ಸಿಡಿಲ ಪಳಗಿಸುವರಿವು, ರವಿಯ ಸೆರೆಹಿಡಿವರಿವು
ಸಾಗರದ ತಳಮಗುಚಿ ಸೂರೆಗೈವರಿವು
ಬಾನ ಜಾಲಾಡುತ್ತ ತಾರೆಗಳನಳೆವರಿವು
ಸೂಕ್ಷ್ಮಾತಿಸೂಕ್ಷ್ಮವನು ಬಯಲುಗೈವರಿವು
ವಸ್ತುಗಳೊಳವಿತಿರುವ ಸೆಳೆತಗಳ ಹವಣರಿತು
ಸೊಗಕೆ ನವಸಂಘಾತಗಳ ನಿಲಿಸುವರಿವು-
ಇದನು ಕಿತ್ತದನೆಸೆದು ದುರ್ದಮ್ಯ ಪಟುತೆಯೊಳು
ಅಂಗಳದೊಳಾಡುವಿದ ನೋಡುತಿದೆ ಇರವು!
ಎಲ್ಲ ವಿಕೃತಿಯ ತಳದ ಸತ್ವದೀ ವಾತ್ಸಲ್ಯದೃಷ್ಟಿಯನು ರೂಪಿಸುವೊಲು
ಸಿರಿಯೊಡನೆ ಸಿರಿರಾಯನುತ್ಸವದಿ ನಿಂತಿಹನು ಕಡುಸವಿಯ ಮೆಲುನಗೆಯೊಳು.
*****


















