ಕಡಲಿನಾವಿಯನೆತ್ತಿ ತಿರೆಗದನು ಮರೆಮಾಡಿ
ಮುಗಿಲ ಮೇಲೆಯೆ ಬೆಳಗುವಿನತೇಜದಂತೆ
ಭವಕವಿದ ದುರ್ದಿನದೊಳದರ ಮೇಲಾಡುತಿಹ
ರಸದ ತೇಜಕೆ ಜೀವ ಹಂಬಲಿಪುದಿಂತೆ.
ಆ ಮುಗಿಲ ಬಿಡಿಸುತಾ ಕಿರಣಗಳಿಗೆಳೆಸೋ೦ಕ
ತಂದು ಕತ್ತಲ ಕಳೆವ ಶುಭಕಲ್ಪಗಳನು
ಸುಂದರಾಗಮಕಲಿತ ದೇವೋತ್ಸವಂಗಳನು
ಸರಸಸಜ್ಜನಗೋಷ್ಠಿ ಸಲ್ಲಾಪಗಳನು
ಆದರಿಸದೀ ನೆಲದ ಮನದ ಭವದುಲ್ಬಣಕೆ ಮರುಗಿ ಶುಙ್ಮಲಿನನಾಗಿ
ಸಂತಾತ್ಮವೈಭವದ ಮಲೆಗುಡಿಯ ನೆನೆದಿಂತು ಸಂಹೃಷ್ಟನಾದೆನೈ ಕೊರಗ ನೀಗಿ.
*****

















