ಮಾನಸ ಸರೋವರದ ಚಂದ್ರಶೇಖರ

ಮಾನಸ ಸರೋವರದ ಚಂದ್ರಶೇಖರ

ಚಿತ್ರ ಸೆಲೆ:ಜ್ಞಾನೇಶ್ವರ.ಬ್ಲಾಗ್ಸ್ಪಾಟ್.ಇನ್
ಚಿತ್ರ ಸೆಲೆ: ಜ್ಞಾನೇಶ್ವರ.ಬ್ಲಾಗ್ಸ್ಪಾಟ್.ಇನ್

ರಾಜಕಾರಣಕ್ಕೆ ಕಾಲಿಟ್ಟು ಇಪ್ಪತ್ತೈದು ವರ್ಷ ; ಬೆಳ್ಳಿಹಬ್ಬದ ಆಚರಣೆ.
ಮಠಾಧಿಪತಿಯಾಗಿ ಹತ್ತು ವರ್ಷ ; ದಶಮಾನೋತ್ಸವ ಆಚರಣೆ.
-ಇಂಥ ಆಚರಣೆ ವರ್ಷದಲ್ಲಿ ಆಗಾಗ ಜರುಗುತ್ತಲೇ ಇರುತ್ತವೆ; ಪತ್ರಿಕೆಗಳು ದೊಡ್ಡದಾಗಿ ಪ್ರಕಟಿಸುತ್ತಲೂ ಇರುತ್ತವೆ ಆದರೆ, ವೈದ್ಯರೊಬ್ಬರ, ಅದರಲ್ಲೂ ಸರ್ಕಾರಿ ವೈದ್ಯರ ವೃತ್ತಿಜೀವನದ ಬೆಳ್ಳಿ ಹಬ್ಬವನ್ನು ಅಭಿಮಾನಿಗಳು ವಿಜೃಂಭಣೆಯಿಂದ ಆಚರಿಸುತ್ತಾರೆಂದರೆ..!
-ಜನರ ಈ ಪರಿಯ ಪ್ರೀತಿಗೆ ಪಾತ್ರವಾದ ವ್ಯಕ್ತಿ – ಡಾ| ಸಿ.ಆರ್.ಚಂದ್ರಶೇಖರ್!

ಬೆಳ್ಳಿಹಬ್ಬದ ಕಾರ್ಯಕ್ರಮ ನಡೆದಿದ್ದು – ಫೆ. ೨೪, ೨೦೦೨ ರ ಭಾನುವಾರ. ಯವನಿಕಾ ಸಭಾಂಗಣದಲ್ಲಿ ನವಕರ್ನಾಟಖ ಪ್ರಕಾಶನದ ಆತಿಥ್ಯದಲ್ಲಿ ನಡೆದ ಈ ಸಮಾರಂಭದಲ್ಲಿ ಡಾ| ಸಿ.ಆರ್ ಚಂದ್ರಶೇಖರ್ ಅವರ ನೂರನೇ ಕನ್ನಡ ಪುಸ್ತಕ ‘ಹಿತ-ಆಹಿತ’ ಹಾಗೂ ಅವರ ಸಮಗ್ರ ಕೃತಿಗಳನ್ನು ಪರಿಚಯಿಸುವ ಕೃತಿ ‘ಕೃತಿ ಪರಿಚಯ’ ಬಿಡುಗಡೆ ಯಾದವು.

ಯಾರೀ ಚಂದ್ರಶೇಖರ್?

ದೇಶ ವಿದೇಶದ ನಿಯತಕಾಲಿಕೆಗಳಲ್ಲಿ ಸುಮಾರು ೯೦೦ ಲೇಖನ ಪ್ರಕಟ. ಒಟ್ಟು ೧೩೫ ಪುಸ್ತಕ, ಕನ್ನಡದಲ್ಲಿ ೧೦೦. ಆವರ ಕೃತಿಗಳ ಒಟ್ಟು ೭ ಲಕ್ಷ ಪ್ರತಿಗಳು ಮಾರಾಟವಾಗಿವೆ. ಚಂದ್ರಶೇಖರ್ ಅವರನ್ನು ಪರಿಚಯಿಸಲಿಕ್ಕೆ ಇಷ್ಟು ಸಾಕು. ಈ ಆಂಕಿ ಆಂಶಗಳನ್ನು ನೋಡಿದರೆ, ಚಂದ್ರಶೇಖರ್ ಪಕ್ಕಾ ವೃತ್ತಿಪರ ಬರಹಗಾರರಾಗಿ ಕಾಣುತ್ತಾರೆ. ಇಷ್ಟೇ ಆಗಿದ್ದಲ್ಲಿ ಜನ ಅವರನ್ನು. ಹಾಡಿ ಹೆರಿಸಬೇಕಿರಲಿಲ್ಲ; ಮೊದಲಿಗೆ ಅವರೊಬ್ಬ ಜನಪ್ರಿಯ ವೈದ್ಯ. ಆನಂತರ ಅಧ್ಯಾಪಕ – ಉಳಿದ ಸಮಯ ಅಧ್ಯಯನ. ಬರವಣಿಗೆಗೆ.

ಯಾರು ತಮ್ಮ ಅಳಲು ತೋಡಿಕೊಂಡು ಪತ್ರ ಬರೆದರೂ ಸಿ‌ಆರ್‌ಸಿ ಉತ್ತರಿಸುತ್ತಾರೆ. ಸಲಹೆ- ಸಮಾಧಾನ ಸೂಚಿಸುತ್ತಾರೆ. ರಾಜ್ಯದ ವಿವಿಧ ಭಾಗಗಳ ಸಾವಿರಾರು ಮಂದಿ ಸಿ‌ಆರ್‌ಸಿ ಮಾತುಗಳಲ್ಲಿ ಸಾಂತ್ವನ ಕಂಡಿದ್ದಾರೆ. ಇನ್ನೇನು ಬೇಕು, ಜನರ ಮನದಂಗಳದಲ್ಲಿ ಹಸಿರಾಗಿ ನಿಲ್ಲಲು. ನಿಮ್ಹಾನ್ಸ್‌‌ನಲ್ಲಿ ಮಾತ್ರ ಕೆಲಸ. ಅವರು ಖಾಸಗಿ ಪ್ರಾಕ್ಟೀಸ್ ಮಾಡುವ ಸರ್ಕಾರಿ ಡಾಕ್ಟರ್ ಜಾತಿಗೆ ಸೇರಿದವರಲ್ಲ.

‘ಊಟಕ್ಕ ಕುಂಡ್ರಕ ಟೈಮಿಲ್ಲ ಮನಗಾಕ ಟೈಮಿಲ್ಲ ಆದಾಕೀನ ಮೋರಿ ನೋಡಾಕ ಟೈಮಿಲ್ಲ ಆದ್ರೂ ಇಷ್ಟೊಂದು ಪುಸ್ತಕ ಬರದಾನ ಅಂದ್ರ ಈ ಚಂದ್ರಶೇಖರಗ ಕೆಲಸ ಅಯ್ತೋ ಇಲ್ಲ’  ಎಂದು ಡಾ. ಚಂದ್ರಶೇಖರ್ ಸಾಧನೆಯ ಬಗ್ಗೆ ವಿಸ್ಮಯ ವ್ಯಕ್ತಪಡಿಸುತ್ತ ಛೇಡಿಸುತ್ತಾರೆ ಡಾ|ಎಸ್.ಜೆ.ನಾಗಲೋಟಮಠ, ಅವರು ಕನ್ನಡದ ಮತ್ತೊಬ್ಬ ಜನಪ್ರಿಯ ವೈದ್ಯ ಲೇಖಕ!

ಮನೋವಿಜ್ಞಾನ ಕ್ಷೇತ್ರ ಕನ್ನಡದಲ್ಲಿ ಹುಲುಸು. ಈ ಸುಗ್ಗಿಯ ಹಿಂದಿನ ಸಿರಿ ಡಾ|ಸಿ‌ಆರ್‌ಸಿ. ಅವರು ತಾವು ಮಾತ್ರ ಬರೆಯಲಿಲ್ಲ, ಇತರರನ್ನೂ ಬೆನ್ನುತಟ್ಟಿ ಬರೆಸಿದರು. ಡಾ.ಅಶೋಕ ಪೈ, ಡಾ.ಶ್ರೀಧರ್, ಪ್ರೊ.ಸಶ್ಯನಾರಾಯಣ ರಾವ್ ಇವರೆಲ್ಲ ಬೆಳೆದದ್ದು ಸಿ‌ಆರ್‌ಸಿ ಗರಡಿಯಲ್ಲಿ. ಆ ಕಾರಣದಿಂದಾಗಿಯೇ ಇವತ್ತು ೧೦೦ಕ್ಕೂ ಹೆಚ್ಚು ಮನೋ ವೈದ್ಯರು ಕನ್ನಡದಲ್ಲಿ ಬರೆಯುತ್ತಿದ್ದಾರೆ.

ನಿಜವಾದ ಆರ್ಥದಲ್ಲಿ ಡಾ| ರಾ. ಶಿವರಾಂ ಹಾಗೂ ತ್ರಿವೇಣಿ ಮಾರ್ಗದ ಮುಂದುವರಿದ ಕೊಂಡಿ ಡಾ|ಸಿ‌ಆರ್‌ಸಿ. ತ್ರಿವೇಣಿಯ ‘ಮುಚ್ಚಿದ ಬಾಗಿಲು’ ಹಾಗೂ ರಾಶಿ ಅವರ ‘ಮನೋನಂದನ’  ಸಿ‌ಆರ್‌ಸಿಗೆ ಅಚ್ಚುಮೆಚ್ಚು. ವೈದ್ಯ ಸಾಹಿತ್ಯ ಪರಿಷತ್ತಿಗೆ ಪುನಶ್ಚೇತನ. ಶಾಲಾ- ಕಾಲೇಜು ವಿದ್ಯಾರ್ಥಿಗಳಲ್ಲಿ ಪುಸ್ತಕ ಆಭಿರುಚಿ ಬಿತ್ತನೆ, ಕಾಲೇಜುಗಳಲ್ಲಿ ಆಪ್ತ ಸಲಹಾ ಕೇಂದ್ರಗಳ ಸ್ಥಾಪನೆ- ಹೀಗೆ- ಸಿ‌ಆರ್‌ಸಿ ಸಾಧನೆ ಒಂದೆರಡಲ್ಲ.

ಮದುವೆಯಾದ ಇಪ್ಪತ್ತೈರು ವರ್ಷಗಳಲ್ಲಿ ನಾನು ನನ್ನ ಹೆಂಡತಿ ಒಮ್ಮೆಯೂ ಜಗಳವಾಡಿಲ್ಲ ಎಂದು  ‘ಹಿತ-ಆಹಿತ’ ದಲ್ಲಿ ಹೇಳುತ್ತಾರೆ ಸಿ‌ಆರ್‌ಸಿ. ಗಂಡನಿಗೆ ತಕ್ಕ ಹೆಂಡತಿ ರಾಜೇಶ್ವರಿ.  ಅವರು ಟೈಪಿಂಗ್, ಕಸೂತಿ, ಸಂಗೀತಗಳಲ್ಲಿ ಕುಶಲಿ. ಸಿ‌ಆರ್‌ಸಿ ಸಾಧನೆಯಲ್ಲಿ ಅರ್ಧಭಾಗ ಹೆತ್ತವೆರು ಹಾಗೂ ಪತ್ನಿಗೆ ಸಲ್ಲಬೇಕೆನ್ನುವುದು ನಾಗಲೋಟಿಮಠರ್‍ಅ ಅಭಿಮತ.

ಡಾ| ಚನ್ನಪಟ್ಟಣ ರಾಜಣ್ಣಾಚಾರ್ ಚಂದ್ರಶೇಖರ್ ಜನಿಸಿದ್ದು ೧೨, ಡಿಸೆಂಬರ್ ೧೯೪೮ ರಂದು. ಅಪ್ಪ ರಾಜಣ್ಣಾಚಾರ್, ಅಮ್ಮ ಸರೋಜಮ್ಮ ಹತ್ತನೇ ಇಯತ್ತೆ  ಕ್ಲಾಸ್‌ನಲ್ಲಿ ಪಾಸು ಮಾಡಿದರೂ, ಮನೆಯ ಕಷ್ಟ ಅರಿತು ಅಪ್ಪನ ಮುದ್ರಣಾಲಯದೊಳಗೆ ಮಸಿ ಹಚ್ಚಿಕೊಳ್ಳಲು ಚಂದ್ರಶೇಖರ್ ತೊಡಗಿದರು. ಪುಸ್ತಕದ ಗುಂಗು ಹತ್ತಿದ್ದೇ ಆಗ.

ಪುಸ್ತಕಗಳಿಗೆ ರಟ್ಟು ಕಟ್ಟುತ್ತಾ ವಿಜ್ಞಾನದ ಬಗ್ಗೆ ಆಸಕ್ತಿ ಕುದುರಿಸಿಕೊಂಡ ಹುಡುಗ- ಮೈಕಲ್‍ಫ್ಯಾರಡೆ ನಂತರದ ದಿನಗಳಲ್ಲಿ ಜಗದ್ದ್ವಿಖ್ಯಾತ ವಿಜ್ಞಾನಿಯಾದಂತೆ, ಸಿ‌ಆರ್‌ಸಿಗೂ ಮುದ್ರಣಾಲಯವೇ ಭೋಧಿವೃಕ್ಷವಾಯಿತು. ಶಿಕ್ಷಕರ ಒತ್ತಾಸೆಯ ಮೇರೆಗೆ ಕಾಲೇಜು ಮೆಟ್ಟಿದ ಸಿ‌ಆರ್‌ಸಿ ಮುಟ್ಟಿದ್ದು ಬೇರು ಬಿಟ್ಟಿದ್ದು- ನಿಮಾನ್ಸ್‌ನ ಅಂಗಳದಲ್ಲಿ.

‘ಮಿತಿ ಎಂದರೆ ಹಿತ- ಮೀರಿದರೆ ಆಹಿತ’  ಎನ್ನುವುದು ಸಿ‌ಆರ್‌ಸಿ ಸಿದ್ಧಾಂತ! ನಾವು ದೇಹದ ಶುಚಿಯ ಬಗ್ಗೆ ಕಾಳಜಿ ವಹಿಸುತ್ತೇವೆ. ಮನಸ್ಸೆಂದರೆ ಅಸಡ್ಡೆ ದೈಹಿಖ ಸುಖಕ್ಕಾಗಿ ಅದನ್ನು ಘಾಸಿಗೊಳಿಸುತೇವೆ, ಶಿಕ್ಷಿಸುತ್ತೇವೆ. ಪ್ರತಿಶತ ೮೦ರಷ್ಟು ಕಾಯಿಲೆ ಮನಸ್ಸಿಗೆ ಸಂಬಂಧಿಸಿದವು. ಮನಸ್ಸು ಚೆನ್ನಾಗಿದ್ದರೆ ದೇಹ ಚೆನ್ನಾಗಿದ್ದಂತೆಯೇ ಎನ್ನುತ್ತಾರೆ ಈ ಮಾನಸ ಸರೋವರದ ಶಾಂತಿದೂತ. ಪ್ರತಿಶಾಲೆ. ಕಾಲೇಜು, ಪ್ರತಿ ಆಸ್ತತ್ರೆಯಲ್ಲೂ, ವೈದ್ಯಕೀಯ ಸಾಹಿತ್ಯ ಜನರಿಗೆ ಸಿಗುವಂತಿರಬೇಕು ಎಂಬುದವರ ಕನಸು. ವೈದ್ಯಕೀಯ ಸಾಹಿತ್ಯವನ್ನು ಸಾಹಿತ್ಯದ ಮುಖ್ಯ ವಾಹಿನಿಯಿಂದ ದೂರವಿಡಲಾಗಿದೆ ಎನ್ನುವುದವರ ಕೊರಗು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉತ್ಸವ
Next post ಸ್ವಾತಂತ್ರ್ಯ ಬಂದಿದೆ

ಸಣ್ಣ ಕತೆ

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

 • ಕಲಾವಿದ

  "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

 • ದೇವರು

  ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

 • ಧರ್ಮಸಂಸ್ಥಾಪನಾರ್ಥಾಯ

  ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

 • ಬಾಗಿಲು ತೆರೆದಿತ್ತು

  ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…