ಮೆಟ್ಟಲಿಳಿದು ಬಳುಕಿ ಬರುವಳು ಈ ಕಾಲದ ಚೆಲುವೆ
ಸದ್ಯತೆಯ ಸೃಷ್ಟಿಸುವ ಶೃಂಗಾರದಲ್ಲಿ
ಎಲ್ಲರೂ ಕಾದಿರಲು ರಂಗದ ಮುಂದೆ ಇವಳು
ಇಡೀ ಲೋಕದ ತಲೆ ತಿರುಗುವಂತೆ ನರ್ತಿಸಲಿದ್ದಾಳೆ
ಒಂದು ದಿನ
ಅದೇ ಕೊನೆಯ ದಿನ
ತಬಲೆಯವ ಕಾಯುವ
ಸಿತಾರಿನವ ಕಾಯುವ
ಸಭಿಕರಿಗೇನು ಅಸಹನೆ?
ಈ ದಿನ ಮಾತ್ರ ಅವಳ ಕಾಲುಳುಕಿದೆ
ಅನ್ನುತ್ತಾರೆ ಕೆಲವರು:
ನೀನು ಮರಳಿನಲಿ ಸೌಧವ ಕಟ್ಟಿ ಒದ್ದು ಹೋಗುವಿ
ಆಮೇಲೆ ನಾವದರ ನೆನಪಿನಲ್ಲಿ
*****

















