ಅಶ್ವಾರೋಹಿ

ಎಳೆಯನಿರೆ ಕೇರಿಕೇರಿಗಳಲ್ಲಿ ತಿರುಗಾಟ-
ವಾಡುತ್ತ ಗುರಿಯಿಲ್ಲದಲೆಯುತಿರೆ ನಾ ಮೋಹಿ-
ಸಿದೆ ಮೇಲೆ ನೋಡುತ್ತ, ಓರ್‍ವನಶ್ವಾರೋಹಿ
ವವನಮಾರ್‍ಗದಿ ಚಲಿಸುತ್ತಿದ್ದ. ಇದು ಕಣ್ಮಾಟ-
ವಲ್ಲೆಂದು ನೂರು ಸಲ ಪರಿಕಿಸುವ ಹಿನ್ನೋಟ
ತಾನೆ ನಿರ್‍ಧರಿಸಿತ್ತು. ಗೆಳೆಯರೆಂದರು – ‘ಕಾಹಿ-
ಲೆಯ ಕುರುಹು, ಛೇ ! ಹೋಗು !’ ಎಂದು. ನಾನಿದನರುಹಿ
ನಿಲ್ಲುತಿರೆ. ಹಿರಿಯರೆಂದರು ‘ಬರಿಯ ಹುಡುಗಾಟ’.

‘ಹಗಲಿರುಳು ಕಣ್ಮನವ ಸೆಳೆವಂಥ ಪರಮ ಪಾ-
ವನ ದೃಶ್ಯ ಜೀವನಕೆ ಬಂದುದಾದರೆ ಕರುಣಿ-
ಸೆಮಗಾ ಪ್ರತೀತಿಯನು’ ಎಂದು ನೇಹಿಗರುಸಿರು-
ತಿರಲಿಂದು ಪಡಿನುಡಿವೆ ಕುಂದದಲೆ ದೇವಯಾ-
ನದಿ ನಡೆದ ರಾವುತನ ಠೀವಿ, ನಿಲುವಿಕೆ, ಸರಣಿ.
ಅಂತಿರಲು ಚಿನ್ನ ವಾಗುವುದು ಬಾಳ್ವೆಯ ಕಸಿರು !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಕಿಗೆ ಸ್ವಾಗತ
Next post ಪ್ರತಿಭಾ ಅವರ ‘ಮುದುಕಿಯರಿಗಿದು ಕಾಲವಲ್ಲ’

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…