಯಿಲಿಡುವುದೊ ಎನೆ ಜಿರ್ರನೆ ಜೀರುಂಡೆಯ ಮೇಳ!
*****

ಕನ್ನಡ ನಲ್ಬರಹ ತಾಣ
ಕದ್ದಿಂಗಳಿನಿರುಳು:
ಬುವಿ ಬಾನಂತರವೆಲ್ಲವ ಕತ್ತಲು ತುಂಬಿರಲು,
ದೆಸೆಯಳಿಯದೆ ನಿಲಲು
ತಮಕಿವು ಸೇತುವೊ ಎನೆ ದಟ್ಟೈಸಿರೆ ತಾರೆಗಳು,
ಭೂತ ಭವಿಷ್ಯವನು
ಮುಸುಕಿನೊಳವಿತಿಟ್ಟಂತಿಳೆ ಹೊದೆದಿರೆ ಮೌನವನು,
ಸೆರೆಬಿದ್ದಿಹ ಕಾಲ
ಹುಯಿಲಿಡುವುದೊ ಎನೆ ಜಿರ್ರನೆ ಜೀರುಂಡೆಯ ಮೇಳ!
*****