ಇದು ಇನಿತೆ ಎಂಬಂತೆ ಕೊರೆಯಿಲ್ಲವೆಂಬಂತೆ
ಕಾಣುವನಿತೇ ಪೂರ್ಣವೆಂಬ ತೆರದಿ
ನೆಲದುಬ್ಬಿನೀ ಮಲೆಯ ತಲೆಯ ಗುಡಿ ಮೊನೆಯಿಂದ-
ನೆಲವ ಕವಿವೀ ಬಾನ ನೀಲಿಮೆಯ ತಲದಿ
ಸೃಷ್ಟಿಯೆಲ್ಲವ ತುಂಬಿ ಹಸರಿಸುವ ನಿಸ್ಸೀಮ
ಸದ್ಭಾವಕೇಂದ್ರದೊಳು ವಿಶ್ರಾಂತನಂತೆ
ಎಲ್ಲ ಬೆಲೆಗಳನಳಿದು ಸರ್ವಸಮವಾಯದೊಳು
ಪ್ರಸ್ಫುರಿಸುತಿರುವಿರವಿನೆದೆಮಿಡಿತದಂತೆ
ನಾನಿಹೆನು ಇಹೆನೆಂಬ ನಿರ್ವಿಷಯದರಿವಿನೊಳು ಏಕನಾಗಿ
ಸರ್ವತಶ್ಚಕ್ಷುವೆನೆ ಸರ್ವತಃ ಶ್ರೋತ್ರನೆನೆ ಮೂಕನಾಗಿ.
*****

















