ಪರಿಸರ ಪ್ರಜ್ಞೆ

ಪರಿಸರ ಪ್ರಜ್ಞೆ

ನಮ್ಮ ಸುತ್ತಮುತ್ತಲಿನ ವಾತಾವರಣ ಮತ್ತು ಜೀವಿಗಳ ನಡುವಿನ ಸಂಬಂಧವನ್ನು ‘ಪರಿಸರ’ ಎಂದು ಹೇಳುತ್ತೇವೆ. ಪರಿಸರದಲ್ಲಿ ಗಿಡ-ಮರಗಳು ಪ್ರಾಣಿ-ಪಕ್ಷಿಗಳು, ಬೆಟ್ಟ-ಗುಡ್ಡಗಳು, ನದಿ-ವನಗಳು ಇವೆ. ಪರಿಸರದಲ್ಲಿ ಯಾವುದೇ ಒಂದು ಜೀವಿಯು ಸ್ವತಂತ್ರವಿಲ್ಲ. ಅವರು ಒಂದಕ್ಕೊಂದು ಅವಲಂಬಿಸಿವೆ. ಪರಿಸರದಲ್ಲಿ ಒಂದು ಜೀವಿಯು (ಮನುಷ್ಯನನ್ನು ಒಳಗೊಂಡಂತೆ) ಪರಿಪೂರ್‍ಣ ಅನುಪಾತದಲ್ಲಿರುತ್ತದೆ. ಈ ಅನುಪಾತದಲ್ಲಿ ಕೊಂಚವೂ ಏರು-ಪೇರಾದಲ್ಲಿ ಅಪಾಯಗಳ ಸರಮಾಲೆಯೇ ಎದುರಾಗುತ್ತದೆ.

ಬಹು ಹಿಂದೆ ಪರಿಸರದಲ್ಲಿ ಎಲ್ಲ ಜೀವಿಗಳು ಪರಸ್ಪರ ಹೊಂದಾಣಿಕೆಯಿಂದ ಬರುತ್ತಿದ್ದವು. ಮನುಷ್ಯ ಜಾತಿಯ ಉದಯವಾದ ಮೇಲೆ ಅವನ ಆಸೆ-ಆಕಾಂಕ್ಷೆಗಳು ಹೆಚ್ಚಾಗುತ್ತ ನೆಡೆದವು. ದಿನೇ ದಿನೇ ಹೊಸ ಹೊಸ ಆವಿಷ್ಕಾರಗಳು ನಡೆದ ಮೇಲೆ ಪರಿಸರಕ್ಕೆ ಧಕ್ಕೆಯುಂಟು ಮಾಡುತ್ತಾ ಬರುತ್ತಿದ್ದಾನೆ. ಹಾಗಾಗಿ ಪರಸರ ಮಾನಲಿನ್ಯ ಹೆಚ್ಚಾಗುತ್ತಿದೆ.

ಹಸಿರು ಸಸ್ಯಗಳು ಪರಿಸರದ ಬಹುಮುಖ್ಯ ಜೀವಿಗಳು. ಈ ಹಸಿರು ಸಸ್ಯಗಳು ಕ್ಲೊರೋಫಿಲ್ ಅಥವಾ ಪತ್ರ ಹರಿತ್ತು ಎಂಬ ಹಸಿರು ವರ್‍ಣದ್ರವ್ಯ ಹೊಂದಿದ್ದಕ್ಕಾಗಿ ಹಸಿರಾಗಿ ಕಂಗೊಳಿಸುತ್ತವೆ. ಅವು ಸೂರ್‍ಯನ ಶಾಖವನ್ನು ಹೀರಿ, ಭೂಮಿಯಿಂದ ನೀರು ಮತ್ತು ವಾತಾವರಣದ ಕಾರ್‍ಬನ್ ಡೈಆಕ್ಸೈಡ್ ಉಪಯೋಗಿಸಿಕೊಂಡು ಆಹಾರ ತಯಾರಿಸುತ್ತವೆ. ಈ ಆಹಾರವೇ ಪರಿಸರದ ಸಕಲ ಜೀವಿಗಳಿಗೆ ಮೂಲಾಧಾರ. ಹೀಗೆ ಸೂರ್‍ಯನ ಶಾಖದಿಂದ ಆಹಾರ ತಯಾರಿಸುವುದು ಸಸ್ಯಗಳಿಗೆ ಮಾತ್ರ ತಿಳಿದಿದೆ. ಅಷ್ಟೇ ಅಲ್ಲ ಉಸಿರಾಟದ ಮೂಲಕ ಕಾರ್‍ಬನ್ ಡೈ ಆಕ್ಸೈಡ್‌ನ್ನು ಹೀರಿಕೊಂಡು ಆಮ್ಲಜನಕವೆಂಬ ಜೀವಾಳ ವಾಯುವನ್ನು ಪರಿಸರಕ್ಕೆ ಬಿಡುಗಡೆ ಮಾಡುತ್ತವೆ. ಈ ಆಮ್ಲಜನಕವೇ ಉಳಿದೆಲ್ಲ ಜೀವಿಗಳಿಗೆ ಜೀವನಾಧಾರ. ಈಗೀಗ ಆಧುನೀಕರಣ ಹೆಚ್ಚಾದಂತೆಲ್ಲ ಗಿಡ-ಮರಗಳನ್ನು ಹಿಂದೆ-ಮುಂದೆ ನೋಡದೇ ಕಡೆಯಲಾಗುತ್ತದೆ. ಹಿಂದೊಮ್ಮೆ ಹಸಿರು ಗಿಡಮರಗಳಿಂದ ಹಚ್ಚ ಹಸಿರಾಗಿ ಕಂಗೊಳಿಸುತ್ತಿದ್ದ ಜಗತ್ತು ಇಂದು ಬರಿದಾಗುತ್ತಿದೆ. ಕಾಂಕ್ರೀಟು ಕಾಡು ನಿರ್‍ಮಾಣವಾಗುತ್ತಿದೆ. ಇತ್ತ ಸಸ್ಯಗಳನ್ನು ಬೆಳೆಸುವುದೂ ಸಾಧ್ಯವಾಗುತ್ತಿಲ್ಲ. ಇದೇ ಗತಿಯು ಮುಂದುವರಿದಲ್ಲಿ ಜೀವಿಗಳಿಗೆ ಸಂಚಕಾರ ಒದಗಬಹುದು. ಪರಿಸರದಲ್ಲಿ ಗಿಡಮರಗಳು ಎಷ್ಟು ಮಹತ್ತರವಾದ ಕಾರ್‍ಯ ಮಾಡುತ್ತವೆಂದರೆ ಜಗತ್ತಿನ ಎಲ್ಲ ಗಿಡ-ಮರಗಳನ್ನು ಕಡಿದು ಹಾಕಿದರೆ ಯಾವೊಂದು ಜೀವಿಯೂ ಬದುಕದು!

ಪರಿಸರ ಮಾಲಿನ್ಯ ದಿನದಿಂದ-ದಿನಕ್ಕೆ ಹೆಚ್ಚಾಗುತ್ತಿದೆ. ಜಗತ್ತಿನ ಎಲ್ಲ ನದಿಗಳ ದಂಡೆಯ ಮೇಲೆ ವಿಷ ಉಗುಳುವ ಕಾರ್‍ಖಾನೆಗಳು ತಲೆಯೆತ್ತಿ ನಿಂತಿವೆ. ಅವು ರಾಸಾಯನಿಕವನ್ನು ತಯಾರಿಸುತ್ತ ವಿಷಯುಕ್ತವಾದ ಕಲ್ಮಶಗಳನ್ನು ನೀರಿಗೆ ಹಾಕುತ್ತವೆ. ಇದರಿಂದ ಜಲ ಮಾಲಿನ್ಯವಾಗಿ ಕುಡಿಯಲು ಅಯೋಗ್ಯವಾಗುತ್ತಿದೆ. ಅದರಿಂದ ಚರ್‍ಮ ರೋಗಗಳು ಅಷ್ಟೇ ಅಲ್ಲ ಕ್ಯಾನ್ಸರ್‍ ನಂತಹ ಭಯಂಕರ ರೋಗಗಳು ಹರಡುತ್ತವೆ. ಇದೇ ಕಲ್ಮಶ ನೀರು ಭೂಮಿಯ ಆಳಕ್ಕೆ ಇಳಿದು ಪಾತಾಳಕ್ಕೆ ಸೇರುತ್ತಿದ್ದು ಅದನ್ನೇ ನಾವು ಕುಡಿಯಲು, ಮತ್ತಿತರೆ ಕೆಲಸಗಳಿಗೆ ಬಳಸುತ್ತಿದ್ದೇವೆ. ಹೀಗಾಗಿ ಅಂತರ್‍ಜಲ ಕಲುಷಿತವಾಗಿ ನಾವು ಕುಡಿಯುವ ನೀರು ವಿಷವಾಗುತ್ತಿದೆ.

ದಿನದಿಂದ ದಿನಕ್ಕೆ ಹೊಸ ವಾಹನಗಳು ಆವಿಷ್ಕಾರವಾಗಿ ರಸ್ತೆಗಿಳಿಯುತ್ತವೆ. ಈ ಎಲ್ಲ ವಾಹನಗಳು ಕಾರ್‍ಬನ್ ಮೊನಾಕ್ಸೈಡ್ ನಂತಹ ವಿಷಕಾರಿ ಅನಿಲಗಳನ್ನು ಉಗುಳುತ್ತವೆ. ಲಕ್ಷೋಪಲಕ್ಷ ಕಾರ್‍ಖಾನೆಗಳೂ ಕೈ ಮಿಲಾಯಿಸಿವೆ. ಈ ಅನಿಲಗಳು ವಾತಾವರಣವನ್ನು ವಿಷಮಯವಾಗಿಸಿ ಜೀವಿಗಳ ಜೀವನಕ್ಕೆ ಸಂಚಕಾರವಾಗಿದೆ.

ವಾತಾವರಣದಲ್ಲಿ, ಕಾರ್‍ಬನ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚಾಗುತ್ತಿದೆ. ಅದನ್ನು ಹೀರಿಕೊಂಡು ಬೆಳೆಯುವ ಗಿಡ ಮರಗಳನ್ನು ನಾಶಪಡಿಸುತ್ತಿದ್ದೇವೆ. ಹಾಗಾಗಿ ಕಾರ್‍ಬನ್ ಡೈ ಆಕ್ಸೈಡ್ ಪ್ರಮಾಣ ವಾತಾವರಣದಲ್ಲಿ ಹೆಚ್ಚಾಗುತ್ತಿದೆ. ಇದು ಹಸಿರುಮನೆ ಪರಿಣಾಮಕ್ಕೆ ಕಾರಣವಾಗಿದೆ. ಇದು ಸೂರ್‍ಯನ ಶಾಖವು ಭೂಮಿಗೆ ಬರಲು ಮಾತ್ರ ನೆರವಾಗಿ, ಭೂಮಿಯಿಂದ ಹೆಚ್ಚಾದ ಶಾಖವನ್ನು ಚದುರಿ ಹೋಗಲು ಬಿಡುವುದಿಲ್ಲ. ಹಾಗಾಗಿ ಭೂಮಿಯ ಉಷ್ಣತೆ ವರುಷದಿಂದ ವರುಷಕ್ಕೆ ಹೆಚ್ಚುತ್ತಿದೆ. ಪ್ರತಿ ವರುಷ ಭೂಮಿಯ ಉಷ್ಣತೆ ೧.೫ ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುತ್ತಿದೆ. ಇದೆಲ್ಲ ವಾಯು ಮಾಲಿನ್ಯದ ಕೊಡುಗೆಯೇ ಸರಿ.

ವಾಯುವಿನ ಒಂದು ರೂಪವಾದ ‘ಓಜೋನ್’ ನೆಲದಿಂದ ೧೫ ಕಿ.ಮೀ. ದಿಂದ ೫೦ ಕಿ.ಮೀ ಅಂತರ ವರೆಗಿನ ವಾಯು ಮಂಡಲದಲ್ಲಿ ವಿರಳವಾಗಿ ಹರಡಿದೆ. ಇದು ಭೂ ಮಂಡಲದ ಸಕಲ ಜೀವರಾಶಿಗಳಿಗೆ ರಕ್ಷಾ ಕವಚವಾಗಿದೆ. ಸೂರ್‍ಯನ ಸುರಕ್ಷಿತ ಭಾಗ ಮಾತ್ರ ಭೂಮಿಗೆ ತಲುಪುವಂತೆ ಮಾಡಿ ಅಸುರಕ್ಷಿತವಾದ ಅಲ್ಟ್ರಾವಯೊಲೆಟ್ ಕಿರಣಗಳನ್ನು ಚದುರಿಹೋಗುವಂತೆ ಮಾಡುತ್ತದೆ. ಆದರೆ ವಾಯು ಮಾಲಿನ್ಯದಿಂದ ಬಿಡುಗಡೆಯಾಗುತ್ತಿರುವ ನೈಟ್ರಸ್ ಆಕ್ಸೈಡ್ ಮತ್ತು ಇಂಗಾಲದ ಡೈ ಆಕ್ಸೈಡ್ ಮತ್ತು ಕಂಪ್ಯೂಟರ್‍, ಏರ್‍ ಕಂಡೀಷ್ನರ್‌ಗಳು, ರೆಫ್ರೀಜರೇಟರ್‍ ಮತ್ತು ಸೆಂಟ್ ಬಾಟಲ್‌ಗಳಿಂದ ಕ್ಲೋರೋಪ್ಲೋರೋ ಕಾರ್‍ಬನ್ ಬಿಡುಗಡೆಯಾಗುತ್ತಿದೆ. ಇವು ಓಜೋನ್ ಪದರನ್ನು ನುಂಗಿ ಹಾಕುತ್ತವೆ. ಹೀಗಾಗಿ ಓಜೋನ್ ಪದರು ನಾಶವಾಗುತ್ತಿದೆ. ಇಲ್ಲವೇ ಕೆಲವು ಕಡೆ ತೆಳ್ಳಗಾಗುತ್ತ ನಡೆದಿದೆ. ಇದರಿಂದ ಅಲ್ಟ್ರಾವಯೊಲೆಟ್ ಕಿರಣಗಳು ಭೂಮಿಗೆ ಬಂದು ಕ್ಯಾನ್ಸರನಂತರ ಭಯಂಕರ ರೋಗಗಳು ಹರಡಬಹುದು. ಶಬ್ದ ಮಾಲಿನ್ಯವಂತೂ ಹೇಳತೀರದು. ನಮ್ಮಲ್ಲಿ ಯಾವುದಾದರೂ ಸಭೆ-ಸಮಾರಂಭವಿದ್ದರೆ ಸಾಕು ಮೈಕಾಸುರನ ಹಾವಳಿ ತಪ್ಪಿದ್ದಲ್ಲ. ಶಬ್ದ ಮಾಲಿನ್ಯದಿಂದ ಮನುಷ್ಯನ ಹೃದಯ ಮತ್ತು ಮೆದುಳುಗಳಲ್ಲಿ ವಿಪರೀತ ಏರಿಳಿತಗಳುಂಟಾಗುತ್ತದೆ. ಕಿವುಡತನವೂ ಸಂಭವಿಸಬಹುದು.

ಜಗತ್ತಿನ ಜನಸಂಖ್ಯೆ ತೀವ್ರತರದಲ್ಲಿ ಏರುತ್ತಿದೆ. ನಿಮಿಷಕ್ಕೆ ೧೬೦ ರಂತೆ, ಪ್ರತಿದಿನ ೨೨೦,೦೦೦ ಮತ್ತು ವರ್‍ಷಕ್ಕೆ ೮೦ ಮಿಲಿಯನ್ ಜನಸಂಖ್ಯೆ ಹೆಚ್ಚಾಗುತ್ತಿದೆ. ಇದೇ ಗತಿಯಲ್ಲಿ ಜನಸಂಖ್ಯೆ ಮುಂದುವರಿದಲ್ಲಿ ಆಹಾರ, ವಸತಿ ಮುಂತಾದ ಸಮಸ್ಯೆಗಳು ತೀವ್ರತರದಲ್ಲಿ ಎದುರಾಗಬಹುದು.

ಪರಿಸರದ ಉಳಿವು ನಮ್ಮ ಉಳಿವು ಮತ್ತು ಪರಿಸರದ ಅಳಿವು ನಮ್ಮ ಅಳಿವು. ಪರಿಸರ ಮತ್ತು ಪರಿಸರ ಮಾಲಿನ್ಯದ ಕುರಿತು ಜಾಗೃತಿ ಮಾಡಬೇಕು. ಎಲ್ಲರೂ ಒಂದಾಗಿ ಪರಿಸರದ ನೈರ್‍ಮಲ್ಯ ಕಾಪಾಡುವ ನಿಟ್ಟಿನಲ್ಲಿ ಹೋರಾಡಬೇಕು. ಪರಿಸರ ಮಾಲಿನ್ಯದ ವಿರುದ್ಧ ಹೋರಾಟ ನಡೆಯಬೇಕು. ಎಲ್ಲ ನಾಗರಿಕರು, ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಮುಂದಾಗಬೇಕು. ಆಗಲೇ ಪರಿಸರದ ಸ್ಥಿತಿ ಸ್ವಲ್ಪವಾದರೂ ಸುಧಾರಿಸೀತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಗಿಲು
Next post ಒಡತಿ

ಸಣ್ಣ ಕತೆ

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ಮನೆ “ಮಗಳು” ಗರ್ಭಿಣಿಯಾದಾಗ

  ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

 • ನಿರಾಳ

  ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

 • ಮನೆಮನೆಯ ಸಮಾಚಾರ

  ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys