(ದಿವಂಗತ ಗೆ. ಪೇಜಾವರ ಸದಾಶಿವರಾಯರನ್ನು ಕುರಿತು)
ಕಡಲ ದಾಂಟುವದೆ ಕಡು ಪಾಪವೆಂದುಸಿರುತಿಹ
ಕುರುಡು ನಂಬಿಗೆಯ ಹಿಂತುಳಿದು ಮುಂದಡಿಯಿಟ್ಟೆ
ನಾಡ ನಿಲಿಸುವ ಯಂತ್ರವಿದ್ಯೆಯೆಡೆ ಗುರಿಯಿಟ್ಟೆ.
ನಾಡ ಹಿರಿಯರ ನೋಟದಂತೆ ನಡೆದಿರಲಹಹ!
ಪಡುವಣದ ವಿದ್ಯೆಯೆದೆ ತೆರೆಯೆ ಚಕ್ರವ್ಯೂಹ
ಬರಿ ದಂತಕಥಯೆಂದು ನಿನ್ನವರಿಗೆದ ಕೊಟ್ಟೆ
ಹೊಸ ಜೀವನದ ಸುವ್ವಿಗೆಯ್ದ ಸುವಿನೆದಯಿಟ್ಟೆ
ನಿನ್ನ ಕನಸಿನ ಕೃತಿಗೆ ಹಿಂಗಿತ್ತು ಸಂದೇಹ.
ನುಗ್ಗಿದನು ಕಚನಂತೆ ದಿವ್ಯ ವಿದ್ಯೆಯ ತಂದ
ರಕ್ಕಸರ ತಗ್ಗಿಸುತ ವಾರಾಗಿ ಬಂದನಿದೊ!
ವೀರ ಅಭಿಮನ್ಯು ನೂರೊಂದು ಕುತ್ತನು ದಾಟಿ
ಎಂದು ಜನ ತವಕಗೊಳುವನಿತರೂಳೆ ಮೊಗದಂದ
ಕಂದಿತ್ತು, ನಂದಿತ್ತದಕಟಕಟ! ನೋಡದೋ!
ಆರು ಸಾವಿರ ಮೈಲಿಯಾಗಿ ಮೂನ್ನೂರ್ ಕೋಟಿ
*****


















