ಜಡಜಡವನೆಳದಾಡಿ ಮನಮನವ ತಾಗಿಸುತ
ಕರ್ಮದೊಡ್ಡಿನೊಳಿಹವ ನೂನೂಗುತಿರುವ
ಜೀಯ ನಿಮ್ಮ ಹಸಾದರೆಂಬರುರವಟೆಯೊಳಗೆ
ಸಾಗುವರಸರ ವಿಭವದುತ್ಸವದ ತೆರವ
ಕಂಡು ಕುಶಲವ ಪಡದ ಕಂಗಳಿವು ಹೊಂಗುವುವು
ತುರೀಯೋಪಾಂತ್ಯದೊಳು ವಿವರಿಸುತಲಿರುವ
ಯಾತ್ರಿಕರ ಕಾಣುತ್ತ,-ಹಗುರಾದ ಜೀವವಿದ
ರಪಪದಕೆ ಎತ್ತೆತ್ತಿ ಆತುಕೊಳುತಿರುವ.
ಕುಡಿಕಡಿಯೆ ಉಸಿರಾಡಿ ಉಂಡುಟ್ಟು ನಾನೆಂದು ನಿಂತ ಸಾಹಸದ ಸಲ್ಮೆ
ದೇಗುಲದ ನೆವದೊಳಗೆ ದಿವ್ಯತೆಗೆ ಬವಣೆಗೊಳುವಂಥ ಮನುಜರ ಕಾಂಬ ನಲ್ಮೆ.
*****

















