ಧರ್ಮದ ಠೇಕೆದಾರರಿಂದ
ಭೂಮಿಯ ಮೇಲೆ ದೆವ್ವದ ಕುಣಿತ
ನೋಡಿದ್ದೇನೆ ನಾನು.
ಗುಜರಾತಿನ ನರಮೇಧದಲ್ಲಿ
ಮನುಷ್ಯತ್ವದ ಕತ್ತು
ನಾಚಿಕೆಯಿಂದ ಕೆಳಗಾಗಿದ್ದನ್ನು
ಕಂಡಿದ್ದೇನೆ ನಾನು.
ಧರ್ಮದ ರಾಜಕೀಯದಲ್ಲಿ ಅಧರ್ಮದ
ಕತ್ತಿ ಝಳಪಿಸುವ ಗುಜರಾತನು
ಕಣ್ಣಾರೆ ಕಂಡಿದ್ದೇನೆ ನಾನು
ತುಂಬು ಗರ್ಭೀಣಿಯ ಹೊಟ್ಟೆಸೀಳಿ
ಹೊರತೆಗೆದ ಮಗುವಿಗೆ
ಚುಚ್ಚಿಚುಚ್ಚಿ ಸಾಯಿಸಿದ ಪಾತಕಿಗಳನ್ನು
ಕಂಣ್ಣಾರೆ ಕಂಡಿದ್ದೇನೆ ನಾನು.
ಯುವಕ, ಮುದುಕ, ಮಹಿಳೆ, ಮಕ್ಕಳ
ಬಿಸಿ ರಕ್ತದ ಹೊಳೆ ಹರಿಸಿದ್ದನ್ನು
ಕಣ್ಣಾರೆ ಕಂಡಿದ್ದೇನೆ ನಾನು.
ಸಾಯುವಾಗಿನ ನೋವಿನ ಆರ್ತನಾದ
ರಕ್ಷಕರ ಎದುರಿನಲ್ಲೇ ಬಿಕ್ಕುತ್ತಿರುವ
ಮನುಷ್ಯತ್ವವ ಕಂಡಿದ್ದೇನೆ ನಾನು.
ಗುಜರಾತಿನ ಗಲ್ಲಿಗಳಲ್ಲಿ
ಸುಟ್ಟು ಕರಕಲಾಗುತ್ತಿರುವ
ಮನುಷ್ಯತ್ವ ಕಣ್ಣಾರೆ ಕಂಡಿದ್ದೇನೆ ನಾನು.
ಲೋಕವೇ ಕಣ್ಣಾರೆ ಕಂಡಿದೆ
ಗುಜರಾತಿನಲ್ಲಿ ಕರಗಿ ಹೋದ
ಮಾನವೀತಯತೆಯ ಚಿಗುರುಗಳ
ಕಣ್ಣಾರೆ ಕಂಡಿದ್ದೇನೆ ನಾನು.
ಅವನ ಅಂತ್ಯದ ದಿನಗಳಲ್ಲಿ
ಕಟಕಟೆಯಲ್ಲಿ ನಿಲ್ಲಿಸಿ ಕೇಳುವೆ
ನಿರಪರಾಧಿಗಳ ರಕ್ತ ಹರಿಸಿದ್ದಕ್ಕೆ
ನಿನಗೆ ದೊರಕಿದ್ದಾದರೂ ಏನೆಂದು?
ಮಾನವೀಯ ನೆಲೆಗಳನ್ನು ನಾಶಪಡಿಸಿದ
ನಿನಗೆ ನಿನ್ನ ರಾಮನಿಗೆ ತೋರಿಸುವುದಕ್ಕೆ
ಮುಖವಾದರೂ ಇದೆಯೇ ಎಂದು.
*****

















