ಕನ್ನಡ ಕಾವ್ಯದ ಅಭಿಮನ್ಯು

(ದಿವಂಗತ ಗೆ. ಪೇಜಾವರ ಸದಾಶಿವರಾಯರನ್ನು ಕುರಿತು) ಕಡಲ ದಾಂಟುವದೆ ಕಡು ಪಾಪವೆಂದುಸಿರುತಿಹ ಕುರುಡು ನಂಬಿಗೆಯ ಹಿಂತುಳಿದು ಮುಂದಡಿಯಿಟ್ಟೆ ನಾಡ ನಿಲಿಸುವ ಯಂತ್ರವಿದ್ಯೆಯೆಡೆ ಗುರಿಯಿಟ್ಟೆ. ನಾಡ ಹಿರಿಯರ ನೋಟದಂತೆ ನಡೆದಿರಲಹಹ! ಪಡುವಣದ ವಿದ್ಯೆಯೆದೆ ತೆರೆಯೆ ಚಕ್ರವ್ಯೂಹ...

ಶೆಲ್ಲಿ

‘ಈತನಜರಾಮರನು’; ‘ಈತಸಿರಬೇಕಿತ್ತು’ ಎಂದು ಕವಿಗಳು ತಮಗೆ ಮನವಂದ ಕವಿವರರ ಹೊಗಳುವರು. ಹೇಳೆನಗೆ. ಏನೆಂದು, ಗುರುವರ! ನಾನು ನುತಿಸಲಿ ನಿನ್ನ ? ಅಹುದು ನಿನ್ನಯ ತೊತ್ತು ಧಾರಿಣಿಯು, ಕಾಲನಿನ ಕಾಲಾಳು ಮೂವತ್ತು- ಮೂರು ಕೋಟಿಯ ಗಣದ...

ಅಶ್ವಾರೋಹಿ

ಎಳೆಯನಿರೆ ಕೇರಿಕೇರಿಗಳಲ್ಲಿ ತಿರುಗಾಟ- ವಾಡುತ್ತ ಗುರಿಯಿಲ್ಲದಲೆಯುತಿರೆ ನಾ ಮೋಹಿ- ಸಿದೆ ಮೇಲೆ ನೋಡುತ್ತ, ಓರ್‍ವನಶ್ವಾರೋಹಿ ವವನಮಾರ್‍ಗದಿ ಚಲಿಸುತ್ತಿದ್ದ. ಇದು ಕಣ್ಮಾಟ- ವಲ್ಲೆಂದು ನೂರು ಸಲ ಪರಿಕಿಸುವ ಹಿನ್ನೋಟ ತಾನೆ ನಿರ್‍ಧರಿಸಿತ್ತು. ಗೆಳೆಯರೆಂದರು - ‘ಕಾಹಿ-...

ಮಹಾಪುರುಷ; ಮಹಾವನಿತೆ

ಅಹುದಹುದು ಆ ತರುಣ ಸಿದ್ದ ಪುರುಷನ ಬಳಿಗೆ ಇದ್ದಿ ತೊಂದಸಮವಿಹ ಪ್ರತಿಭೆ, ಅನುಪಮ ತೇಜ. ಇಂಥ ಮುನಿವರ್‍ಯನಿಗೆ ಬಾಗಿ ನಿಲುವುದೆ ಸಾಜ- ವೆಂದೆನಿಸುತಿತ್ತವನ ಬಳಿ ನಿಂತ ಜನಗಳಿಗೆ ಎದೆಯೊಲವು ತಿಳಿಯಿರುವ ಭಾವುಕರ ಜಂಗುಳಿಗೆ ಅವನು...

ಮಾಸತಿ

ಹಣೆಯಲ್ಲಿ ಕುಂಕುಮದ ಬೊಟ್ಟು, ಮೈಯ್ಯಲ್ಲಿ ಬಹು ಬೆಲೆಬಾಳ್ವ ಕೇಸರಿಯ ಬಟ್ಟೆ, ಕೈಯಲ್ಲಿ ಮನ- ದನ್ನ ಗೆನೆ ಹಿಡಿದ ಹೂಮಾಲೆ, ಮುಡಿಯಲ್ಲಿ ಬನ- ಮಲ್ಲಿಗೆಯ ಹೆಣಿಕೆ, ಮನದಲ್ಲೆಣಿಕೆ ಈ ನೋವು ಈಗ ಕಳೆಯುವುದೆಂದು ಬಂದಳಾ ಮಾಸತಿಯು...

ದಮಯಂತಿ

ಜಯ ಜಯ ಜಯಂತಿ ನಿನಗಿರಲಿ ಓ ! ದಮಯಂತಿ | ಎಲ್ಲರಿಗೆ ತಿಳಿದಿರಲಿ ! ಮೂಲೋಕ ಗಮನಿಸಲಿ,- ‘ಮಾನವನ ನಲುಮೆಗೀ ಭೂತಲದಿ ಸಮನಿಸಲಿ ನಾಕದೈಸಿರಿ’ ಎಂಬ ಹಿರಿನುಡಿಯು. ಕುವದಂತಿ ಹಿಂಗಲಿ ನಳರಾಯ ಹಾಕಿಟ್ಟ ಹಿರಿಪಂಙ್ತಿ...

ವಿಶ್ವಾಮಿತ್ರ

ಅರಸು ವಿಶ್ವಾಮಿತ್ರ ಮಾತುಗೆಲುವ ಮನೀಷೆ- ಯಿಂದ ಕಾಡನು ಸೇರಿ ಮುನಿಯಾಗಬಯಸಿದನು. ಜಯಲಕ್ಷ್ಮಿ ತನ್ನ ವಶವಿರಲೆಂದು ಸಹಿಸಿದನು ನೂರು ಸಂಕಟಗಳನು, ಪೂರೈಸದಭಿಲಾಷೆ. ಸ್ವರ್‍ಲೋಕದವರು ಕಳುಹಿಸಿದ ಮೇನಕೆಯಾಸೆ- ಗಾಗಿ ಮತ್ತೆ ಪ್ರಪಂಚಭಾರವನ್ನು ವಹಿಸಿದನು ಅರಸೆಂಬ ಹಂಬಲಕೆ ಮನಸೋತು...
cheap jordans|wholesale air max|wholesale jordans|wholesale jewelry|wholesale jerseys